ಆದಿವಾಸಿಗಳಿಂದ ಪ್ರತಿಭಟನೆವಿಜಯವಾಣಿ ಸುದ್ದಿಜಾಲ ಎಚ್.ಡಿ.ಕೋಟೆ
ಆದಿವಾಸಿಗಳನ್ನು ಅರಣ್ಯದಿಂದ ಎತ್ತಂಗಡಿ ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶ ರಾಜ್ಯದ ಆದಿವಾಸಿ ಸಮುದಾಯಗಳ ರಕ್ಷಣೆಗೆ ವಿರುದ್ಧವಾಗಿದ್ದು ಇದನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ಹಾಡಿ- ಅರಣ್ಯ ಹಕ್ಕುಗಳ ಸಮಿತಿ ಆಶ್ರಯದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಬುಡಕಟ್ಟು ಕೃಷಿಕರ ಸಂಘದ ಆವರಣದಿಂದ ಹೊರಟ ಆದಿವಾಸಿಗಳು ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಗಿರಿಜನ ಮುಖಂಡ ವಿಜಯ್ಕುಮಾರ್ ಮಾತನಾಡಿ, ಸುಪ್ರೀಂಕೋರ್ಟ್ ಮಾನವ ವಿರೋಧಿ ತೀರ್ಪು ನೀಡಿದೆ. 12 ವರ್ಷಗಳಿಂದ ಆದಿವಾಸಿಗಳಿಗೆ ಎಬಿಸಿ ಹಕ್ಕು ಪತ್ರ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದು ಜನರ ತಪ್ಪಲ್ಲ .ಅಧಿಕಾರಿಗಳ ತಪ್ಪು. ಹಾಗಾಗಿ ಅವರ ಮೇಲೆ ಕ್ರಮ ಜರುಗಿಸ ಬೇಕು ಎಂದರು.
ಕೇಂದ್ರ ಸರ್ಕಾರ ತೀರ್ಪಿನ ಬಗ್ಗೆ ಮಧ್ಯಸ್ಥಿಕೆ ವಹಿಸಿ ಪುನರ್‌ಪರಿಶೀಲನೆ ಮಾಡಿ ಅರಣ್ಯ ಹಕ್ಕು ಕಾಯ್ದೆಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಕೆಂಚಯ್ಯ, ಬಿ.ಎಂ.ನಟರಾಜು, ಪಾರ್ವತಿ, ಬಸವರಾಜು, ಡಿ.ಎಂ. ಬಸವರಾಜು, ಚಿಕ್ಕ ಬೊಮ್ಮ, ಕರಿಯಯ್ಯ, ರಾಜು ಕೆಬ್ಬೆಪುರ, ಮಹದೇವು, ಜಿ.ಸ್ವಾಮಿ, ಟಿ.ಸಿ.ಸುರೇಶ್, ಪೀಪಲ್ ಟ್ರೀ ತಮ್ಮಯ್ಯ, ಸೋನಳ್ಳಿ ಹಾಡಿ ರಾಮು, ಬಸಮ್ಮ, ಸೋಮಮ್ಮ ,ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೆ ಅಂಚೆ ಮೂಲಕ ಪತ್ರ ಕಳಿಸುವ ಚಳವಳಿ ನಡೆಯಿತು.

Leave a Reply

Your email address will not be published. Required fields are marked *