ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ರೂ.ವೆಚ್ಚದ ಮೂಲಸೌಕರ್ಯ ಕಲ್ಪಿಸುತ್ತಿರುವ ಶಿಲ್ಪಾ ಫೌಂಡೇಶನ್​ ಕಾರ್ಯ ಶ್ಲಾಘನೀಯ

blank

ಬೆಂಗಳೂರು: ಇಂದಿನ ಡಿಜಿಟಲ್​ ಯುಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಡಿಜಿಟಲ್​ ಆಯಾಮದ ಕಲಿಕೆ ಹೆಚ್ಚು ಅಗತ್ಯವಿದೆ. ಇಂತಹ ಕಾರ್ಯಗಳಲ್ಲಿ ತೊಡಗಿರುವ ಶಿಲ್ಪಾ ಫೌಂಡೇಶನ್​ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಎಲ್​ಕೆ ಕ್ಯೂ ಇಂಡಿಯಾ ಮುಖ್ಯಸ್ಥ ಕಿಶೋರ್​ ಕುಮಾರ್​ ವಾಸುದೇವ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಲ್ಪಾ ಫೌಂಡೇಶನ್​ ಹಾಗೂ ಎಲ್​ಕೆ ಕ್ಯೂ ಇಂಡಿಯಾ ಸಹಯೋಗದೊಂದಿಗೆ ಜೆ.ಪಿ. ನಗರದ ಸರ್ಕಾರಿ ಹಿರಿಯ ಪ್ರೌಢಶಾಲೆ ಪುಟ್ಟೇನಹಳ್ಳಿ ಯಲ್ಲಿ ಆಯೋಜಿಸಿದ್ದ ‘ಶಾಲಾ ಅಭಿವೃದ್ಧಿ ಯೋಜನೆ’ ಕಾರ್ಯಕ್ರಮದಲ್ಲಿ ಶಾಲೆಗೆ ಉಚಿತವಾಗಿ ಪೀಠೋಪಕರಣ, ಕ್ರೀಡಾ ಉಪಕರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಲಕರಣೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆಗಳ ಮಕ್ಕಳು ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ. ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ, ಅವರಿಗೆ ಅಗತ್ಯ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆಯಾಗಲಿ. ಈಗಾಗಲೇ ಎಲ್​ಕೆ ಕ್ಯೂ ಇಂಡಿಯಾ ಸಾಮಾಜಿಕ ಸಹ ಭಾಗಿತ್ವ ಅಡಿಯಲ್ಲಿ ಶಿಲ್ಪಾ ಫೌಂಡೇಶನ್​ ಅಂದಾಜು 15 ಲಕ್ಷ ರೂ.ವೆಚ್ಚದಲ್ಲಿ ಸರ್ಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲು ಮುಂದಾಗಿರುವುದು ಪ್ರಶಂಸನೀಯ ಎಂದರು.

ಪುಟ್ಟೇನಹಳ್ಳಿ ಶಾಲೆ ಮುಖ್ಯೋಪಾಧ್ಯಾಯರ ಬಿ.ವಿ. ಪ್ರತಿಮಾ, ಶಿಲ್ಪಾ ಫೌಂಡೇಶನ್​ ಸಂಸ್ಥೆಯ ಸಂಸ್ಥಾಪಕ ಅಚ್ಯುತ್​​ಗೌಡ, ಜೆ. ಪಿ.ನಗರ ಪೊಲೀಸ್​ ಠಾಣಾಧಿಕಾರಿ ರವಿ ಕುಮಾರ್​, ಎಲ್​ಕೆ ​ಕೆ ಕ್ಯೂ ಇಂಡಿಯಾ ಮಾನವ ಸಂಪನ್ಮೂಲ ನಿರ್ವಾಹಕ ಅವಿನಾಶ್​​ಗೌಡ, ಶಿಲ್ಪಾ ಫೌಂಡೇಶನ್​ ಇಎಸ್​ ಜಿ ಮುಖ್ಯಸ್ಥ ಡಾ.ಸತೀಶ್​ ಬೆಟ್ಟಪ್ಪ, ಶಾಲಾ ಶಿಕರು ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕರ ಬಡ್ತಿ ಅನ್ಯಾಯ ಸರಿಪಡಿಸಲು ಸಮಿತಿ ರಚನೆ:ವಿಧಾನಪರಿಷತ್ತಿಗೆ ಮಧು ಬಂಗಾರಪ್ಪ ಭರವಸೆ

Share This Article

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…

ಮಾವಿನಹಣ್ಣು ತಿಂದು ಈಸಿಯಾಗಿ ದೇಹದ ತೂಕ ಇಳಿಸಬಹುದು! ಹೊಸ ಅಧ್ಯಯನ.. mango

mango: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಮಾವಿನಹಣ್ಣನ್ನು ತಪ್ಪಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ತೂಕ…