ಅಪಘಾತ ಎಂದು ಬಿಂಬಿಸಲು ಯತ್ನ, ಹತ್ಯೆ ಮಾಡಿದ ದುರುಳರು ಜೈಲು ಸ್ನೇಹಿತರು!
ಕೋಲಾರ:ಮಹಿಳೆಯೊಬ್ಬರನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಮ್ಮಾಳೆ ಗ್ರಾಮದ ತಿಮ್ಮೇಗೌಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹಾರೋಬಂಡೆಯ ಮುನಿಯಪ್ಪ ಬಂಧಿತರು.
ಆರೋಪಿಗಳು ನಂಬಿಗಾನಹಳ್ಳಿ ಲಕ್ಷಿ$್ಮ (39) ಅವರನ್ನು ಕೊಲೆ ಮಾಡಿ ಹುಂಗೆನಹಳ್ಳಿ ಗೇಟ್ ಬಳಿ ಶವ ಎಸೆದು ಪರಾರಿಯಾಗಿದ್ದರು. ಶವವನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಿದ್ದರು.
ಇನ್ಸ್ಪೆಕ್ಟರ್ ವಸಂತಕುಮಾರ್ ನೇತೃತ್ವದಲ್ಲಿ 2 ತಂಡಗಳನ್ನು ರಚಿಸಿ, ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ತಂಡ ಮೈಸೂರಿನ ಶಕ್ತಿನಗರದಲ್ಲಡಗಿದ್ದ ತಿಮ್ಮೇಗೌಡ, ಮುನಿಯಪ್ಪ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ನಂಬಿಗಾನಹಳ್ಳಿ ಲಕ್ಷಿ$್ಮ ಅವರು ಆರೋಪಿಗಳಿಗೆ 9 ಲಕ್ಷ ರೂ. ನೀಡಿದ್ದರು. ಬಡ್ಡಿ ಹಾಗೂ ಅಸಲು ನೀಡುವಂತೆ ಒತ್ತಡ ಹೇರಿದ್ದರಿಂದ ದೊಡ್ಡ
ಕಡುತೂರು ಗ್ರಾಮದ ಬಳಿ ಬಂದರೆ ಹಣ ನೀಡುವುದಾಗಿ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ, ಮಾಲೂರು ತಾಲೂಕಿನ ಹುಂಗೆನಹಳ್ಳಿ ಗೇಟ್ ಬಳಿ ಶವ ಬಿಸಾಡಿ ತಲೆಮರಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಈ ಇಬ್ಬರೂ ಆರೋಪಿಗಳು ಈಗಾಗಲೇ ಕೊಲೆಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲು ಸೇರಿ ಅಲ್ಲಿ ಸ್ನೇಹಿತರಾಗಿದ್ದರು. ಬಿಡುಗಡೆಯಾಗಿ ಬಂದ ನಂತರ ಮಾಲೂರಿನಲ್ಲಿ ಕೆಲಸಕ್ಕೆಂದು ಬಂದವರು ಲಕ್ಷಿ$್ಮಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದರು. ಬಳಿಕ ಸಾಲ ಪಡೆದು ವಾಪಸ್ ಮಾಡಲು ಸತಾಯಿಸುತ್ತಿದ್ದರು. ಲಕ್ಷ್ಮಿಯನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸುವ ನಾಟಕವಾಡಿದ್ದಾರೆ ಎಂದು ಇನ್ಸ್ಪೆಕ್ಟರ್ ವಸಂತ ತಿಳಿಸಿದ್ದಾರೆ.