ಬೆಂಗಳೂರು: ಮನುಷ್ಯನಿಗೆ ಆರೋಗ್ಯ ಹಾಗೂ ನೆಮ್ಮದಿ ಬೇಕೆಂದರೆ ದೇವಾಲಯಗಳಿಗೆ ಹೋಗಬೇಕು ಎಂದು ಕೋಡಿ ಮಠದ ಶ್ರೀಗಳು ಹೇಳಿದರು.
ಸೋಮವಂಶದ ಸಹಸ್ರ ಅರ್ಜುನ ಕ್ಷತ್ರಿಯ ಸಮಾಜ ವತಿಯಿಂದ ನಗರದ ಕಿಲಾರಿ ರಸ್ತೆಯಲ್ಲಿ ಭಾನುವಾರ ಆಯೋಜಿದ್ದ ಗಂಗಮ್ಮ ಮತ್ತು ಅಂಬಾಭವಾನಿ ದೇವಿಯ ರಜತ ಮಹೋತ್ಸವ ಹಾಗೂ ದೇವಾಲಯದ ವಿಮಾನ ಗೋಪುರ, ಮುಖಮಂಟಪ ಮತ್ತು ದೇವಿಯ ಪುನರ್ ಪ್ರತಿಷ್ಠಾನ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ಇಂದು ಬಯಸ್ಸಿದ್ದನ್ನಲ್ಲ ಕೊಳ್ಳುವಶಕ್ತಿ ಹೊಂದಿದ್ದಾನೆ. ಆದರೆ, ಆರೋಗ್ಯ ಮತ್ತು ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಇದನ್ನು ಪಡೆಯಲು ಹುಟ್ಟು ಮತ್ತು ಸಾವೂ ಎರಡೂ ಇಲ್ಲದ ಸ್ಥಳ ದೇವಾಲಯದಲ್ಲಿ ಮಾತ್ರ ಸಾಧ್ಯ. ಹಾಗಾಗಿ ಜನರು ದೇವಾಲಯಗಳಿಗೆ ಹೋಗುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗಂಗಮ್ಮ ದೇವಿ ದೇಗುಲದ ಪುನರ್ ಪ್ರತಿಷ್ಠಾಪನಾ ಕಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವುದು ಸಂತೋಷದ ವಿಚಾರ. ಈ ಬಡಾವಣೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಅದಕ್ಕಾಗಿ ಇನ್ನಷ್ಟು ಅನುದಾನ ಸಹ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಅಖಿಲ ಕರ್ನಾಟಕ ಅರ್ಚಕರ ಮತ್ತು ಆಗಮಿಕರ ಸಂಘದ ಕಾರ್ಯದರ್ಶಿ ಕೆ.ಎಸ್.ಎನ್, ದೀಕ್ಷಿತರ ನೇತೃತ್ವದಲ್ಲಿ ದೇವಾಲಯದ ಧಾರ್ಮಿಕ ಕೈಂಕರ್ಯಗಳು ನಡೆಯಿತು.