Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಟ್ರಾೃಕ್ಟರ್ ಮಗುಚಿ ನಿವೃತ್ತ ಡಿಸಿ ದುರ್ಮರಣ

Friday, 13.07.2018, 5:00 AM       No Comments

ಪಾಂಡವಪುರ: ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಟ್ರ್ಯಾಕ್ಟರ್ ಮಗುಚಿ ನಿವೃತ್ತ ಜಿಲ್ಲಾಧಿಕಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಡ್ಯ ತಾಲೂಕಿನ ಸಿದ್ದಯ್ಯನಕೊಪ್ಪಲಿನ ನಿವೃತ್ತ ಡಿಸಿ ಎಸ್.ಎನ್.ನಾಗರಾಜು(65) ಮೃತಪಟ್ಟರು. ತಾಲೂಕಿನ ದೊಡ್ಡಬ್ಯಾಡರಹಳ್ಳಿ ಬಳಿಯ ತಮ್ಮ ತೋಟದಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಮಗುಚಿ ಬಿದ್ದ ಟ್ರಾೃಕ್ಟರ್ ಕೆಳಗೆ ಸಿಲುಕಿ ಅವರು ಮೃತಪಟ್ಟಿದ್ದಾರೆ.

ಘಟನೆ ವಿವರ: ಗುರುವಾರ ಮಧ್ಯಾಹ್ನ ತೋಟವನ್ನು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿದ್ದಾಗ ಒಂದು ಚಕ್ರ ತೆವರಿ ಮೇಲೆ ಏರಿ, ಒಂದು ಕಡೆ ವಾಲಿದೆ. ಆಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಬೇರೊಂದು ಟ್ರಾೃಕ್ಟರ್ ತಂದು ಎಳೆಸೋಣ ಎಂದು ಹೇಳಿದ್ದಾರೆ.

ಆದರೆ, ಕೆಳಗಿಳಿದು ಪರಿಶೀಲಿಸಿದ ಅವರು ತಾನೇ ತೆಗೆಯುವುದಾಗಿ ಹೇಳಿ ಟ್ರಾೃಕ್ಟರ್ ಸ್ಟಾರ್ಟ್ ಮಾಡಿ ಸ್ವಲ್ಪ ಮುಂದೆ ಬಿಡುತ್ತಿದ್ದಂತೆ ಸುಮಾರು 3 ಅಡಿ ಕೆಳಗೆ ಟ್ರಾೃಕ್ಟರ್ ಉರುಳಿಬಿದ್ದಿದೆ. ಇವರು ಟ್ರಾೃಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 ವರ್ಷದ ಹಿಂದೆ ನಿವೃತ್ತಿ: ಸಿದ್ದಯ್ಯನಕೊಪ್ಪಲಿನ ನಂಜಯ್ಯ, ಕೆಂಪಮ್ಮ ದಂಪತಿ ಪುತ್ರರಾದ ಎಸ್.ಎನ್.ನಾಗರಾಜು ಕೆ.ಎ.ಎಸ್. ಮಾಡಿಕೊಂಡು ಮೈಸೂರು ನಗರಪಾಲಿಕೆಯಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಆರಂಭಿಸಿದರು.

ನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಮಂಡ್ಯ ಜಿ.ಪಂ. ಡಿಎಸ್2 ಆಗಿ ಕೆಲಸ ಮಾಡಿದ ಅವರು, ಐಎಎಸ್‌ಗೆ ಬಡ್ತಿ ಪಡೆದು ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ ಆಗಿದ್ದರಲ್ಲದೆ, ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ 2016ರಲ್ಲಿ ನಿವೃತ್ತಿಯಾಗಿದ್ದರು.

ಸೇವೆಯಿಂದ ನಿವೃತ್ತರಾದ ಬಳಿಕ ದೊಡ್ಡಬ್ಯಾಡರಹಳ್ಳಿ ಬಳಿ ಜಮೀನು ಖರೀದಿಸಿ ವ್ಯವಸಾಯ ಮಾಡಿಕೊಂಡಿದ್ದರು. ಕುಟುಂಬ ಸದಸ್ಯರು ಬೆಂಗಳೂರಿನಲ್ಲಿಯೇ ಉಳಿದಿದ್ದರು. ಕೆಲಸ ಇಲ್ಲದ ಸಂದರ್ಭದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು.

ಮೃತರು ಪತ್ನಿ ಮಮತಾ, ಒಬ್ಬ ಪುತ್ರಿ ಹಾಗೂ ಪುತ್ರ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸಿದ್ದಯ್ಯನಕೊಪ್ಪಲು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

 

 ಸಾವಿನಲ್ಲೂ ಸಾರ್ಥಕತೆ: ಟ್ರಾೃಕ್ಟರ್ ಮಗುಚಿ ಮೃತಪಟ್ಟ ನಿವೃತ್ತ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.

ಕುಟುಂಬದವರ ಆಶಯದಂತೆ ಮಂಡ್ಯ ಯೂತ್ ಗ್ರೂಪ್‌ನ ಡಾ.ಅನಿಲ್ ಆನಂದ್ ನೇತೃತ್ವದ ತಂಡ ನೇತ್ರಗಳನ್ನು ಸಂಗ್ರಹಿಸಿ ನಾರಾಯಣ ನೇತ್ರಾಲಯಕ್ಕೆ ರವಾನಿಸಿತು. ಇದರೊಂದಿಗೆ ಯೂತ್ ಗ್ರೂಪ್‌ನಿಂದ ಸಂಗ್ರಹಿಸಿದ ನೇತ್ರಗಳ ಸಂಖ್ಯೆ 38ಕ್ಕೇರಿದೆ. ನೇತ್ರದಾನ ಮಾಡಲಿಚ್ಛಿಸುವವರು ಮೊ.9844442400 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

Back To Top