ಸಿರಿಗೆರೆ ಮಠಕ್ಕೆ ಉತ್ತರಾಧಿಕಾರಿ ನೇಮಕಕ್ಕೆ ಪಟ್ಟು: ಶಾಮನೂರು ನೇತೃತ್ವದಲ್ಲಿ ಆ. 18ರಂದು ಸ್ವಾಮೀಜಿ ಭೇಟಿಗೆ ನಿರ್ಣಯ

ದಾವಣಗೆರೆ : ಸಿರಿಗೆರೆ ತರಳಬಾಳು ಮಠಕ್ಕೆ ಉತ್ತರಾಧಿಕಾರಿ ನೇಮಕ ಹಾಗೂ ವಿವಾದಕ್ಕೆ ಎಡೆ ಮಾಡಿರುವ ಏಕ ವ್ಯಕ್ತಿ ಡೀಡ್ ರದ್ದತಿಗೆ ಪಟ್ಟು ಹಿಡಿದಿರುವ ಭಕ್ತ ವೃಂದ, ಇದಕ್ಕೆ ಗುರುಗಳು ಒಪ್ಪದೆ ಹೋದರೆ ಹೋರಾಟದ ಹಾದಿ ತುಳಿಯುವ ಘೋಷಣೆ ಮಾಡಿದೆ.

ಈ ಎರಡೂ ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಆ.18ರಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ 25 ಜನರ ಸಮನ್ವಯ ಸಮಿತಿ ಬೆಂಗಳೂರಿನಲ್ಲಿ ಸಿರಿಗೆರೆ ಶ್ರೀಗಳನ್ನು ಭೇಟಿ ಮಾಡಿ ವಿಷಯ ಮನವರಿಕೆ ಮಾಡಿಕೊಡಲಿದೆ.

ಈ ವೇಳೆ ಸಕಾರತ್ಮಕ ಪ್ರತಿಕ್ರಿಯೆ ಸಿಗದೆ ಗೊಂದಲ ಮುಂದುವರಿದರೆ ಮಠಕ್ಕೆ ಪಾದಯಾತ್ರೆ ಕೈಗೊಳ್ಳುವುದು ಸೇರಿದಂತೆ ವಿವಿಧ ಸ್ವರೂಪದ ಹೋರಾಟ ರೂಪಿಸಲು ದಾವಣಗೆರೆಯ ಅಪೂರ್ವ ರೆಸಾರ್ಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ತರಳಬಾಳು ಮಠದ ಸದ್ಭಕ್ತರ ಸಮಾಲೋಚನೆ ಸಭೆ ನಿರ್ಣಯ ಅಂಗೀಕರಿಸಿದೆ.

Sirigere Taralabalu Mutt

ಶಾಮನೂರು ಶಿವಶಂಕರಪ್ಪ, ಉದ್ಯಮಿ ಅಣಬೇರು ರಾಜಣ್ಣ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಬಿ.ಸಿ.ಪಾಟೀಲ್ ಮತ್ತಿತರ ಪ್ರಮುಖರಿದ್ದ ಸಭೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಕಾಳಜಿ ವ್ಯಕ್ತವಾಯಿತು.

ಇದಕ್ಕೂ ಮುಂಚೆ ಸಭೆಯಲ್ಲಿ ಮಾತನಾಡಿದ ಸಮಾಜದ ಮುಖಂಡರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗುರುಗಳು ತಮ್ಮ ನಡೆಯನ್ನು ತಿದ್ದಿಕೊಳ್ಳದಿದ್ದರೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗುತ್ತದೆ ಎಂಬ ಮುನ್ಸೂಚನೆ ನೀಡಲಾಯಿತು.

ಹಿರಿಯ ಗುರುಗಳ ಅವಧಿಯಲ್ಲಿ ರೂಪಿತವಾಗಿದ್ದ ನಿಯಮಗಳ ಪ್ರಕಾರ 60 ವರ್ಷದ ನಂತರ ಪೀಠ ತ್ಯಾಗ ಮಾಡಿ ಉತ್ತರಾಧಿಕಾರಿ ನೇಮಿಸಬೇಕು. ಆ ನಿಯಮ ಪಾಲನೆಯಾಗುತ್ತಿಲ್ಲ.ಈಗಿನ ಜಗದ್ಗುರುಗಳಿಗೆ 78 ವರ್ಷ ವಯಸ್ಸಾಗಿದೆ. ಮರಿ ಗುರುಗಳನ್ನೂ ನೇಮಿಸಿಲ್ಲ ಎಂಬುದು ಭಕ್ತರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು.

ಮಠದ ಸಂಪೂರ್ಣ ಆಡಳಿತವನ್ನು ಸ್ವಾಮೀಜಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. 30 ವರ್ಷಗಳ ಹಿಂದೆ ಟ್ರಸ್ಟ್ ರಚಿಸಿ,ಮಾಡಿರುವ ಏಕ ವ್ಯಕ್ತಿ ಡೀಡ್ ವಿಸರ್ಜಿಸಬೇಕು. ಭಕ್ತರ ತೀರ್ಮಾನವೇ ಅಂತಿಮ ಆಗಬೇಕು ಎಂದು ಸಭೆ ಅಭಿಪ್ರಾಯಪಟ್ಟಿತು. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೆಂಗಳೂರು ಸೇರಿ ರಾಜ್ಯದ ನಾನಾ ಜಿಲ್ಲೆಗಳಿಂದ ಮುಖಂಡರು ಆಗಮಿಸಿದ್ದರು.

Sirigere Taralabalu Mutt

ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಯಿತು. ಎಸ್.ಎ. ರವೀಂದ್ರನಾಥ್, ಬಿ.ಸಿ.ಪಾಟೀಲ್, ಮಾಡಾಳು ವಿರೂಪಾಕ್ಷಪ್ಪ, ಅಣಬೇರು ರಾಜಣ್ಣ ಇತರರು ಸಮಿತಿಯಲ್ಲಿದ್ದಾರೆ.

ಸ್ವಾಮೀಜಿ ಭೇಟಿ ನಂತರವೇ ಮುಂದಿನ ನಿರ್ಧಾರ
ತಪ್ಪುಗಳಾಗುವುದು ಸಹಜ. ಭಕ್ತರ ಮನಸ್ಸಿನ ಭಾವನೆಗಳನ್ನು ಗುರುಗಳಿಗೆ ಮನವರಿಕೆ ಮಾಡೋಣ. ಆದರೂ ಅವರು ಹಠ ಮಾಡಿದರೆ ಬೇರೆ ಉಪಾಯಗಳನ್ನು ಹುಡುಕೋಣ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.

ಹತ್ತು ವರ್ಷಗಳ ಹಿಂದೆ ಗುರುಗಳು ಪೀಠ ತ್ಯಾಗದ ಮತುಗಳನ್ನು ಆಡಿದಾಗ ಗ್ರಾಮೀಣ ಪ್ರದೇಶದ ಮುಗ್ಧ ಭಕ್ತರು ಭಾವುಕರಾಗಿ ಆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು. ಅದಾದ ನಂತರ ಗುರುಗಳು ಪೀಠ ತ್ಯಾಗದ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದರು. ವಿಷಯ ದೊಡ್ಡದು ಮಾಡುವುದು ಬೇಡ. ಸಮಿತಿ ರಚಿಸಿಕೊಂಡು ಸ್ವಾಮೀಜಿ ಅವರನ್ನು ಭೇಟಿಯಾಗೋಣ. ನಂತರ ಮುಂದಿನ ನಿರ್ಧಾರಕ್ಕೆ ಬರೋಣ. ಸಿರಿಗೆರೆ ಪೀಠ ಮತ್ತು ಸಾಣೇಹಳ್ಳಿ ಮಠ ಎರಡಕ್ಕೂ ಉತ್ತರಾಧಿಕಾರಿಗಳನ್ನು ನೇಮಕ ಮಾಡಲಿ ಎಂದು ಅಭಿಪ್ರಾಯಪಟ್ಟರು.

ನಮ್ಮದು ದೊಡ್ಡ ಸಮಾಜವಾಗಿದ್ದು ಶೋಚನೀಯ ಸ್ಥಿತಿಗೆ ತಲುಪಿದೆ. ಮಠದ ಗೌರವವನ್ನು ಕಾಪಾಡಿಕೊಳ್ಳಬೇಕಿದೆ. ಪೀಠದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ಸರಿಪಡಿಸಬೇಕಿದೆ. ಮಠ ಕೆಲವರು ಸ್ವತ್ತು ಎನ್ನುವಂತಾಗಿದೆ. ಭಕ್ತರ ಮೇಲೆ ಕೇಸ್ ಹಾಕುತ್ತಾರೆ. ರೌಡಿ ಸ್ವಭಾವದವರನ್ನು ಜತೆಗಿಟ್ಟುಕೊಂಡಿದ್ದಾರೆ. ಇಂಜಿನಿಯರಿಂಗ್ ಕಾಲೇಜು ಸೇರಿ ಮಠದ ಶಿಕ್ಷಣ ಸಂಸ್ಥೆಗಳು ಒಂದೊಂದಾಗಿ ಕಣ್ಣು ಮುಚ್ಚುತ್ತಿವೆ.

| ಅಣಬೇರು ರಾಜಣ್ಣ, ಸಮಾಜದ ಮುಖಂಡ, ಹೋಟೆಲ್ ಉದ್ಯಮಿ

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಸಾಣೇಹಳ್ಳಿ ಕಾರ್ಯಕ್ರಮಕ್ಕೆ ಹೋದ ಕಾರಣ ನನ್ನನ್ನು ಸಿರಿಗೆರೆ ಮಠದ ಕಾಯಕ್ರಮಗಳಿಂದ ಹೊರಗಿಟ್ಟರು. ಗುರುಗಳ ಇಂಥ ಮನಸ್ಥಿತಿ ಕಂಡು ಬೇಸರವಾಯಿತು. ಪೀಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಿ ಅವರಿಗೆ ಸಂಸ್ಕಾರ ಹೇಳಿಕೊಡಬೇಕಾಗುತ್ತದೆ. ಮಠದ ಪರಂಪರೆಯನ್ನು ಅವರು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಆದರೂ ಮುಂದಿನ ಪೀಠಾಧಿಪತಿಯನ್ನು ಏಕೆ ನೇಮಕ ಮಾಡುತ್ತಿಲ್ಲ?

| ಬಿ.ಸಿ.ಪಾಟೀಲ್, ಮಾಜಿ ಸಚಿವರು.

ಮುಖಂಡ ಚಟ್ನಳ್ಳಿ ಮಹೇಶ್, ಆನಗೋಡು ನಂಜುಂಡಪ್ಪ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಟಿ. ಗುರುಸಿದ್ಧನಗೌಡ, ಮಾಡಾಳು ಮಲ್ಲಿಕಾರ್ಜುನ್ ಇದ್ದರು.ಐಗೂರು ಚಂದ್ರಶೇಖರ್ ನಿರ್ಣಯ ಮಂಡಿಸಿದರು.

ನಿಮ್ಮ ಕಣ್ಣಿಗೊಂದು ಸವಾಲ್​: ಜೀನಿಯಸ್​​ ಮಾತ್ರ ಈ ಫೋಟೋದಲ್ಲಿರುವ ಮೊಲ ಪತ್ತೆ ಹಚ್ಚಬಲ್ಲರು!

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…