VIDEO: ಈ ಮೊಸಳೆ ಕಲ್ಲಂಗಡಿ ಹಣ್ಣು ತಿನ್ನುವುದನ್ನು ನೋಡಿದರೆ ಥ್ರಿಲ್​ ಆಗದೆ ಇರದು; ಕ್ರೊಕೊಡೈಲ್​ ಬೈಟ್​ಗೆ ಹಣ್ಣು ಫುಲ್​ ಚಿಂದಿ…

ಫ್ಲೋರಿಡಾ: ಮೊಸಳೆಯೆಂದರೆ ಭಯವಾಗುವುದು ಅದರ ಬಾಯಿ ನೋಡಿದಾಗ. ಬಾಯಿ ತೆರೆದುಕೊಂಡು ಮೊನಚಾದ ಹಲ್ಲುಗಳನ್ನು ಪ್ರದರ್ಶಿಸುವ ಮೊಸಳೆ ನೋಡಿದರೆ ಸಾಕು ನಡುಕ ಬರುತ್ತದೆ. ಹಾಗೇ ಅದರ ದವಡೆಯಲ್ಲಿ ಅಷ್ಟೇ ಶಕ್ತಿಯಿದೆ ಕೂಡ. ಮನುಷ್ಯ ಸೇರಿ, ಹಲವು ದೊಡ್ಡದೊಡ್ಡ ಪ್ರಾಣಿಗಳನ್ನು ಹಾಗೇ ಬಾಯಿಯಲ್ಲಿ ಹಾಕಿ ಕಚ್ಚಿ ತಿಂದುಬಿಡಬಲ್ಲದು.

ಈಗ ಮೊಸಳೆಯೊಂದು ಕಲ್ಲಂಗಡಿ ಹಣ್ಣು ತಿಂದ ವಿಡಿಯೋವೊಂದು ಸಖತ್​ ವೈರಲ್​ ಆಗಿದ್ದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಮೊಸಳೆಯ ದವಡೆಯ ಶಕ್ತಿ ಅದೆಷ್ಟು ಬಲಿಷ್ಠವಾಗಿರುತ್ತದೆ ಎಂಬುದಕ್ಕೆ ಅದು ಕಲ್ಲಂಗಡಿ ಹಣ್ಣನ್ನು ತುಂಡರಿಸಿದ ಪರಿಯೇ ಸಾಕ್ಷಿ.

ವಿಡಿಯೋವನ್ನು ಮೊಂಟೆನ್ನಾದ ಎನ್​ಬಿಸಿ ಮಾಧ್ಯಮ ತನ್ನ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿಕೊಂಡಿದೆ. ಫ್ಲೋರಿಡಾದಲ್ಲಿರುವ ಸೇಂಟ್​ ಅಗಾಸ್ಟಿಯನ್​ ಮೊಸಳೆ ಸಾಕಣಾ ಪಾರ್ಕ್​ನಲ್ಲಿರುವ ಮೊಸಳೆಯೊಂದು ಕಲ್ಲಂಗಡಿ ಹಣ್ಣು ತಿಂದಿದೆ. ಕೊಳದಲ್ಲಿದ್ದ ಮೊಸಳೆ ಬಾಯಿ ತೆರೆದುಕೊಂಡು ದಡದ ಬಳಿ ಬರುತ್ತದೆ. ಅದರ ಬಾಯಿಗೆ ವ್ಯಕ್ತಿಯೋರ್ವ ಒಂದು ದೊಡ್ಡ ಕಲ್ಲಂಗಡಿ ಹಣ್ಣನ್ನು ಹಾಕುತ್ತಾನೆ. ಆ ಮೊಸಳೆ ಹಣ್ಣನ್ನು ಕಚ್ಚಿದ ಪರಿ ಹೇಗಿದೆಯೆಂದರೆ ಇಡೀ ಹಣ್ಣು ಚೂರಾಗುತ್ತದೆ. ಹಾಗೇ ಅದನ್ನು ತಿನ್ನುತ್ತ ಮತ್ತೆ ನೀರಿನೊಳಕ್ಕೆ ಹೋಗುತ್ತದೆ.

ವಿಡಿಯೋವನ್ನು ಈಗಾಗಲೇ 30 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 245 ಸಾವಿರ ಜನರು ಲೈಕ್​ ಮಾಡಿದ್ದಾರೆ.

Alligator eats a watermelon

Bomber, the largest American Alligator the St. Augustine Alligator Farm Zoological Park, destroys this watermelon.

NBC Montana ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಆಗಸ್ಟ್ 8, 2019

Leave a Reply

Your email address will not be published. Required fields are marked *