ಹೆಬ್ಬಾಡಿ ದೇವಾಲಯಗಳಲ್ಲಿ ಕಳ್ಳತನ

ಶ್ರೀರಂಗಪಟ್ಟಣ : ತಾಲೂಕಿನ ಹೆಬ್ಬಾಡಿ ಗ್ರಾಮದ ದೇವಾಲಯಗಳ ಬೀಗಮುರಿದು ಕಳ್ಳತನ.

ಗ್ರಾಮದ ಸಿದ್ದರಾಮೇಶ್ವರ, ಚೌಡೇಶ್ವರಿ ದೇವಾಲಯಗಳಿಗೆ ಬುಧವಾರ ರಾತ್ರಿ ನುಗ್ಗಿರುವ ಕಳ್ಳರು ದೇವರ ತಾಳಿ, ಚಿನ್ನಾಭರಣ, ಹುಂಡಿ ಹಣ ದೋಚಿ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ಭೇಟಿ, ಪರಿಶೀಲನೆ ನಡೆಸಿದ್ದು, ಇನ್ನು ಪ್ರಕರಣ ದಾಖಲಾಗಿಲ್ಲ.