ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ನೂತನ ವಿಮಾನ ಸೇವೆ ಆರಂಭವಾಗಿದೆ.
ಟ್ರೂಜೆಟ್ ಏರ್ಲೈನ್ಸ್ನಿಂದ ಪ್ರಾರಂಭವಾದ ಬೆಳಗಾವಿ-ತಿರುಪತಿ ಮತ್ತು ಬೆಳಗಾವಿ-ಮೈಸೂರು ವಿಮಾನ ಸೇವೆಯನ್ನು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ ಲೋಕಾರ್ಪಣೆ ಮಾಡಿದರು.
ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ, ಟ್ರೂಜೆಟ್ ಏರ್ಲೈನ್ಸ್ ಪದಾಧಿಕಾರಿಗಳು ಇದ್ದರು.