ಗುತ್ತಲ: ಮಳೆಗೆ ಮನೆ ಗೋಡೆ ಬಿದ್ದ ಪರಿಣಾಮ ಬಾಲಕಿ ಗಾಯಗೊಂಡಿರುವ ಟನೆ ಸಮೀಪದ ಭರಡಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಭರಡಿ ಗ್ರಾಮದ ಹೊನ್ನವ್ವ ಚನ್ನಪ್ಪ ತಳವಾರ (16) ಗಾಯಗೊಂಡ ಬಾಲಕಿ. ಗೋಡೆ ಕುಸಿದು ಮೇಲೆ ಬಿದ್ದ ಪರಿಣಾಮ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸ್ಥಳಕ್ಕೆ ಪಿಡಿಒ ಹಾಗೂ ಗುತ್ತಲ ಠಾಣೆಯ ಪಿಎಸ್ಐ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಸ್ಪತ್ರೆಗೆ ತಹಸೀಲ್ದಾರ್ ಜಿ.ಎಸ್. ಶಂಕರ ಭೇಟಿ ನೀಡಿ, ಬಾಲಕಿ ಆರೋಗ್ಯ ವಿಚಾರಿಸಿದರು.