ಅವಳಿ ಹೆಣ್ಣುಮಕ್ಕಳನ್ನು ಪಡೆದು ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಹಿರಿಯ ದಂಪತಿ ‘ಐಸಿಯು’ನಲ್ಲಿ; ಏನಾಗಿದೆ ಗೊತ್ತಾ ಇವರಿಗೆ…

Latest News

ಕನ್ನಡದಲ್ಲಿ ಇಂಗ್ಲಿಷ್​ ಕಲಿಕೆ: ಇಂದಿನ ಇಂಗ್ಲಿಷ್ ಪದಗಳು

# Impugn (ಇಂಪ್ಯೂನ್) = ಒಬ್ಬರ ಬಗ್ಗೆ ಅವಮಾನವಾಗುವಂತೆ ಟೀಕಿಸು ಅವಳಿಂದ ದೂರವಾಗುವುದಕ್ಕಾಗಿ ಆತ ಜನರಿಗೆ ಅವಳ ನಡತೆಯ ಬಗ್ಗೆ ಅನುಮಾನ ಹುಟ್ಟುವಂತೆ ಟೀಕಿಸಿದ. He...

ಗಗನಯಾನ ಅವಕಾಶ ತಪ್ಪಿಸಿದ ಹಲ್ಲಿನ ಸಮಸ್ಯೆ!

ನವದೆಹಲಿ: ಇಸ್ರೊದ ಮಹಾತ್ಮಾಕಾಂಕ್ಷೆಯ ಮಾನವ ಸಹಿತ ಗಗನಯಾನ ಯೋಜನೆಗೆ ಗಗನಯಾತ್ರಿಗಳಿಗಾಗಿ ವಾಯುಪಡೆ ಪೈಲಟ್​ಗಳಲ್ಲಿ ಆಯ್ಕೆ ಪ್ರಕ್ರಿಯೆ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದೆ. ಇದರಲ್ಲಿ ಪ್ರಮುಖವಾಗಿ...

ದರ್ಶನ್​ಗೆ ನಂಜಿ ಮ್ಯಾಲೆ ಶ್ಯಾನೆ ಲವ್ವು…

ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾದ ಒಂದೊಂದೇ ಹಾಡು ಹೊರಬರುತ್ತಿದ್ದು, ಇದೀಗ ನಾಯಕ-ನಾಯಕಿಯ ಡ್ಯುಯೆಟ್ ಸಾಂಗ್ ಬಿಡುಗಡೆ ಆಗಿದೆ. ‘ಶ್ಯಾನೆ ಲವ್ವಾಗೋಯ್ತಲ್ಲೆ...

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಶೇಕಡಾ 80 ಮತದಾನ, ಹಲವೆಡೆ ಹಿಂಸಾಚಾರ ನಾಳೆ ಫಲಿತಾಂಶ

ಕೊಲಂಬೊ: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಗೆ ಶನಿವಾರ ಮತದಾನ ನಡೆದಿದ್ದು, ಇದು ‘ಟರ್ವಿುನೇಟರ್’ ಗೋತಭಯ ರಾಜಪಕ್ಸೆ ಮತ್ತು ‘ಪ್ಯಾಡ್​ವ್ಯಾನ್’ ಸಜಿತ್ ಪ್ರೇಮದಾಸ ನಡುವಿನ ಮತ...

15 ದಿನಕ್ಕೊಮ್ಮೆ ಮಾತ್ರ ವರ್ಗಾವಣೆ ಕಡತಕ್ಕೆ ಮುಕ್ತಿ: ಸಿಎಂ ಕಚೇರಿಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಬಿಜೆಪಿ ಸರ್ಕಾರ ಬಂದಾಗಿನಿಂದಲೂ ‘ವರ್ಗಾವಣೆ’ ಬಗ್ಗೆ ಹೆಚ್ಚು ಸುದ್ದಿಯಾಗಿದೆ. ಸರ್ಕಾರ ಬದಲಾದ ನಂತರ ವರ್ಗಾವಣೆ ಸಲೀಸೆಂಬುದು ನೌಕರರ ಅಭಿಪ್ರಾಯವಾದರೂ,...

ಹೈದರಾಬಾದ್​: ಇತ್ತೀಚೆಗಷ್ಟೇ ಅವಳಿ ಮಕ್ಕಳನ್ನು ಹೆತ್ತು ವಿಶ್ವದಾದ್ಯಂತ ಸುದ್ದಿಯಾಗಿದ್ದ 74 ವರ್ಷದ ಈರಾಮತ್ತಿ ಮಂಗಾಯಮ್ಮ ಮತ್ತು ಆಕೆಯ ಪತಿ ರಾಜಾರಾವ್​ (80) ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರಿಗೆ ಸಂಬಂಧಪಟ್ಟಂತೆ ದುಃಖದ ಸಂಗತಿಯೊಂದು ಹೊರಬಿದ್ದಿದೆ.

1962ರಲ್ಲಿ ಮದುವೆಯಾಗಿ ಬರೋಬ್ಬರಿ 57 ವರ್ಷಗಳವರೆಗೂ ಮಕ್ಕಳಿಲ್ಲದೆ ಕಳೆದಿದ್ದ ಈ ದಂಪತಿ ಇನ್​ವರ್ಟೋ ಫರ್ಟಿಲೈಷೇಷನ್​ (ಐವಿಎಫ್​) ಮೂಲಕ ಅವಳಿ ಹೆಣ್ಣು ಮಕ್ಕಳನ್ನು ಪಡೆದು ತುಂಬ ಸಂತೋಷದಲ್ಲಿ ಇದ್ದರು. ಈರಾಮತ್ತಿ ಮಂಗಾಯಮ್ಮಗೆ ಸೆಪ್ಟೆಂಬರ್​ 5ರಂದು ಹೆರಿಗೆಯಾಗಿತ್ತು. ಜಗತ್ತಿನ ಅತಿ ಹಿರಿಯ ಪಾಲಕರು ಎಂಬ ಖ್ಯಾತಿಯನ್ನೂ ಹೊಂದಿದ್ದರು.

ಹೆಣ್ಣುಮಕ್ಕಳಿಬ್ಬರೂ ತುಂಬ ಆರೋಗ್ಯವಾಗಿದ್ದರೂ, ನೋವಿನ ಸಂಗತಿಯೆಂದರೆ ಹಿರಿಯರಾದ ಮಂಗಾಯಮ್ಮ ಮತ್ತು ರಾಜಾರಾವ್​ ಇಬ್ಬರೂ ಐಸಿಯುವಿನಲ್ಲಿದ್ದಾರೆ.

ಇಬ್ಬರು ಹೆಣ್ಣುಮಕ್ಕಳು ಹುಟ್ಟಿದ ಮರುದಿನವೇ ರಾಜಾರಾವ್​ ಅವರಿಗೆ ಹೃದಯಾಘಾತ ಆಗಿದ್ದು ಈಗ ಅವರನ್ನು ಆಂಧ್ರಪ್ರದೇಶದ ಆಸ್ಪತ್ರೆಯೊಂದರ ಐಸಿಯುನಲ್ಲಿ ಇಡಲಾಗಿದೆ. ಮಂಗಾಯಮ್ಮ ಅವರಿಗೆ ಸಿಸೇರಿಯನ್​ ಮೂಲಕ ಮಕ್ಕಳನ್ನು ಹೊರಗೆ ತೆಗೆಯಲಾಗಿದೆ. ವಯಸ್ಸು ಜಾಸ್ತಿಯಾಗಿದ್ದರಿಂದ ಚೇತರಿಸಿಕೊಳ್ಳಲು ಸ್ವಲ್ಪ ದಿನ ಬೇಕು. ಅವರಿಗೆ ಐಸಿಯುವಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಮಕ್ಕಳು ಹುಟ್ಟಿದ ಬಳಿಕ ಅತ್ಯಂತ ಸಂತೋಷದಿಂದ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಜಾರಾವ್​, ದೇವರ ದಯೆ ಹಾಗೂ ವೈದ್ಯರ ಸಹಾಯದಿಂದ ನಾನಿಂದು ತಂದೆಯಾಗಿದ್ದೇನೆ. ನನಗೆ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದ್ದಾರೆ. ಭೂಮಿಯ ಮೇಲೆ ಅತ್ಯಂತ ಆನಂದದಿಂದ ಇರುವ ದಂಪತಿ ಯಾರು ಎಂದು ಕೇಳಿದರೆ ಅದು ನಾವೇ ಎನ್ನುತ್ತೇನೆ ಎಂದು ಹೇಳಿದ್ದರು. ಆದರೆ ಮನೆಗೆ ಹೋಗುತ್ತಲೇ ಹೃದಯಾಘಾತವಾಗಿತ್ತು.

ಮಕ್ಕಳಿಬ್ಬರಿಗೂ ಇನ್ನೂ ನಾಮಕರಣವೂ ಆಗಿಲ್ಲ. ಅಪ್ಪ-ಅಮ್ಮ ಇಬ್ಬರೂ ಆಸ್ಪತ್ರೆಯಲ್ಲಿರುವುದರಿಂದ ಕುಟುಂಬದವರೇ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....