ಧ್ವನಿ ಇಲ್ಲದವರಿಗೆ ಧ್ವನಿಯಾದವರು ಶರಣರು

The voiceless surrender to the voiceless

ತೇರದಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಡಿ ಪಡೆಯುವ ಹಕ್ಕುಗಳೇ ಹೆಚ್ಚು. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಡಿಐಜಿಪಿ ರವಿ ಡಿ.ಚೆನ್ನಣ್ಣವರ ಹೇಳಿದರು.

ತೇರದಾಳ ಕ್ಷೇತ್ರಾಧಿಪತಿ ಅಲ್ಲಮಪ್ರಭು ದೇವರ ನೂತನ ದೇವಸ್ಥಾನ ಲೋಕಾರ್ಪಣೆ ನಿಮಿತ್ತ ಶುಕ್ರವಾರ ರಾತ್ರಿ ನಡೆದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರರು ಹೇಳಿದಂತೆ ಕೇವಲ ರಾಜಕೀಯ ಸ್ವಾತಂತ್ರೃಕ್ಕೆ ಅರ್ಥವಿಲ್ಲ. ಎಲ್ಲಿಯವರೆಗೆ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸ್ವಾತಂತ್ರೃ ಸಿಗುವುದಿಲ್ಲವೋ ಅಲ್ಲಿಯವರೆಗೆ ದೇಶ ಉದ್ಧಾರವಾಗುವುದಿಲ್ಲ. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಪ್ರತಿ ಮನೆಯೂ ಅನುಭವ ಮಂಟಪವಾಗಬೇಕು. ಶರಣರು ವಚನಗಳ ಮೂಲಕ ಜಾಗತಿ ಮೂಡಿಸಿದರು. ಸಮಸಮಾಜದ ಕನಸನ್ನು ಕಾಣುವ ಮೂಲಕ ಸಮಾಜದ ಏಳಿಗೆ ಮಾಡಿದರು. ನುಡಿದಂತೆ ನಡೆದರು ಎಂದರು.

ಜಗತ್ತಿಗೆ ಭಾರತೀಯರ ಕೊಡುಗೆ ಶರಣ ಸಂಸ್ಕೃತಿ. ಶರಣರು ಯಾರಿಗೆ ಧ್ವನಿ ಇಲ್ಲವೋ ಅವರಿಗೆ ಧ್ವನಿಯಾದವರು. ಅನ್ನ, ನೀರು, ಅಕ್ಷರ ದಾಸೋಹಗಳಂತಹ ಹಲವಾರು ದಾಸೋಹಗಳನ್ನು ಮಾಡಿದವರು ಶರಣರು. ಕಾಯಕವೇ ಕೈಲಾಸ ಎಂಬ ಪದ ಅರ್ಥವಾದರೆ ತಾರತಮ್ಯ ಎನ್ನುವುದು ಇರುವುದೇ ಇಲ್ಲ. ನೊಂದ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ. ಅಣ್ಣ ಬಸವಣ್ಣ, ಬಾಬಾಸಾಹೇಬ ಅಂಬೇಡ್ಕರ್, ಬುದ್ಧನ ಸಂದೇಶಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಹಸಿದು ಬಂದವರಿಗೆ ಅನ್ನ ಹಾಕಬೇಕೇ ವಿನಾ ವೇದಾಂತವನ್ನಲ್ಲ ಎಂದು ಅವರು ಹೇಳಿದರು.
ಮುಂಡರಗಿ ಬೈಲೂರು ನಿಷ್ಕಲಮಂಟಪ ನಿಜಗುಣಾನಂದ ಸ್ವಾಮಿಗಳು ಮಾತನಾಡಿ, ಬಸವಣ್ಣನವರನ್ನು ನಂಬಿದವರು ಯಾರೂ ಕೆಟ್ಟಿಲ್ಲ. ಬಸವಣ್ಣನೆಂದರೆ ಕೆಲವರಿಗೆ ಅಲರ್ಜಿ. ಸದ್ಭಕ್ತನಾಗುವುದು ಕಷ್ಟ. ಬಸವಣ್ಣನ ಸಾನ್ನಿಧ್ಯದಿಂದ ಸದ್ಭಕ್ತನಾದೆ ಎಂದು ಅಲ್ಲಮ ಹೇಳಿದರು.

ತನು,ಮನ ಭಾವದಿಂದ ರಾಷ್ಟ್ರ ಕಟ್ಟಿದವರು ಬಸವಣ್ಣನವರು. ಶಬ್ದದಿಂದ ಜಗತ್ತನ್ನು ಉದ್ಧಾರ ಮಾಡಿದವರು ಬಸವಣ್ಣನೆಂದು ತಿಳಿಸಿದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಡಾ. ಮಹಾಂತಪ್ರಭು ಮಹಾಸ್ವಾಮಿಗಳು, ಹಿರೇಮಠದ ಗಂಗಾಧರ ದೇವರು, ತೆಲಂಗಾಣದ ವಿರುಪಾಕ್ಷ ದೇವರು, ಹಾರೂಗೇರಿಯ ಶರಣ ವಿಚಾರ ವಾಹಿನಿಯ ಐ.ಆರ್.ಮಠಪತಿ ವೇದಿಕೆಯಲ್ಲಿದ್ದರು.
ಮಣಕವಾಡದ ಅಭಿನವ ಮತ್ಯುಂಜಯ ಮಹಾಸ್ವಾಮಿಗಳು ಮಾತನಾಡಿದರು. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕಾರ್ಯದರ್ಶಿ, ಬಿಬಿಎಂಪಿ ವಲಯ ಆಯುಕ್ತ ಇಬ್ರಾಹಿಂ ಮೈಗೂರ, ವಿಜಯಮಹಾಂತ ನಾಡಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಂಕರ ಉಗಾರ, ಹನಗಂಡಿಯ ನೀಲೇಶ ದೇಸಾಯಿ ಇತರರಿದ್ದರು.

ಧಾರವಾಡದ ರತಿಕಾ ನತ್ಯಾಲಯ ತಂಡದಿಂದ ವಚನ ನತ್ಯ ಪ್ರದರ್ಶನ ನಡೆಯಿತು. ಬೀಳಗಿಯ ಬಸವರಾಜ ಭಜಂತ್ರಿ ಶಹನಾಯಿ ವಾದನ ನಡೆಸಿಕೊಟ್ಟರು. ಬಸವರಾಜ ಬಾಳಿಕಾಯಿ ಸ್ವಾಗತಿಸಿದರು. ಮ.ಕ.ಮೇಗಾಡಿ, ಸಚಿನ್ ಜಯಪ್ಪನವರ, ಎಂ.ಬಿ.ಮಾಳೇದ ನಿರೂಪಿಸಿದರು. ಗಂಗಾಧರ ಮೋಪಗಾರ ವಂದಿಸಿದರು.

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…