ಟ್ರ್ಯಾಕ್ಟರ್ ಉರುಳಿಬಿದ್ದು ಬೈಕ್ ಸವಾರ ಸಾವು

ರಾಯಬಾಗ: ತಾಲೂಕಿನ ಕಂಚಕರವಾಡಿ ಬೋರ್ಡ್ ಹತ್ತಿರದ ರಾಯಬಾಗ-ಅಂಕಲಿ ಮುಖ್ಯ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೇಲರ್ ಉರುಳಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕಂಚಕರವಾಡಿ ಬೋರ್ಡ್‌ನ ಸತ್ಯಪ್ಪ ಉರ್ ಅಜ್ಜಪ್ಪ ವಿಠ್ಠಲ ತೋಳೆ (40) ಮೃತಪಟ್ಟ ದುರ್ದೈವಿ. ಈತನ ಸಹೋದರ ಯಲ್ಲಪ್ಪ ಸಿದ್ಧ್ದಲಿಂಗ ತೋಳೆ(35) ಗಂಭೀರವಾಗಿ ಗಾಯಗೊಂಡಿದ್ದು, ಮಿರಜ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ರ್ಯಾಕ್ಟರ್ ರಾಯಬಾಗ ಕಡೆಯಿಂದ ಅಂಕಲಿ ಕಡೆಗೆ ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೊರಟಿತ್ತು. ರಾಯಬಾಗ-ಅಂಕಲಿ ಮುಖ್ಯ ರಸ್ತೆ ಮಧ್ಯೆ ಈ ಅಪಘಾತ ನಡೆದಿದ್ದರಿಂದ ಸುಮಾರು 3 ಗಂಟೆಗಳ ಕಾಲ ರಸ್ತೆ ಬಂದ್ ಆಗಿತ್ತು.