ಪೋರ್ನ್​ ಕಲೆಕ್ಷನ್​ ನಾಶ ಪಡಿಸಿದ್ದಕ್ಕಾಗಿ ತಂದೆ-ತಾಯಿ ವಿರುದ್ಧವೇ ಮೊಕದ್ದಮೆ ಹೂಡಿದ ಮಗ

ಮಿಶಿಗನ್, ಅಮೇರಿಕಾ: ಅಶ್ಲೀಲ ವಿಡಿಯೋ (ಪೋರ್ನೋಗ್ರಫಿ​) ಸಂಗ್ರಹವನ್ನು ನಾಶಪಡಿಸಿದ್ದಕ್ಕಾಗಿ ಮಿಶಿಗನ್ನಿನಲ್ಲಿ ತಂದೆ-ತಾಯಿ ವಿರುದ್ಧ ಮಗನೇ ಮೊಕದ್ದಮೆ ಹೂಡಿದ ಘಟನೆ ನಡೆದಿದೆ. ಈ ಕುರಿತು ಮಗನೇ $86000 (60 ಲಕ್ಷ ರೂ.) ನಷ್ಟು ಪರಿಹಾರ ಕೋರಿ ದಾವೆ ಹೂಡಿದ್ದಾನೆ.

ಘಟನೆಯ ವಿವರ: ಮಗ ವಿಚ್ಛೇದನ ಪಡೆದ ನಂತರ ಸುಮಾರು 10 ತಿಂಗಳು ತಂದೆ ತಾಯಿಯೊಂದಿಗೆ ಇದ್ದು ಆ ಬಳಿಕ ಹೊಸ ವಿಳಾಸಕ್ಕೆ ತೆರಳಿದ್ದಾನೆ. ಆ ವೇಳೆ ಆತನ ಆಸ್ತಿಯನ್ನು ಹಿಂದಿರುಗಿಸುವ ವೇಳೆ ಮಗನ ಅನುಪಸ್ಥಿತಿಯಲ್ಲಿ ಅಶ್ಲೀಲ ಚಿತ್ರಗಳಿರುವ ಬಾಕ್ಸ್ ಅನ್ನು ತಂದೆ ಗಮನಿಸಿದ್ದು ಅವರು ಅದನ್ನು ನಾಶ ಪಡಿಸಿದ್ದಾರೆ.

ಇದರಿಂದಾಗಿ ಆತ ಪೊಲೀಸರ ಮೊರೆ ಹೋಗಿದ್ದು ಪಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾನೆ. ಆತನ ತಂದೆ ಈ ವಸ್ತುಗಳನ್ನು ನಾಶಮಾಡಿದ್ದಾಗಿ ಒಪ್ಪಿಕೊಂಡಿದ್ದು, ತನ್ನ ಮಗನ ಒಳ್ಳೆಯದಕ್ಕಾಗಿ ಅದನ್ನು ನಾಶ ಮಾಡಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ತಂದೆ ಮತ್ತು ಮಗನ ನಡುವೆ ಇಮೇಲ್ ನಲ್ಲಿ ಸಂಭಾಷಣೆ ನಡೆದಿದ್ದು ತಂದೆಯು ನಿನ್ನ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕಾಗಿ ಅಶ್ಲೀಲ ವಿಡಿಯೋವನ್ನು ನಾಶಮಾಡಿದೆ ಎಂದು ತಿಳಿಸಿದ್ದಾರೆ. ಮತ್ತು ಅಲ್ಲಿ ಕೆಜಿಗಟ್ಟಲೆ ಕೊಕೈನ್​ ದೊರೆತಿದ್ದರೂ ಅದನ್ನು ನಾಶ ಪಡಿಸುತ್ತಿದ್ದೆ ಎಂದು ತಿಳಿಸಿದ್ದಾರೆ.

ಆದರೂ ಮಗ ಪ್ರಕರಣವನ್ನು ಕೈಬಿಡದೆ $29,000 (20 ಲಕ್ಷ ರೂ.) ಗಳಷ್ಟು ಮೌಲ್ಯದ ಸಂಗಹ್ರ ನಾಶವಾಗಿದೆ. ಸಂಗ್ರಹದಲ್ಲಿ ಕೆಲವು ಅಪರೂಪದ ಮತ್ತು ಇನ್ನು ಕೂಡ ಪ್ರಿಂಟ್ ಆಗದ ಸಿನೆಮಾಗಳಿದ್ದವು ಎಂದಿದ್ದಾನೆ. ಹಾಗೂ $ 86000ನಷ್ಟು (60 ಲಕ್ಷ ರೂ.) ನಷ್ಟು ಪರಿಹಾರ ನೀಡಬೇಕೆಂದು ಕೋರಿದ್ಧಾನೆ.(ಏಜೆನ್ಸೀಸ್​)