24.9 C
Bangalore
Wednesday, December 11, 2019

VIDEO: ನೆಟ್ಟಿಗರ ಪ್ರೀತಿಯನ್ನು ಬಾಚಿಕೊಳ್ಳುತ್ತಿರುವ ನಾಲ್ಕು ತಿಂಗಳ ಕಪ್ಪುಬೆಕ್ಕಿನ ಮರಿ ! ಇದು ಸಹಜವಾಗಿಲ್ಲ…ಇದರ ವಿಲಕ್ಷಣತೆ ಹುಟ್ಟಿನಿಂದಲೇ ಬಂದಿದ್ದು…!

Latest News

ವಿಷ್ಣು‌ ಸೇನಾ‌ ಸಮಿತಿಯಿಂದ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಆಯೋಜನೆ

ಬಳ್ಳಾರಿ: ಚಿತ್ರನಟ ವಿಷ್ಣುವರ್ಧನ್ ಅವರ 10ನೇ ಪುಣ್ಯಸ್ಮರಣೆ ಹಿನ್ಮೆಲೆಯಲ್ಲಿ ವಿಷ್ಣು ಸೇನಾ ಸಮಿತಿಯಿಂದ ಡಿ.29ರಂದು ನಗರ ಹಾಗೂ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.29ರಂದು...

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ಪೌರತ್ವ ತಿದ್ದುಪಡಿ ಮಸೂದೆ ದೇಶದ ಈಶಾನ್ಯ ಭಾಗದ ಜನರ ಮೇಲಿನ ಕ್ರಿಮಿನಲ್​ ದಾಳಿ: ರಾಹುಲ್​ ಗಾಂಧಿ ಟೀಕೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟೀಕಿಸಿದ್ದು, ದೇಶದ...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು ಸಾಕಿದ ಮನೆಯವರ ಹಾಗೂ ನೆಟ್ಟಿಗರ ಪ್ರೀತಿಗೆ ಪಾತ್ರವಾಗಿದೆ.

ನಾಲ್ಕು ತಿಂಗಳ ಹಿಂದೆ ಎರಡು ಮುಖ ಹೊತ್ತ ಈ ಮರಿ ಹುಟ್ಟಿದಾಗ ಅದರ ಅಮ್ಮ ಬೆಕ್ಕು ಹತ್ತಿರವೇ ಬಿಟ್ಟುಕೊಳ್ಳುತ್ತಿರಲಿಲ್ಲ. ಯಾಕೆಂದರೆ ಅದರೊಟ್ಟಿಗೆ ಹುಟ್ಟಿದ ಉಳಿದ ಮರಿಗಳಿಗಿಂತ ವಿಭಿನ್ನವಾಗಿ, ವಿಲಕ್ಷಣವಾಗಿ ಗೋಚರಿಸುತ್ತಿತ್ತು. ಬಳಿಕ ಪಶುವೈದ್ಯರಾದ ಡಾ. ರಾಲ್ಫ್​ ಟ್ರಾನ್​ ಎಂಬುವರು ಬೆಕ್ಕಿನ ಮರಿಯನ್ನು ದತ್ತು ಪಡೆಯಲು ನಿರ್ಧರಿಸಿದರು.

ಬೆಕ್ಕಿನ ಮರಿಗೆ ಡ್ಯೂ ಎಂದು ಹೆಸರಿಡಲಾಗಿದೆ. ಇದು ಹುಟ್ಟುವಾಗಲೇ ಅತಿ ವಿರಳವಾದ ಡಿಪ್ರೋಸೋಪಸ್​ ಅಥವಾ ಕ್ರೆನಿಯೋಫೇಸಿಯಲ್​ ಡುಪ್ಲಿಕೇಶನ್​ ಎಂಬ ಸಮಸ್ಯೆಯನ್ನು ಹೊಂದಿದೆ. ಹಾಗಾಗಿಯೇ ಒಂದು ದೇಹ, ಒಂದು ತಲೆ ಹೊಂದಿದ್ದರೂ ಎರಡು ಮುಖವನ್ನು ಹೊತ್ತಿದೆ. ಅದರ ಎರಡೂ ಬಾಯಿಗಳು ಪ್ರತ್ಯೇಕವಾಗಿಯೇ ಕೂಗುತ್ತವೆ. ಎರಡೂ ಮೂಗುಗಳು ಕಾರ್ಯನಿರ್ವಹಿಸುತ್ತವೆ ಎಂದು ಡಾ. ರಾಲ್ಫ್​ ಟ್ರಾನ್​ ತಿಳಿಸಿದ್ದಾರೆ.

ಡ್ಯೂ ಹೆಸರಿನಲ್ಲೇ ಫೇಸ್​ಬುಕ್​ ಪೇಜ್​ ಕ್ರಿಯೇಟ್​ ಆಗಿದ್ದು ಅದರಲ್ಲಿ ಎರಡು ಮುಖದ ಬೆಕ್ಕಿನ ಮರಿಯ ಫೋಟೋ, ವಿಡಿಯೋಗಳನ್ನೂ ಶೇರ್​ ಮಾಡಲಾಗುತ್ತಿದೆ. ಅದನ್ನು ನೋಡಿದ ನೆಟ್ಟಿಗರು ಸಿಕ್ಕಾಪಟೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಅದನ್ನು ದತ್ತು ತೆಗೆದುಕೊಂಡು, ಕಾಳಜಿಯಿಂದ ನೋಡಿಕೊಳ್ಳುತ್ತಿರುವ ಡಾ. ಟ್ರಾನ್​ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಸದ್ಯ ಈ ಕಪ್ಪುಬಣ್ಣದ, ಎರಡು ಮುಖಗಳ ಪುಟಾಣಿ ಬೆಕ್ಕಿನ ಹೊಸದೊಂದು ಪೋಸ್ಟ್​ನ್ನು ಫೇಸ್​ಬುಕ್​ ಪೇಜ್​ನಲ್ಲಿ ಹಾಕಲಾಗಿದೆ. ಇಂದಿಗೆ ಡ್ಯೂಕ್ಕೆ ನಾಲ್ಕು ತಿಂಗಳು ಕಳೆದು ಒಂದು ವಾರವಾಯಿತು. ಕಳೆದ ವಾರಗಳಿಗಿಂತ ತೂಕದಲ್ಲಿ ಹೆಚ್ಚಾಗಿದ್ದಾಳೆ. ಆಹಾರವನ್ನು ಪೂರ್ತಿಯಾಗಿ ತಿನ್ನುತ್ತಾಳೆ. ಆದರೆ ತಿನ್ನುವ ವೇಳೆ ಸ್ವಲ್ಪ ಗಲೀಜು ಮಾಡುತ್ತಾಳೆ ಎಂದು ಕ್ಯಾಪ್ಷನ್​ ಬರೆಯಲಾಗಿದೆ. ಅಲ್ಲದೆ, ಮತ್ತೊಂದು ದೊಡ್ಡ ಬೆಕ್ಕಿನ ಜತೆ ಆಟವಾಡುತ್ತಿರುವ ಹಲವು ಫೋಟೋಗಳನ್ನು ಪೋಸ್ಟ್​ ಮಾಡಲಾಗಿದೆ.

ಡ್ಯೂ ಬೆಕ್ಕಿನ ಮರಿಯನ್ನು ಕಾಳಜಿ ಮಾಡುತ್ತಿರುವ ನಿಮಗೆ ಧನ್ಯವಾದಗಳು, ನಿಮಗೂ, ನಿಮ್ಮ ಬೇಬಿಗೂ ದೇವರು ಒಳ್ಳೆಯದನ್ನು ಮಾಡಲಿ, ನಿಮ್ಮ ಹೃದಯ ವೈಶಾಲ್ಯತೆ ಮೆಚ್ಚುವಂಥದ್ದು, ನಿಮ್ಮ ಕೆಲಸದಿಂದ ನಮಗಂತೂ ತುಂಬ ಸಂತೋಷವಾಯಿತು….ಹೀಗೆ ಅನೇಕ ತರದ ಕಾಮೆಂಟ್​ಗಳನ್ನು ನೆಟ್ಟಿಗರು ಬರೆಯುತ್ತಿದ್ದಾರೆ.

ಸ್ವಲ್ಪ ದಿನಗಳ ಕೆಳಗೆ ತಲೆಯ ಮೇಲೆ ಬಾಲವನ್ನು ಹೊಂದಿರುವ ನಾಯಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿತ್ತು.  

Duo is 4 months and 3 days old today. She is doing well and is very active. Here is a video of her tonight. She took a break from playing with the other cats and came up to me for head scratches and rubs. She got a little impatient when the head scratches slowed down.

Duo the two-faced cat ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ನವೆಂಬರ್ 6, 2019

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...