ರೋಣ: ಪಟ್ಟಣದಲ್ಲಿ ಯುವಕರು ಮತ್ತು ಮಕ್ಕಳು ಶನಿವಾರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು.
ಸ್ನೇಹಿತರಿಗೆ ಪರಸ್ಪರ ಬಣ್ಣ ಹಚ್ಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ತಮ್ಮ ಸ್ನೇಹಿತರ ಮನೆಗೆ ತೆರಳಿ ಬಣ್ಣ ಹಚ್ಚಿ ಸಂಭ್ರಮಿಸಿದರು. ಶುಕ್ರವಾರ ಕಾಮ-ರತಿಯರಿಗೆ ವಿಶೇಷ ಪೂಜೆ ಹೋಳಿಗೆ ನೈವೇದ್ಯ ಅರ್ಪಿಸಲಾಯಿತು. ಹಲಗೆಯ ನಾದದೊಂದಿಗೆ ಸಾಂಪ್ರದಾಯಿಕ ಹಾಡುಗಳಿಗೆ ಯುವಕರು ಕುಣಿದು ಸಂಭ್ರಮಿಸಿದರು.
