22.8 C
Bengaluru
Saturday, January 18, 2020

ರಾಷ್ಟ್ರನಿರ್ಮಾಣದ ಅಪೂರ್ವ ಚೇತನ ರಾಜೀವ್​ ದೀಕ್ಷಿತ್​

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ರಾಷ್ಟ್ರದ ಜಡತ್ವ ನಿವಾರಿಸಿದ, ದೇಶದ ಸತ್ವ ಹಾಗೂ ನೈಜಶಕ್ತಿಯನ್ನು ಪರಿಚಯಿಸಿ ದೇಶಭಕ್ತಿಯ ಹೊಸ ಅಲೆಯನ್ನೇ ಸೃಷ್ಟಿಸಿದ ಧೀಮಂತ ರಾಜೀವ್ ದೀಕ್ಷಿತ್ ಲಕ್ಷಾಂತರ ಜನರು ಮತ್ತೆ ಸ್ವದೇಶಿ ವ್ರತ ಕೈಗೊಳ್ಳುವಂತೆ ಪ್ರೇರಣೆ ನೀಡಿದರು.

ಬಹುತೇಕ ಮರೆತು ಹೋಗಿದ್ದ ಸ್ವದೇಶಿ ಚಿಂತನೆಗಳನ್ನು ಪುನರುತ್ಥಾನಗೊಳಿಸಿ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು, ದೇಶದ ವೈಭವ, ಹಿರಿಮೆ ಹಾಗೂ ವಾಸ್ತವವನ್ನು ಸವಿಸ್ತಾರವಾಗಿ ತಿಳಿಹೇಳಿ ರಾಷ್ಟ್ರ ಕಟ್ಟುವ ಮಹಾನ್ ಸಾಹಸದಲ್ಲಿ ತಮ್ಮನ್ನೇ ಸಮರ್ಪಿಸಿಕೊಂಡ ಅಪೂರ್ವ ಚೇತನ ಅವರು.

ರಾಜೀವ್ ದೀಕ್ಷಿತರು 1967 ನವೆಂಬರ್ 30ರಂದು ಉತ್ತರಪ್ರದೇಶದ ಅಲಿಗಢ ಜಿಲ್ಲೆಯ ನಾಹ್ ಗ್ರಾಮದಲ್ಲಿ ಜನಿಸಿದರು. ಬಾಲ್ಯದಿಂದಲೂ ರಾಷ್ಟ್ರಭಕ್ತರು. 1984ರಲ್ಲಿ ಭೋಪಾಲಿನಲ್ಲಿ ನಡೆದ ಅಮೆರಿಕ ಮೂಲದ ಯೂನಿಯನ್ ಕಾರ್ಬೆಡ್ ಕಂಪನಿ ಅಚಾತುರ್ಯ ಎಂದು ಹೇಳುವ ಒಂದು ಪ್ರಯೋಗವೇ ಭೋಪಾಲ್ ಅನಿಲ ದುರಂತ, ಅಲ್ಲಿ ಹನ್ನೆರಡು ಸಾವಿರಕ್ಕೂ ಹೆಚ್ಚಿನ ಜನರು ಸಾವಿಗೀಡಾದರು. ಇಂದಿಗೂ ಲಕ್ಷಾಂತರ ಜನರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಘಟನೆ ರಾಜೀವರು ಸಮಾಜದ ಕೆಲಸಕ್ಕೆ ಧುಮುಕಲು ದಾರಿಯಾಯಿತು. ಅವರು ಸಂಘಟನಾತ್ಮಕ ಹೋರಾಟದ ಮೂಲಕ ಆ ಕಂಪನಿಯನ್ನು ಭಾರತದಿಂದ ಹೊರಗಟ್ಟಲು ಯಶಸ್ವಿಯಾದರು. ಮುಂದೆ ಅವರು ಹಿರಿಯ ಗಾಂಧಿಮಾರ್ಗಿ ಪ್ರೊ.ಧರ್ಮಪಾಲರು ಸಂಗ್ರಹಿಸಿದ್ದ ಇತಿಹಾಸದ ಹಲವು ರಹಸ್ಯಮಯ ಹಾಗೂ ಅಚ್ಚರಿಯ ದಾಖಲೆಗಳನ್ನು ಅಧ್ಯಯನ ಮಾಡಿದರು, ಆನಂತರ ‘ಆಜಾದಿ ಬಚಾವೋ ಆಂದೋಲನ’ ಎಂಬ ಸಂಘಟನೆ ಸ್ಥಾಪಿಸಿ ಈಸ್ಟ್ ಇಂಡಿಯಾ ಕಂಪನಿಯಿಂದ ಹಿಡಿದು ಇಂದಿಗೂ ವ್ಯಾಪಾರದ ಹೆಸರಲ್ಲಿ ವಿದೇಶಿ ಕಂಪನಿಗಳು ಮಾಡುತ್ತಿರುವ ಅನೇಕ ಮೋಸಗಳನ್ನು ಜನರಿಗೆ ಅತ್ಯಂತ ಸರಳವಾಗಿ ದೇಶಸಂಚಾರದ ಮೂಲಕ ತಮ್ಮ 15,000ಕ್ಕೂ ಹೆಚ್ಚಿನ ಉಪನ್ಯಾಸಗಳಿಂದ ತಿಳಿಸಿದರು. ರಾಷ್ಟ್ರದ ಮೂಲ ಸಮಸ್ಯೆಗಳನ್ನು ಅರಿತಿದ್ದ ರಾಜೀವರು ಅವುಗಳನ್ನು ತಿಳಿಸುವ ಜೊತೆಗೆ ಉತ್ತಮ ಪರಿಹಾರವನ್ನೂ ತಿಳಿಸುತ್ತಿದ್ದರು.

ಭಾರತದಲ್ಲಿ ಆಗತಾನೆ ಶುರವಾಗಿದ್ದ ಹೊಸ ಮುಕ್ತ ಆರ್ಥಿಕ ನೀತಿಯ ದುಷ್ಟರಿಣಾಮಗಳಾದ ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆ, ಸಣ್ಣ ಕೈಗಾರಿಕೆಗಳಿಗಾಗಿರುವ ಹೊಡೆತ ಇವುಗಳನ್ನು ಎಲ್ಲರಿಗೂ ತಿಳಿಸುತ್ತ, ಸಮಸ್ಯೆಗಳಿಗೆ ಪರಿಹಾರವೆಂಬಂತೆ ಸ್ವದೇಶಿ ಚಿಂತನೆ, ಸ್ವಾವಲಂಬನೆ, ಸ್ವತಂತ್ರ ಆರ್ಥಿಕತೆ, ವಿಕೇಂದ್ರೀಕರಣ ಎಂಬ ವಿಚಾರಧಾರೆಗಳನ್ನು ಬಿತ್ತುವಲ್ಲಿ ಯಶಸ್ವಿಯಾದರು.

ಈ ಸಮಯದಲ್ಲಿ ದೇಶದಾದ್ಯಂತ ಹೊಸ ಅಲೆಯನ್ನು ಸೃಷ್ಟಿ ಮಾಡಿ ಅವರು 17ಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ‘ಆಜಾದಿ ಬಚಾವೋ ಆಂದೋಲನ’ವನ್ನು ವಿಸ್ತರಿಸಿದರು. ಭಾರತದ ಅಸಂಖ್ಯಾತ ಜನರ ಕೋಟ್ಯಂತರ ಹಣವನ್ನು ಭ್ರಷ್ಟಾಚಾರದ ಮುಖಾಂತರ ಹಲವರು ವಿದೇಶಿ ಬ್ಯಾಂಕಿನ ಖಾತೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಬಗ್ಗೆ ಮೊದಲಿಗೆ ಜನಾಂದೋಲನದ ಮೂಲಕ ತಿಳಿಸಿದ ರಾಜೀವ್ ದೀಕ್ಷಿತರು ಕಾಳಧನವನ್ನು ಭಾರತಕ್ಕೆ ಹಿಂದೆ ತರಲು ಒತ್ತಾಯಿಸಿದರು, ಜತೆಗೆ ಕೋಟ್ಯಂತರ ಭಾರತೀಯರ ಸಹಿ ಸಂಗ್ರಹ ಮೂಲಕ ಸವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿದ್ದರು.

ರಾಜೀವ್ ದೀಕ್ಷಿತರು ಇಡಿಯ ಭಾರತದ ಸಮಸ್ಯೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಪರಿಣಾಮವಾಗಿ ಹಲವು ವಿಷಯಗಳ ಬಗ್ಗೆ ಹೊಸಬೆಳಕು ಚೆಲ್ಲಿದರು. ಭಾರತದ ನೈಜ ಇತಿಹಾಸ, ಸ್ವಾತಂತ್ರ್ಯ ಎಂಬ ಹೆಸರಲ್ಲಾದ ಅಧಿಕಾರದ ಹಸ್ತಾಂತರ, ಗೋ ಸಂರಕ್ಷಣೆ, ರಾಜಕಾರಣಿಗಳು ಮಾಡುತ್ತಿರುವ ಲೂಟಿ, ವಿಜ್ಞಾನ, ಭಾರತದ ಗತವೈಭವ, ದೇಶದ ಆರ್ಥಿಕತೆ, ಸಾವಯವ ಕೃಷಿ, ವಾಗ್ಭಟ ಮಹರ್ಷಿಯ ಆರೋಗ್ಯ ಸೂತ್ರಗಳು, ದೇಶಿಯ ಚಿಂತನೆಗಳು, ಅಂತಾರಾಷ್ಟ್ರಿಯ ಒಪ್ಪಂದಗಳು, ಆಯುರ್ವೇದ ಚಿಕಿತ್ಸೆ, ಹೋಮಿಯೋಪಥಿ ಚಿಕಿತ್ಸೆ, ಸ್ವಾತಂತ್ರ್ಯಯೋಧರ ಬಲಿದಾನ, ಕಾರ್ಗಿಲ್ ವೀರಗಾಥೆ, ಗ್ರಾಮ ಆಧಾರಿತ ಜೀವನ ವ್ಯವಸ್ಥೆ, ಪರಿಸರ ಸಂರಕ್ಷಣೆ, ಮಾತೃಭಾಷೆಯ ಮಹತ್ವ, ವಿದೇಶಿ ಕಂಪನಿಗಳ ಹುನ್ನಾರ… ಹೀಗೆ ಹಲವು ವಿಷಯಗಳಲ್ಲಿ ಅವರು ಮಂಡಿಸಿದ ವಿಚಾರಗಳು ವಾಸ್ತವವನ್ನು ತೆರೆದಿಟ್ಟು, ಅರಿವನ್ನು ಹೆಚ್ಚಿಸಿದವು.

ರಾಜೀವ್ ದೀಕ್ಷಿತರು 2010 ನವೆಂಬರ್ 30ರಂದು ಛತ್ತೀಸ್​ಗಢದ ಭಿಲಾಯನಲ್ಲಿ 42ನೇ ವಯಸ್ಸಿನಲ್ಲಿ ಭಾರತ ಪುನರ್​ನಿರ್ಮಾಣದ ಯಜ್ಞಕ್ಕೆ ಆಹುತಿಯಾದರು. ರಾಜೀವರು ಕಂಡ ಕನಸಿನ ಭಾರತದ ಗುರಿ ಇಂದು ನಮ್ಮ ಮುಂದಿದೆ, ವಿಶ್ವಕ್ಕೆ ಮಾರ್ಗದರ್ಶಕ ಸ್ಥಾನದಲ್ಲಿದ ಭಾರತಕ್ಕೆ ಇಂದು ಆ ವೈಭವವನ್ನು ಮತ್ತೆ ಮರಳಿಸಬೇಕಿದೆ. ಪ್ರತಿ ವಿಷಯದಲ್ಲೂ ನಾವು ಆಚರಿಸಬಹುದಾದ ಸ್ವದೇಶಿ ವಿಚಾರಗಳಿಂದ ಮಾತ್ರ ಶ್ರೇಷ್ಠ ಭಾರತದ ನಿರ್ಮಾಣ ಸಾಧ್ಯ.

ಕನಸು ನನಸಾಗಿಸಬೇಕಿದೆ

ರಾಜೀವರು ದೇಶ, ವಿದೇಶಗಳನ್ನು ಸಂದರ್ಶಿಸಿ ಎಲ್ಲ ದೇಶಗಳ ಅರ್ಥವ್ಯವಸ್ಥೆ, ಇತಿಹಾಸ, ಆಡಳಿತ ವ್ಯವಸ್ಥೆ, ಕಾನೂನು, ಜನರ ಜೀವನಶೈಲಿಗಳ ಅಧ್ಯಯನವನ್ನು ಆಳವಾಗಿ ಕೈಗೊಂಡು ತಾವೇ ಮಾಹಿತಿ, ದಾಖಲೆಗಳ ವಿಶ್ವಕೋಶವಾದರು. ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಹಿಡನ್ ಅಜೆಂಡಾ ವಿರುದ್ಧ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಂಕಲ್ಪ ಹೊತ್ತು ದೇಶದ ಉದ್ದಗಲಕ್ಕೂ ಸಂಚರಿಸಿದರು. ಭಾರತದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಸಾವಿರಾರು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳನ್ನು ವಿರೋಧಿಸಿದ್ದಲ್ಲದೆ, ಸಾವಿನ ಹಾದಿ ಕಾಣುತ್ತಿದ್ದ ನಮ್ಮ ರೈತರ ಜೀವ ಉಳಿಸುವ ಸಲುವಾಗಿ ವಿದೇಶೀ ಆಚರಣೆ ಜೀವನಶೈಲಿಗಳನ್ನು ತಿರಸ್ಕರಿಸುವ ಕರೆ ನೀಡಿ ಸ್ವಾತಂತ್ರ್ಯ ಉಳಿಸುವ ಹಾದಿಯಲ್ಲೇ ಆಜಾದಿ ಬಚಾವೋ ಆಂದೋಲನವನ್ನು ಮುನ್ನಡೆಸಿದರು. ನಮ್ಮದೇ ಪ್ರಾಚೀನ ಗುರುಕುಲ ಪದ್ಧತಿಯನ್ನು ಉತ್ತೇಜಿಸುವ ಶಾಲೆಗಳನ್ನು ಪ್ರೋತ್ಸಾಹಿಸಿದರು. ಸರಳತೆಯ ಆದರ್ಶವನ್ನು ಅಳವಡಿಸಿಕೊಂಡಿದ್ದ ರಾಜೀವ್ ವಿದೇಶಿ ಉತ್ಪನ್ನಗಳನ್ನು ತ್ಯಜಿಸಲು ಸೂಚಿಸಿ ‘ಖಾದಿ ಗ್ರಾಮೋದ್ಯೋಗ ಉತ್ಪನ್ನಗಳನ್ನೇ ಬಳಸಿ’ ಎನ್ನುತ್ತಿದ್ದರು. ಹೀಗೆ ಆಚಾರ-ವಿಚಾರ, ನಿಯಮ-ಸಂಯಮ, ಬ್ರಹ್ಮಚರ್ಯ, ರಾಸಾಯನಿಕ-ಮುಕ್ತ ಆಹಾರ ಸೇವನೆ, ಇತಿಹಾಸದ ಸ್ಮರಣೆ, ರೈತಪರ ಕಾಳಜಿಗಳಿಂದ ಯುವಜನತೆಯ ನೆಚ್ಚಿನ ‘ಸ್ವದೇಶೀ ನಾಯಕ’ ಎನಿಸಿದ್ದರು. ರಾಜೀವ್ ದೀಕ್ಷಿತರ ಮಾರ್ಗದರ್ಶನದಲ್ಲಿ ದೇಶದಾದ್ಯಂತ ಅನೇಕ ಸ್ವದೇಶಿ ಚಿಕಿತ್ಸಾಲಯಗಳು, ಯೋಗ ಕೇಂದ್ರಗಳು, ಗುರುಕುಲ ಪದ್ಧತಿಯಲ್ಲಿ ವಿದ್ಯಾಲಯಗಳು, ಗೋವುಗಳ ಸಂರಕ್ಷಣೆ, ಸ್ವದೇಶಿ ವಸ್ತುಗಳ ಮಳಿಗೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಹರಿದ್ವಾರದಲ್ಲಿ ‘ಭಾರತ್ ಸ್ವಾಭಿಮಾನ್ ಟ್ರಸ್ಟ್’ನ ಬೃಹತ್ ಕಟ್ಟಡ ‘ರಾಜೀವ್ ಭವನ್’ ನಿರ್ಮಾಣವಾಗಿದೆ. ಆದರೆ, ಅವರು ಹಲವು ಕನಸುಗಳು ಮುಖ್ಯವಾಗಿ ಸ್ವದೇಶಿ ಜೀವನಶೈಲಿ ಅನುಷ್ಠಾನಕ್ಕೆ ಇನ್ನಷ್ಟು ಶ್ರಮಿಸಬೇಕಿದೆ.

ಕೆಲ ಘಟನೆಗಳು

ಚಾಮರಾಜನಗರದ ಒಂದು ಹಳ್ಳಿಯಲ್ಲಿ ದೀಕ್ಷಿತರ ಉಪನ್ಯಾಸ ಇತ್ತು. ಅಲ್ಲಿ ಸಾವಿರಾರು ಜನ ಸೇರಿದ್ದರು. ಬಹಳ ಹೊತ್ತಾದರೂ ದೀಕ್ಷಿತರು ಆ ಕಾರ್ಯಕ್ರಮಕ್ಕೆ ಬಂದಿರಲಿಲ್ಲ, ಜನ ಹೊತ್ತಾದಂತೆಲ್ಲ ಕರಗತೊಡಗಿದರು. ಈ ಕಡೆ ರಾಜೀವರು ಬರುತ್ತಿದ್ದ ವಾಹನ ಪಲ್ಟಿಯಾಗಿತ್ತು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಆಗಿರಲಿಲ್ಲ, ಆದರೆ ಗಾಯಗಳಾಗಿದ್ದವು. ಅಲ್ಲಿಂದ ಚೇತರಿಸಿಕೊಂಡು ಆ ಗ್ರಾಮಕ್ಕೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು, ಅಲ್ಲಿ ಕೆಲವೇ ಜನರಿದ್ದರೂ ರಾಜೀವರು ಸುದೀರ್ಘ ಉಪನ್ಯಾಸ ಮಂಡಿಸಿದರು. ಇದು ರಾಜೀವರ ದೇಶಪ್ರೇಮ ಹಾಗೂ ಕರ್ತವ್ಯನಿಷ್ಠೆಯ ಪ್ರತೀಕ.

ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಒಮ್ಮೆ ಶಿಷ್ಯರನ್ನು ಹಾಗೂ ಹಲವು ಮಠಗಳ ಮಠಾಧೀಶರನ್ನು ಮೈಸೂರಿನಲ್ಲಿ ಸೇರಿಸಿ ‘ಸಮಾಜ ಸುಧಾರಣೆಯಲ್ಲಿ ಸಂತರ ಕರ್ತವ್ಯಗಳು’ ಎಂಬ ಉಪನ್ಯಾಸವನ್ನು ರಾಜೀವರಿಂದ ಕೊಡಿಸಿದರು ಹಾಗೂ ಅವರನ್ನು ‘ರಾಷ್ಟ್ರೀಯ ಯುವಸಂತ’ ಎಂದು ಸಂಬೋಧಿಸಿದರು.

| ಪ್ರಭು ಪಾಟೀಲ್​

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...