More

    ತೆರಿಗೆಗಳ್ಳರಿಗೆ 3 ವರ್ಷದ ಬಳಿಕ ಗಾಳ

    ನವದೆಹಲಿ: 2016ರಲ್ಲಿ ನೋಟು ಅಮಾನ್ಯೀಕರಣದ ವೇಳೆ ಆದಾಯಕ್ಕೂ ಮೀರಿ ಭಾರೀ ಪ್ರಮಾಣದ ಹಳೆಯ ನೋಟುಗಳನ್ನು ಹಿಂದಿರುಗಿಸಿದ್ದ ಆಭರಣ ವ್ಯಾಪಾರಿಗಳಿಗೆ ಮೂರು ವರ್ಷಗಳ ಬಳಿಕ ಸಂಕಷ್ಟ ಎದುರಾಗಿದೆ. ನೋಟು ಅಮಾನ್ಯೀಕರಣದ ವೇಳೆ ಅಧಿಕ ಪ್ರಮಾಣದ ಹಳೆಯ ನೋಟುಗಳನ್ನು ಹಿಂದಿರುಗಿಸಿ ಅದಕ್ಕೆ ಸೂಕ್ತ ವಿವರಣೆ ನೀಡದ ಆಭರಣ ವ್ಯಾಪಾರಿಗಳ ವಿರುದ್ಧ ತೆರಿಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಅಧಿಕ ಮೊತ್ತದ ಹಳೆಯ ನೋಟು ಹಿಂದಿರುಗಿಸಿದ ಪ್ರತಿಯೊಬ್ಬರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಇದರಲ್ಲಿ ಬಹುತೇಕ ಆಭರಣ ವ್ಯಾಪಾರಿಗಳೇ ಇದ್ದಾರೆ ಎನ್ನಲಾಗಿದೆ.

    ಗುಜರಾತ್​ನ ಆಭರಣ ವ್ಯಾಪಾರಿಯೊಬ್ಬರು -ಠಿ; 4.10 ಕೋಟಿ ಹಳೆಯ ನೋಟನ್ನು ಹಿಂದಿರುಗಿಸಿದ್ದಾರೆ. ಆದರೆ, ಅವರು ಆದಾಯ ತೆರಿಗೆ ವಿವರ ಸಲ್ಲಿಸುವಾಗ -ಠಿ; 1.20 ಲಕ್ಷ ನಮೂದು ಮಾಡಿದ್ದರು ಮತ್ತು 2015ರಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ -ಠಿ; 44,260 ರೂ. ಇತ್ತು ಎಂಬುದು ತೆರಿಗೆ ಇಲಾಖೆಯ ತನಿಖೆ ವೇಳೆ ಬಹಿರಂಗವಾಗಿದೆ.

    ಮತ್ತೊಂದು ಪ್ರಕರಣದಲ್ಲಿ -ಠಿ; 2.70 ಲಕ್ಷ ಕಡಿಮೆ ಆದಾಯ ಘೋಷಿಸಿದ್ದ ಆಭರಣ ವ್ಯಾಪಾರಿಯೊಬ್ಬರು ಎರಡು ದಿನಗಳಲ್ಲಿ ಸುಮಾರು -ಠಿ; 3.30 ಕೋಟಿ ಹಳೆಯ ನೋಟನ್ನು ಜಮಾ ಮಾಡಿದ್ದಾರೆ. ಮತ್ತೊರ್ವ -ಠಿ; 54 ಲಕ್ಷ ಆದಾಯ ತೋರಿಸಿ -ಠಿ; 2.50 ಕೋಟಿ ಹಳೆಯ ನೋಟು ಹಿಂದಿರುಗಿಸಿದ್ದಾರೆ. ನೋಟು ಅಮಾನ್ಯೀಕರಣದ ಬಳಿಕ -ಠಿ; 52 ಕೋಟಿ ಹಳೆಯ ನೋಟನ್ನು ಬದಲಾವಣೆ ಮಾಡಿಕೊಂಡಿದ್ದ ವ್ಯಾಪಾರಿಯೊಬ್ಬರು ಹಿಂದಿನ ವರ್ಷ ಸಲ್ಲಿಸಿದ ಐಟಿ ರಿಟರ್ನ್ಸ್​ನಲ್ಲಿ ತಮ್ಮ ಆದಾಯ -ಠಿ; 3.20ಕೋಟಿ ಎಂದು ಘೋಷಿಸಿಕೊಂಡಿದ್ದರು. ಇದೇ ರೀತಿ ಅನೇಕ ಉದ್ಯಮಿಗಳು ಮಾಡಿದ್ದು, ಈಗ ಆದಾಯ ಇಲಾಖೆ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾರೆ.

    ಇನ್ನೂ ಕೆಲ ವ್ಯಾಪಾರಿಗಳು ಜನರಿಗೆ ಹೊಸ ನೋಟಿಗೆ ಬದಲಾಯಿಸಿ ಕೊಟ್ಟಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆದರೆ, ಯಾರು ಎಷ್ಟು ಹಳೆಯ ನೋಟನ್ನು ಬದಲಿಸಿಕೊಂಡರು ಎಂಬ ಬಗ್ಗೆ ಆಭರಣ ವ್ಯಾಪಾರಿಗಳು ಮಾಹಿತಿ ನೀಡಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts