More

    ಬಾಗಲಕೋಟೆಯಲ್ಲಿ ಗೆಲುವಿನ‌ ಸರದಾರ ಎನಿಸಿಕೊಂಡ ಎತ್ತು ದಾಖಲೆ ಮೊತ್ತಕ್ಕೆ ಮಾರಾಟ!

    ಬಾಗಲಕೋಟೆ: 50ಕ್ಕೂ ಹೆಚ್ಚು ಕಡೆ ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಸ್ಪರ್ಧಿಸಿ, ಗೆಲುವಿನ‌ ಸರದಾರ ಎನಿಸಿಕೊಂಡಿರುವ ಎತ್ತು, ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಹಲಕಿ ಗ್ರಾಮದ ಗಡದಾರ ಕುಟುಂಬದ ಎತ್ತು ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

    ಮುಧೋಳ ತಾಲೂಕಿನ ಹಲಕಿ ಗ್ರಾಮದ ಕಾಶಿಲಿಂಗಪ್ಪ-ಯಮನಪ್ಪ ಗಡದಾರ ಸಹೋದರರ ಕುಟುಂಬ ಎರಡೂವರೆ ವರ್ಷದ ಹಿಂದೆ 5 ಲಕ್ಷ ರೂಪಾಯಿಗೆ ಎತ್ತನ್ನು ಖರೀದಿಸಿದ್ದರು. ಇದೀಗ ಮಾರಾಟಗೊಂಡ ಎತ್ತು 50ಕ್ಕೂ ಹೆಚ್ಚು ಕಡೆ ಸ್ಪರ್ಧಿಸಿ ಜಯಿಸಿ ಜಯಗೊಳಿಸಿತ್ತು. ಅಲ್ಲದೆ ಈವರೆಗೆ 6 ಬೈಕ್, 5 ತೊಲೆ ಬಂಗಾರ, 12 ಲಕ್ಷ ರೂ. ಗೆದ್ದು ಕೊಟ್ಟಿದೆ.

    ಇದೀಗ ದಾಖಲೆಯ ಸರದಾರ ಎನಿಸಿಕೊಂಡಿರುವ ಎತ್ತನ್ನು ರಬಕವಿ-ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮಸ್ಥ ವಿಠ್ಠಲ ಮ್ಯಾಗಾಡಿ ಬರೋಬ್ಬರಿ 14 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದಾರೆ. ದಾಖಲೆ ಬೆಲೆಗೆ ಮಾರಾಟವಾದ ಎತ್ತನ್ನು ಹಲಕಿ ಗ್ರಾಮಸ್ಥರು ಹಾಗೂ ಗಡದಾರ ಕುಟುಂಬಸ್ಥರು, ಆರತಿ ಎತ್ತಿ, ಗುಲಾಲ್ ಎರಚಿ ಬೀಳ್ಕೊಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts