ಇಂಡಿ: ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆ ವತಿಯಿಂದ ಹಮ್ಮಿಕೊಂಡ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಯಕ ಶರಣರ ವಚನಗಳೇ ನಮ್ಮೆಲ್ಲರ ಬದುಕಿಗೆ ಸಂವಿಧಾನವಾಗಿದೆ. ಐವರು ಕೂಡ ಜಾತಿ, ಧರ್ಮ, ವರ್ಣ, ವರ್ಗವನ್ನು ಮೀರಿದವರು. ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಪ್ರಸ್ತುತ ಎಂದರು.
ಮುಖ್ಯಶಿಕ್ಷಕ ಅನೀಲ ಪತಂಗಿ ಮಾತನಾಡಿದರು.
ಮುಖ್ಯಶಿಕ್ಷಕರಾದ ಎಸ್.ಎಸ್. ಅರಬ, ವಿ.ವೈ. ಪತ್ತಾರ, ಶಿಕ್ಷಕರಾದ ಎಸ್.ಎಂ. ಪಂಚಮುಖಿ, ಶಾಂತೇಶ ಹಳಗುಣಕಿ, ಮಲ್ಲಮ್ಮ ಗಿರಣಿವಡ್ಡರ, ಜೆ.ಸಿ. ಗುಣಕಿ, ಸಾವಿತ್ರಿ ಸಂಗಮದ, ಎ್.ಎ. ಹೊರ್ತಿ, ಎಸ್.ವಿ. ಬೆನೂರ, ಎಸ್.ಬಿ. ಕುಲಕರ್ಣಿ, ಎಸ್.ಡಿ. ಬಿರಾದಾರ, ಸುಮಿತ್ರಾ ನಂದಗೊಂಡ, ಸುರೇಶ ದೊಡ್ಯಾಳಕರ, ಶ್ರದ್ಧಾ ಬಂಕಲಗಾ, ಅಲಿಯಾ ಅಂಗಡಿ ಇತರರಿದ್ದರು.