ಗಯಾನಾ: ಐಪಿಎಲ್‌ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಒಡತಿ, ಬಾಲಿವುಡ್ ನಟಿ ಪ್ರೀತಿ ಝಿಂಟಾ ಸಹ ಮಾಲೀಕತ್ವದ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಚೊಚ್ಚಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು ಟಿ20 ಲೀಗ್‌ನಲ್ಲಿ ಪಂಜಾಬ್ ಫ್ರಾಂಚೈಸಿಗೆ ಮೊಟ್ಟಮೊದಲ ಪ್ರಶಸ್ತಿ ಗೆಲುವಾಗಿದೆ. ಐಪಿಎಲ್‌ನ 17 ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಲವಾಗಿರುವ ಪಂಜಾಬ್, 2014ರಲ್ಲಿ ರನ್ನರ್ ಅಪ್ ಆಗಿದ್ದು ಗರಿಷ್ಠ ಸಾಧನೆ ಎನಿಸಿದೆ.
ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಸೇಂಟ್ ಲೂಸಿಯಾ ಕಿಂಗ್ಸ್ ಚಾಂಪಿಯನ್ ಎನಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಅಮೆಜಾನ್ ವಾರಿಯರ್ಸ್, ನೂರ್ ಅಹ್ಮದ್ (19ಕ್ಕೆ 3) ಬಿಗಿ ದಾಳಿಗೆ 8 ವಿಕೆಟ್‌ಗೆ 138 ರನ್ ಕಲೆಹಾಕಿತು. ಪ್ರತಿಯಾಗಿ ಆರೋನ್ ಜೋನ್ಸ್ (48* ರನ್, 31 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ರೋಸ್ಟನ್ ಚೇಸ್ (39*) ಜತೆಯಾಟದ ನೆರವಿನಿಂದ 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 139 ಬಾರಿಸಿದ ಸೇಂಟ್ ಲೂಸಿಯಾ ಗೆಲುವಿನ ಕೇಕೆ ಹಾಕಿತು. 40 ವರ್ಷದ ್ಾ ಡು ಪ್ಲೆಸಿಸ್ ಸಾರಥ್ಯದಲ್ಲಿ ಸೇಂಟ್ ಲೂಸಿಯಾ ಈ ಸಾಧನೆ ಮಾಡಿದೆ. ಗೆಲುವಿನ ಬಳಿಕ ಪ್ಲೆಸಿಸ್, ರೋಹಿತ್ ಶರ್ಮ ಟಿ20 ವಿಶ್ವಕಪ್ ಗೆದ್ದಾಗ ‘ರಿಕ್ ್ಲೇರ್ ವಾಕ್’ ಮಾಡಿ ಟ್ರೋಫಿಯೊಂದಿಗೆ ಸಂಭ್ರಮಿಸಿದರು.
ಅಮೆಜಾನ್ ವಾರಿಯರ್ಸ್: 8 ವಿಕೆಟ್‌ಗೆ 138 (ಮೊಯಿನ್ ಅಲಿ 14, ಶೈ ಹೋಪ್ 22, ಹೆಟ್ಮೆಯರ್ 11, ಕಿಮೊ ಪೌಲ್ 12, ರೈಮೋನ್ 13, ರೊಮಾರಿಯೊ 19*, ಪ್ರಿಟೋರಿಯಸ್ 25, ನೂರ್ ಅಹ್ಮದ್ 19ಕ್ಕೆ 3).
ಸೇಂಟ್ ಲೂಸಿಯಾ ಕಿಂಗ್ಸ್: 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 139 (ಡು ಪ್ಲೆಸಿಸ್ 21, ಚಾರ್ಲ್ಸ್ 7, ಅಕೀಮ್ 13, ರೋಸ್ಟನ್ ಚೇಸ್ 39*, ಆರೋನ್ 48*, ಸಿಂಕ್ಲೇರ್ 5ಕ್ಕೆ 1).