ಗೋಕಾಕ: ವ್ಯಸನಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಿ, ಸನ್ಮಾರ್ಗಕ್ಕೆ ತರುವ ಮೂಲಕ ಅವರ ಕುಟುಂಬ ರಕ್ಷಣೆ ಮಾಡುವ ಧರ್ಮಸ್ಥಳ ಯೋಜನೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಇಲ್ಲಿನ ಜ್ಞಾನ ಮಂದಿರದ ಧರ್ಮದರ್ಶಿ ಸುವರ್ಣಾ ಹೊಸಮಠ ಹೇಳಿದರು.
ನಗರದ ಜ್ಞಾನ ಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗತ ವೇದಿಕೆ, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ನಗರಸಭೆ ಮತ್ತು ಶೌರ್ಯ ವಿಪತ್ತು ನಿರ್ವಹಣೆ ಘಟಕ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮದ್ಯ ವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವಪೀಳಿಗೆ ದುಶ್ಚಟಗಳಿಂದ ದೂರವಿದ್ದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ವ್ಯಸನಿಗಳಾಗದೆ ಉದ್ಯೋಗಗಳಲ್ಲಿ ಸಕ್ರಿಯವಾಗಿ ಬದುಕಬೇಕು ಎಂದರು. ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮುಖಂಡರಾದ ಅಶೋಕ ಪೂಜಾರಿ, ಸೋಮಶೇಖರ್ ಮಗದುಮ್ಮ, ನರಸಿಂಹ ಪೂಜಾರಿ, ಸುಭಾಷ ಅನಸಿ, ಡಾ.ರವೀಂದ್ರ ಅಂಟಿನ, ಡಾ.ರಮೇಶ ಪಟಗುಂದಿ, ಎಚ್.ಆರ್. ಲವಕುಮಾರ, ಮಹಾಂತೇಶ ಪೂಜೇರಿ, ವಕೀಲ ಬಿ.ಬಿ.ಬಿರನಗಡ್ಡಿ ಇತರರಿದ್ದರು.