ದೇವಾಲಯಗಳು ಸಂಸ್ಕೃತಿಯ ಪ್ರತಿಬಿಂಬ

ಕೆ.ಆರ್.ಪೇಟೆ: ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಬೆಳಕು ಚೆಲ್ಲುವ ಶರಣ ಶ್ರದ್ಧಾ
ಕೇಂದ್ರಗಳಾಗಿರುವ ದೇವಾಲಯಗಳನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಬೇಕಾಗಿದೆ ಎಂದು ಸಮಾಜಸೇವಕ ಕೆ.ಆರ್.ನಾಗರಾಜಶೆಟ್ಟಿ ಹೇಳಿದರು.

ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ನೇಕಾರ ತೊಗಟವೀರ ಸಮಾಜದ ಶ್ರೀಚೌಡೇಶ್ವರಿ ದೇವಾಲಯದ 3ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಇಂದಿನ ಒತ್ತಡದ ಬದುಕಿನಲ್ಲಿ ದೇವರು ಮತ್ತು ಧರ್ಮದ ಮಾರ್ಗ ದಿಂದ ಮಾತ್ರ ಮನಸ್ಸಿಗೆ ಶಾಂತಿ,ನೆಮ್ಮದಿಯನ್ನು ಪಡೆಯಬಹುದು. ಹಿಡಿದ ಕಾರ್ಯದಲ್ಲಿ ಯಶಸ್ಸನ್ನು ಹೊಂದಬಹುದು. ನಮ್ಮ ಮನ ಸ್ಸಿನ ಕ್ಲೇಷವನ್ನು ಕಳೆಯಲು ಮಾನಸಿಕವಾಗಿ ಸದೃಢರಾಗಲು ಅಧ್ಯಾತ್ಮ ವರದಾನವಾಗಿದೆ. ಪ್ರತಿದಿನ ಒಂದು ಗಂಟೆ ಯೋಗಾಭ್ಯಾಸ ಮಾಡಿ ಧ್ಯಾನ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ದುರ್ಗಾಹೋಮ ನಡೆಸಲಾಯಿತು.ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.