21 C
Bengaluru
Thursday, January 23, 2020

ನಾನ್ಹೇಗೆ ಜಡ್ಜ್ ಆದೆ…? ಮಯಂಕ್ ಪ್ರತಾಪ್ ಸಿಂಗ್​​ರ ಮನದಾಳದ ಮಾತುಗಳು

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಜೈಪುರದ 21 ವರ್ಷದ ಮಯಂಕ್ ಪ್ರತಾಪ್ ಸಿಂಗ್ ಈಚೆಗೆ, ರಾಜಸ್ಥಾನ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿ ಟಾಪರ್ ಆಗುವ ಮೂಲಕ ದೇಶದ ಮೊದಲ ಕಿರಿಯ ನ್ಯಾಯಾಧೀಶ ಎನಿಸಿಕೊಂಡಿದ್ದಾರೆ. ಇಂಥ ಅದ್ಭುತ ಸಾಧನೆ ಮಾಡಿರುವ ಹಿಂದಿನ ಶಕ್ತಿಯ ಬಗ್ಗೆ ಅವರ ಬಾಯಿಯಿಂದಲೇ ಕೇಳಿ.

ಚಿಕ್ಕಂದಿನಿಂದಲೇ ನನ್ನ ಗುರಿ ನನಗೆ ಸ್ಪಷ್ಟವಾಗಿತ್ತು. ನ್ಯಾಯಾಂಗವೆಂದರೆ ಏನೋ ಒಂಥರಾ ಆಕರ್ಷಣೆಯಿತ್ತು. ನ್ಯಾಯಾಧೀಶರಿಗೆ ಇರುವ ಗೌರವ ಹಾಗೂ ಅವರ ಮೇಲಿರುವ ಜವಾಬ್ದಾರಿ ಎಲ್ಲವೂ ನನ್ನನ್ನು ಆಕರ್ಷಿಸಿತ್ತು. ಕಾಲೇಜು ಮುಗಿದ ಮೇಲೆ ನೋಡಿಕೊಂಡರಾಯಿತು ಬಿಡು ಎನ್ನದೇ ಮೊದಲಿನಿಂದಲೂ ನನ್ನ ಗುರಿಯತ್ತಲೇ ಚಿತ್ತ ಹರಿಸಿದ್ದೆ.

ಪ್ರೌಢಶಾಲೆ ಮುಗಿದು ಕಾಲೇಜು ಮೆಟ್ಟಿಲೇರುವ ಹೊತ್ತಿಗೆ ನನ್ನ ಬಹುತೇಕ ಕ್ಲಾಸ್​ವೆುೕಟ್​ಗಳು ವಾಟ್ಸ್​ಆಪ್, ಫೇಸ್​ಬುಕ್​ಗಳಲ್ಲಿ ಬಿಜಿಯಾಗಿದ್ದರು. ಆದರೆ ನನಗ್ಯಾಕೋ ಅವುಗಳೆಂದರೆ ಅಲರ್ಜಿ ಎನಿಸುತ್ತಿತ್ತು. ವಾಟ್ಸ್​ಆಪ್, ಫೇಸ್​ಬುಕ್ ಖಾತೆಗಳನ್ನು ನಾನು ತೆರೆಯಲೇ ಇಲ್ಲ. ನನ್ನ ಸ್ನೇಹಿತರೆಲ್ಲಾ ಅದರಲ್ಲಿ ಬರುವ ಸಂದೇಶಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾಗ, ಆ ಕುರಿತು ಕುತೂಹಲ ಎನಿಸುತ್ತಿದ್ದರೂ, ಅದರತ್ತ ಆಕರ್ಷಿತನಾಗಲೇ ಇಲ್ಲ.

ನನ್ನ ಬಳಿ ಈ ಖಾತೆಗಳು ಇಲ್ಲದ್ದನ್ನು ಕಂಡು ಸ್ನೇಹಿತ- ಸ್ನೇಹಿತೆಯರೆಲ್ಲಾ ನನ್ನನ್ನು ಛೇಡಿಸುತ್ತಿದ್ದರು. ಎಷ್ಟೋ ಬಾರಿ ಅದರಲ್ಲಿ ಬಂದಿರುವ ಸುದ್ದಿಗಳ ಬಗ್ಗೆ ಬಹುದೊಡ್ಡ ಚರ್ಚೆಯಾಗುತ್ತಿತ್ತು. ನಾನದನ್ನು ಬಳಸುತ್ತಿಲ್ಲವಾದ್ದರಿಂದ ಆ ವಿಷಯಗಳ ಅರಿವು ನನಗೆ ಇರುತ್ತಿರಲಿಲ್ಲ. ಆದ್ದರಿಂದ ಅವರೆಲ್ಲಾ ನನ್ನನ್ನು ಅಪಹಾಸ್ಯ ಮಾಡುತ್ತಿದ್ದರು. ಇಂದು ಈ ತಾಣಗಳು ಬದುಕಿನ ಅವಿಭಾಜ್ಯ ಅಂಗವಾಗಿರುವುದು ನಿಜವೇ. ಆದರೆ ನನ್ನ ಗುರಿ ನನಗೆ ಸ್ಪಷ್ಟವಾಗಿದ್ದರಿಂದ ಇದಾವುದೂ ಬೇಕು ಎಂದು ಅನಿಸಲೇ ಇಲ್ಲ. ಸ್ನೇಹಿತರು ಅಪಹಾಸ್ಯ ಮಾಡುತ್ತಿದ್ದಾಗ ಮೊದಮೊದಲು ಮುಜುಗರ ಎನಿಸುತ್ತಿತ್ತು. ಆದರೂ ನಗುತ್ತಲೇ ಉತ್ತರಿಸುತ್ತಿದ್ದೆ. ಕೊನೆಗೆ ಅವರ ಮಾತು, ಅಪಹಾಸ್ಯ ಎಲ್ಲದಕ್ಕೂ ನಾನು ಒಗ್ಗಿಹೋದೆ. ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

2014ರಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳ ಎಲ್​ಎಲ್​ಬಿ ಪದವಿಗೆ ಪ್ರವೇಶ ಪಡೆದೆ. ಆಗಲು ಕೂಡ ಸಾಮಾಜಿಕ ಜಾಲತಾಣಗಳ ಸಹವಾಸದಿಂದ ದೂರವೇ ಉಳಿದೆ. ತೀರಾ ಅಗತ್ಯ ಎನಿಸಿದಾಗ ಮಾತ್ರ ಇಂಟರ್​ನೆಟ್​ನಲ್ಲಿ ನನ್ನ ವಿಷಯಕ್ಕೆ ಸಂಬಂಧಿಸಿದ ಹುಡುಕಾಟ ನಡೆಸುತ್ತಿದ್ದೆ. ಇದರಿಂದ ಪದವಿಯನ್ನು ಅತ್ಯಧಿಕ ಅಂಕಗಳೊಂದಿಗೆ ಪೂರ್ಣಗೊಳಿಸಲು ಸಾಧ್ಯವಾಯಿತು. ಓದಿನ ಜತೆ ಒಳ್ಳೊಳ್ಳೆ ಕಾದಂಬರಿ ಓದುವ ಹವ್ಯಾಸಗಳನ್ನೂ ಬೆಳೆಸಿಕೊಂಡಿದ್ದೆ. ನನಗೆ ಸಮಾಜ ಸೇವೆ ಎಂದರೆ ತುಂಬಾ ಇಷ್ಟ.

ಆದ್ದರಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳ ಜತೆ ನಾನೂ ಒಡನಾಟ ಬೆಳೆಸಿದ್ದೆ. ಅಲ್ಲಿಗೆ ಹೋಗಿ ಅವರೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ.

ನನ್ನ ಅದೃಷ್ಟವೋ ಎನ್ನುವಂತೆ, ನ್ಯಾಯಾಂಗದಲ್ಲಿ ಸೇವೆ ಸಲ್ಲಿಸುವುದಕ್ಕೆ ಮೊದಲಿದ್ದ 23 ವರ್ಷದ ವಯೋಮಿತಿಯನ್ನು ರಾಜಸ್ಥಾನ ಸರ್ಕಾರವು ನನ್ನ ಪದವಿ ಮುಗಿದ ವರ್ಷವೇ 21ಕ್ಕೆ ಇಳಿಸಿತು. ಅದನ್ನು ನೋಡುತ್ತಿದ್ದಂತೆಯೇ ತಡ ಮಾಡದೇ ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಅರ್ಜಿ ಸಲ್ಲಿಸಿದೆ. ಈ ಪರೀಕ್ಷೆಯಲ್ಲಿ ಮೊದಲ ಹಂತದಲ್ಲಿಯೇ ತೇರ್ಗಡೆಯಾಗುವುದು ತುಂಬಾ ಕಷ್ಟ ಎಂಬುದು ಹಿಂದೆ ಬಂದಿರುವ ಫಲಿತಾಂಶಗಳಿಂದ ಕಂಡುಕೊಂಡಿದ್ದೆ. ಆದರೆ ನಾನು ನಡೆಸಿದ್ದ ಅಭ್ಯಾಸದಿಂದಾಗಿ ಪ್ರಥಮ ಹಂತದಲ್ಲಿಯೇ ತೇರ್ಗಡೆಯಾಗುತ್ತೇನೆ ಎಂಬ ವಿಶ್ವಾಸವಿದ್ದರೂ ಟಾಪರ್ ಆಗುತ್ತೇನೆ ಎಂದುಕೊಂಡಿರಲಿಲ್ಲ. ಅಯೋಧ್ಯಾ ತೀರ್ಪು ಸುಪ್ರೀಂಕೋರ್ಟ್​ನಿಂದ ಹೊರಬಿದ್ದ ಮಾರನೆಯ ದಿನವೇ ನನ್ನ ಸಂದರ್ಶನವಿತ್ತು. ಹೈಕೋರ್ಟ್ ನ್ಯಾಯಮೂರ್ತಿಗಳು ನಡೆಸುವ ಈ ಸಂದರ್ಶನದಲ್ಲಿ ನನಗೆ ಈ ತೀರ್ಪಿನ ಬಗ್ಗೆಯೇ ಹೆಚ್ಚಿನ ವಿಷಯಗಳನ್ನು ಕೇಳಿದ್ದರು. ಅದರ ಜತೆ ಶಬರಿಮಲೆ ವಿವಾದದ ಬಗ್ಗೆಯೂ ಕೇಳಲಾಗಿತ್ತು. ಈ ಎಲ್ಲಾ ತೀರ್ಪಗಳ ಅಧ್ಯಯನವನ್ನು ಚೆನ್ನಾಗಿ ನಡೆಸಿದ್ದೇ ನನಗೆ ವರದಾನವಾಗಿ ಪರಿಣಮಿಸಿತು.

ನಮ್ಮ ಸರ್ಕಾರ (ರಾಜಸ್ಥಾನ) ವಯೋಮಿತಿಯನ್ನು 21ಕ್ಕೆ ಇಳಿಸಿರುವುದು ನನ್ನಂಥ ಎಷ್ಟೋ ಯುವಕರಿಗೆ ವರದಾನವಾಗಿದೆ. ಯುವಕರಿಗೆ ಇನ್ನಷ್ಟು ಅವಕಾಶಗಳು ಸಿಗುವ ಸಾಧ್ಯತೆ ಇದ್ದು, ಇದು ಯುವಕರಲ್ಲಿ ಹೊಸ ಚೈತನ್ಯ ಮೂಡಿಸಿದೆ. ‘ಬಿಸಿನೆಸ್ ಇನ್​ಸೈಡರ್’ ವರದಿಯ ಪ್ರಕಾರ ಭಾರತದಲ್ಲಿರುವ ವಿವಿಧ ಕೋರ್ಟ್​ಗಳಲ್ಲಿ ಸುಮಾರು 28 ದಶಲಕ್ಷ ಪ್ರಕರಣಗಳು ಇತ್ಯರ್ಥಕ್ಕಾಗಿ ಕಾದು ಕುಳಿತಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ನ್ಯಾಯಾಂಗ ಇಲಾಖೆಯಲ್ಲಿ ಹುದ್ದೆಗಳ ಭರ್ತಿ ಆಗದೇ ಇರುವುದು. ಶೇ. 25ರಷ್ಟು ಹುದ್ದೆಗಳು ಖಾಲಿ ಇವೆ. ಇದನ್ನು ಭರ್ತಿ ಮಾಡುವುದು ಇಂದಿನ ಅಗತ್ಯವಾಗಿದೆ. ಯುವಶಕ್ತಿಗೆ ಹೆಚ್ಚಿನ ಉತ್ತೇಜನ ನೀಡಿದರೆ ಈ ಸಮಸ್ಯೆಯಿಂದ ಪರಿಹಾರ ಸಾಧ್ಯ ಎಂದು ನನ್ನ ಅನಿಸಿಕೆ.

27 ಸಾವಿರ ಮಂದಿಯಲ್ಲಿ ಟಾಪರ್: ನ್ಯಾಯಾಧೀಶ ರಾಗಲು ಸಿದ್ಧತಾ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಈ ಮೂರು ಹಂತಗಳನ್ನು ದಾಟಬೇಕು. ಮಯಂಕ್ ಅವರು 2018ರಲ್ಲಿ ಸಿದ್ಧತಾ ಪರೀಕ್ಷೆಗೆ ಕುಳಿತುಕೊಂಡಾಗ ಸುಮಾರು 27 ಸಾವಿರ ಮಂದಿ ಅವರ ಜತೆ ಪರೀಕ್ಷೆ ತೆಗೆದುಕೊಂಡಿದ್ದರು. ಅವರ ಪೈಕಿ ತೇರ್ಗಡೆಯಾದದ್ದು ಕೇವಲ 3,675 ಮಂದಿ. ಇವರೆಲ್ಲರೂ ಮುಖ್ಯ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರು 499 ಮಂದಿ. ಇವರಲ್ಲಿ 197 ಅಂಕ ಗಳಿಸುವ ಮೂಲಕ ಮಯಂಕ್ ಟಾಪರ್ ಆಗಿದ್ದಾರೆ. ತೇರ್ಗಡೆಯಾದವರ ಪೈಕಿ ಸಂದರ್ಶನಲ್ಲಿ 199 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡೂವರೆ ವರ್ಷಗಳ ಪೊ›ಬೇಷನರಿ ಪಿರಿಯಡ್ ಇರುತ್ತದೆ. ನಂತರ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಗಿ ವೃತ್ತಿಗೆ ಸೇರಲಿದ್ದಾರೆ. ಇವರಲ್ಲಿ ಕೆಲವರಿಗೆ ಹೈಕೋರ್ಟ್, ಸುಪ್ರೀಂಕೋರ್ಟ್​ಗೂ ಬಡ್ತಿ ಹೊಂದುವ ಅವಕಾಶ ಸಿಗುತ್ತದೆ.

ಯುವಕರಿಗೆ ಕಿವಿಮಾತು

‘ಯುವಕರಿಗೆ ನಿರ್ದಿಷ್ಟ ಗುರಿಯಿರಬೇಕು. ಆ ಗುರಿಯತ್ತ ಸಾಗುವ ಹಾದಿಯಲ್ಲಿ ಅನೇಕ ಅಡೆತಡೆಗಳು ಬರುವುದು ಸಹಜ. ಆ ಪೈಕಿ ಸೋಷಿಯಲ್ ಮೀಡಿಯಾ ಕೂಡ ಒಂದು. ಆದರೆ ಗುರಿ ಸಾಧಿಸುವ ಛಲ ಹೊತ್ತ ಸಂದರ್ಭದಲ್ಲಿ ಇಂಥ ಅಡೆತಡೆಗಳನ್ನು ಮೆಟ್ಟಿನಿಲ್ಲುವ ಛಾತಿ ನಮ್ಮಲ್ಲಿ ಬರಬೇಕು. ಬೇಡದ ವಸ್ತುಗಳೇ ಆಕರ್ಷಣೀಯವಾಗಿ ಕಾಣಿಸುವುದು ಮನುಷ್ಯ ಸಹಜ ಗುಣ. ಆದರೆ ಓದುವ ಸಮಯದಲ್ಲಿ, ನಮ್ಮ ಗುರಿ ತಲುಪುವ ಸಮಯದಲ್ಲಾದರೂ ಇವುಗಳತ್ತ ಗಮನ ಕೊಡದೇ ಹೋದರೆ ಯಶಸ್ಸು ನಮ್ಮ ಕೈಹಿಡಿಯುವಲ್ಲಿ ಸಂದೇಹವಿಲ್ಲ’ ಎನ್ನುತ್ತಾರೆ ಮಯಂಕ್.

ಕೋಚಿಂಗ್ ಸೇರಲಿಲ್ಲ

ನನ್ನ ಕುಟುಂಬದಲ್ಲಿ ಯಾರೂ ಕಾನೂನು ಪದವೀಧರರಲ್ಲ, ನ್ಯಾಯಾಂಗದಲ್ಲಿಯೂ ಕೆಲಸ ಮಾಡಿದವರಲ್ಲ. ನನ್ನ ತಂದೆ ರಾಜ್​ಕುಮಾರ್ ಸಿಂಗ್ ಮತ್ತು ತಾಯಿ ಡಾ.ಮಂಜು ಸಿಂಗ್ ಇಬ್ಬರೂ ಶಿಕ್ಷಕರು. ನ್ಯಾಯಾಂಗದ ಹಿನ್ನೆಲೆಯಿಂದ ಬಂದವರಿಗೆ ಈ ಪರೀಕ್ಷೆ ಸ್ವಲ್ಪ ಸುಲಭವಾಗಬಹುದು. ಆದರೆ ನನಗೆ ಇದು ಸವಾಲಾಗಿ ಪರಿಣಮಿಸಿತ್ತು. ನಾನು ವಿಜ್ಞಾನ ವಿಷಯದಲ್ಲಿ ಮೊದಲು ಟಾಪರ್ ಆಗಿದ್ದೆ. ನನ್ನ ಕುಟುಂಬಸ್ಥರೆಲ್ಲಾ ಒಉಉ ಪರೀಕ್ಷೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದರು. ಆದರೆ ನನ್ನ ಮನಸ್ಸೆಲ್ಲಾ ಕಾನೂನು ಕಡೆ ಇತ್ತು. ನನ್ನ ಆಸೆಗೆ ಪಾಲಕರು ಪ್ರೋತ್ಸಾಹ ನೀಡಿದರು. ನ್ಯಾಯಾಂಗ ಸೇವೆಗಳ ಪರೀಕ್ಷೆ ತೆಗೆದುಕೊಂಡವರು ಕೋಚಿಂಗ್​ಗೆ ಸೇರುವುದು ಸಾಮಾನ್ಯ. ಮೊದಲಿನಿಂದಲೂ ನನ್ನ ಗುರಿ ನನಗೆ ಸ್ಪಷ್ಟವಾಗಿದ್ದ ಕಾರಣ ಹಾಗೂ ಅದೇ ನಿಟ್ಟಿನಲ್ಲಿ ನಾನು ಅಧ್ಯಯನ ನಡೆಸಿದ್ದ ಕಾರಣ ನನಗೆ ಕೋಚಿಂಗ್ ಬೇಕು ಎನಿಸಲಿಲ್ಲ. ಆದರೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭವ ಮಾತಲ್ಲ ಎಂಬುದು ತಿಳಿದಿದ್ದರಿಂದ ಆರಂಭದಿಂದಲೇ ನಾನು ದಿನವೂ 6 ರಿಂದ 8 ಗಂಟೆ ಸ್ಟಡಿ ಮಾಡುತ್ತಿದ್ದೆ. ನಂತರ ಇದನ್ನು 12 ಗಂಟೆಗೆ ವಿಸ್ತರಿಸಿದೆ.

ಚಿಕ್ಕ ವಯಸ್ಸಿನಲ್ಲೇ ನ್ಯಾಯಾಂಗ ವ್ಯವಸ್ಥೆಯ ಉನ್ನತ ಹುದ್ದೆಗೆ ಏರುವ ಅವಕಾಶ ಸಿಕ್ಕಿದೆ. ಈ ವಯಸ್ಸಿಗೆ ಆ ಹುದ್ದೆ ತುಂಬಾ ದೊಡ್ಡದು ಎನಿಸಿದರೂ, ಅದಕ್ಕೆ ನ್ಯಾಯ ಒದಗಿಸಲು ಪ್ರಯತ್ನ ಪಡುತ್ತೇನೆ. ಇದರಿಂದ ಮತ್ತಷ್ಟು ಕಲಿಯಬೇಕು ಎಂಬ ಆಸೆ ಹುಟ್ಟುತ್ತಿದೆ.

| ಮಯಂಕ್ ಪ್ರತಾಪ್ ಸಿಂಗ್

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...