More

  ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್​ ಇನ್ನಿಲ್ಲ

  ಬೆಂಗಳೂರು: ಖ್ಯಾತ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್​ (81) ಬುಧವಾರ ಬಳ್ಳಾರಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ಧಾರೆ. ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಾಧಿತರಾಗಿದ್ದರು.

  ಬಳ್ಳಾರಿಯ ರೇಡಿಯೋ ಪಾರ್ಕ್​ ಪ್ರದೇಶದಲ್ಲಿರುವ ಮನೆಯಲ್ಲಿ ರಾತ್ರಿ 11.30ರಲ್ಲಿ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ವಿಮ್ಸ್​ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

  ಇದನ್ನೂ ಓದಿ: 10 ವರ್ಷದ ಬಾಲಕ 30 ಸೆಕೆಂಡ್​ಗಳಲ್ಲಿ ಎಗರಿಸಿದ್ದು ಎಷ್ಟು ಲಕ್ಷ ರೂ. ಗೊತ್ತಾ?

  ಹಲವು ವರ್ಷಗಳ ಹಿಂದೆ ಇವರ ಪತಿ ಲಿಂಗರಾಜ ಮನ್ಸೂರ್​ ನಿಧನರಾಗಿದ್ದರು. ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಇವರು ಅಗಲಿದ್ದಾರೆ.

  ಪ್ರಶಸ್ತಿಗಳು ಹಲವು: ಸುದೀರ್ಘ ಕಾಲ ರಂಗಭೂಮಿ ಸೇವೆ ಸಲ್ಲಿಸಿದ್ದ ಸುಭದ್ರಮ್ಮ ಮನ್ಸೂರ್​ ಅವರನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಒಲಿದು ಬಂದಿದ್ದವು. ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿ ಇನ್ನೂ ಹಲವು ಪ್ರಶಸ್ತಿಗಳಲ್ಲದೆ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್​ ಅನ್ನೂ ಪಡೆದುಕೊಂಡಿದ್ದರು.

  ಸಿಬಿಎಸ್​ಇ ರಿಸಲ್ಟ್, ಬೆಂಗಳೂರಿಗೆ 3ನೇ ಸ್ಥಾನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts