ಯಲಬುರ್ಗಾ: ಕೀಡಾಪಟುಗಳು ಹಾಗೂ ವಾಯುವಿಹಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮಾದರಿ ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕರು ಮುಂದಾಗಿರುವುದು ಸಂತಸ ತಂದಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ ಹೇಳಿದರು.

ಪಟ್ಟಣದ ಕೊಪ್ಪಳ ರಸ್ತೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ವಿಠ್ಠಲ ಬಿ. ಜಾಬಗೌಡರ ಹಾಗೂ ಕ್ರೀಡಾಪಟು ಮಲ್ಲು ಜಕ್ಕಲಿ ಮಾತನಾಡಿ, ಶಾಸಕರಾದ ಬಸವರಾಜ ರಾಯರೆಡ್ಡಿ ಅವರ ಸಹಕಾರದಿಂದ ರಾಜ್ಯ ಸರ್ಕಾರದಿಂದ ಮಾದರಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ 6 ಕೋಟಿ, ಹಾಗೂ ಕೆಕೆಆರ್‌ಡಿಬಿ ನಿಗಮದಿಂದ 3 ಕೋಟಿ ರೂ. ವೆಚ್ಚದಲ್ಲಿ ಮಾದರಿ ಕ್ರೀಡಾಂಗಣಕ್ಕೆ ನಿರ್ಮಾಣದ ಜತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ , ಶೌಚಗೃಹ ನಿರ್ಮಿಸಲಾಗುವುದು. ಎಲ್ಲೆಂದರಲ್ಲಿ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ನೀಡದೆ, ಒಂದೆರಡು ಕಡೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು. ಈಗಾಗಲೇ, ಇರುವಂತ ಕಟ್ಟಡ ಶೀತಲಾವಸ್ಥೆಯಲ್ಲಿದೆ. ಕೆಲವರು ತಂತಿ ಬೇಲಿ ಮುರಿದು ದಾರಿ ಮಾಡಿದ್ದಾರೆ. ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಹನುಮಂತ ಭಜಂತ್ರಿ, ಪ್ರಮುಖರಾದ ಹನುಮಂತಗೌಡ ಪಾಟೀಲ್ ಚಂಡೂರ್, ಸಂಗಣ್ಣ ಟೆಂಗಿನಕಾಯಿ, ರೇವಣಪ್ಪ ಸಂಗಟಿ, ಶಿವನಗೌಡ ದಾನರೆಡ್ಡಿ, ಎಂ.ಎ್.ನದ್ಾ, ಹಂಪಯ್ಯಸ್ವಾಮಿ ಹಿರೇಮಠ, ಜಯಶ್ರೀ ಕಂದಕೂರ, ಶರಣಮ್ಮ ಪೂಜಾರ, ರೆಹಮಾನಸಾಬ್ ನಾಯಕ, ನಿಂಗಪ್ಪ ಕಮತರ್, ಶರಣಗೌಡ ಪಾಟೀಲ್, ಪುನೀತ ಕೊಪ್ಪಳ, ಸಿಬ್ಬಂದಿ ಸುಭಾಷ್ ಬಾವಿಮನಿ, ವೆಂಕಣ್ಣ ಜೋಶಿ, ಶಿವಕುಮಾರ, ರಮೇಶ ಇತರರಿದ್ದರು.