More

  ರಂಗಭೂಮಿ ಕಲೆಗೆ ಪ್ರೋತ್ಸಾಹ ಅಗತ್ಯ

  ಅಳವಂಡಿ: ನಾಟಕ, ಬಯಲಾಟ ಮುಂತಾದ ರಂಗ ಕಲೆಗಳ ಪ್ರದರ್ಶನ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರಲ್ಲಿ ಬಾಂಧವ್ಯ ಗಟ್ಟಿಗೊಳಿಸಲು ಸಹಕಾರಿಯಾಗಿವೆ ಎಂದು ಮಾಜಿ ತಾಪಂ ಸದಸ್ಯ ಬಸವರಾಜ ಬಂಡಿ ಹೇಳಿದರು.

  ಇದನ್ನೂ ಓದಿ: ಶಿಕ್ಷಣದಲ್ಲಿ ರಂಗಭೂಮಿ ಮಾದರಿ ಪಠ್ಯ ಅಳವಡಿಕೆ ಸೂಕ್ತ: ಮಂಡ್ಯ ರಮೇಶ್ ಅಭಿಮತ

  ಸಮೀಪದ ನೀರಲಗಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ನಾಟ್ಯ ಸಂಘದಿಂದ ಪ್ರದರ್ಶನಗೊಂಡ ‘ಮರೆತರೆ ನಿನ್ನ ಮರೆವೇನು ನನ್ನ’ ಅರ್ಥಾತ್-ಯಾರ ಹೂವು ಯಾರ ಮುಡಿಗೋ ಎಂಬ ಸಾಮಾಜಿಕ ನಾಟಕಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.

  ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಕಲೆ ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿವೆ. ಯುವ ಜನತೆ ರಂಗ ಕಲೆ ಬಗ್ಗೆ ಆಸಕ್ತಿ ವಹಿಸಿ ಉಳಿಸಿ ಬೆಳೆಸಬೇಕು. ನಾಟಕಗಳ ಪ್ರದರ್ಶನದಲ್ಲಿ ತಿಂಗಳುಗಟ್ಟಲೇ ಶ್ರಮ ಇದೆ. ಇಂತಹ ಕಲೆಗೆ ಜನರ ಪ್ರೋತ್ಸಾಹ ಸಿಕ್ಕರೆ ಎಲೆ ಮರೆ ಕಾಯಿಯಂತೆ ಇರುವ ಪ್ರತಿಭೆಗಳು ಹೊರ ಬರಲು ಸಾಧ್ಯವಾಗುತ್ತದೆ ಎಂದರು.

  ಪ್ರಮುಖರಾದ ನಿಂಗಪ್ಪ, ಅಂದಾನಯ್ಯ, ಅಂದಪ್ಪ, ಕೊಟ್ರಪ್ಪ, ಮುತ್ತಪ್ಪ, ವೀರೇಶ ಹಾಲಗುಂದಿ, ಮಹಾದೇವಪ್ಪ, ಸಂತೋಷ, ವಸಂತ, ಪುನೀತ್, ಗವಿಸಿದ್ದಪ್ಪ, ಬಸವರಾಜ, ಮಹೇಶ ತಳವಾರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts