ಬೆಂಗಳೂರು: ಅಮ್ಮ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಮಿಳುನಾಡು ಮೂಲದ ಬಿ.ಎಸ್.ಅಯ್ಯಪ್ಪ (೧೯) ಆತ್ಮಹತ್ಯೆ ಮಾಡಿಕೊಂಡ ಯುವಕ.
ಹೆಣ್ಣೂರಿನ ಗಾರ್ವೇಪಾಳ್ಯದಲ್ಲಿ ಬಾಡಿಗೆ ಮನೆಯೊಂದರಲ್ಲಿ ತಾಯಿಯೊಂದಿಗೆ ವಾಸವಿದ್ದ ಅಯ್ಯಪ್ಪ ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ತಾಯಿ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು.
ಇವರ ತಂದೆ ೪ ವರ್ಷದ ಹಿಂದೆ ಮೃತಪಟ್ಟಿದ್ದರು. ಅಕ್ಕ ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ.
ಬೈಕ್ ಕ್ರೇಜ್ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ತಾಯಿಯನ್ನ ಕಳೆದ ಎರಡು ತಿಂಗಳಿನಿಂದ ಪದೇ ಪದೇ ಬೈಕ್ ಕೊಡಿಸುವಂತೆ ಪೀಡಿಸುತ್ತಿದ್ದ. ಆದರೆ ಬೈಕ್ ಕೊಡಿಸಲು ಆ ತಾಯಿಗೆ ಬಡತನ ಅಡ್ಡಿಯಾಗಿತ್ತು. ಇದರಿಂದ ಸ್ವಲ್ಪ ದಿನ ಕಾಯುವಂತೆ ತಾಯಿ ಹೇಳಿದ್ದರು. ಕಾಲೇಜಿನಲ್ಲಿ ಎಲ್ಲರು ಬೈಕ್ ತರುತ್ತಾರೆ. ಹೀಗಾಗಿ ನನಗೂ ಬೈಕ್ ಕೊಡಿಸುವಂತೆ ಹಠ ಮಾಡುತ್ತಿದ್ದ. ನಿಮ್ಮ ಭಾವ ಮಣಿಗೆ ಹೇಳಿ ನಿನಗೆ ಬೈಕ್ ಕೊಡಿಸುತ್ತೇನೆ ಎಂದು ಸಮಾಧಾನಪಡಿಸಿದ್ದರು. ಅಲ್ಲದೇ ಇವರ ತಾಯಿ ಬೈಕ್ ಕೊಡಿಸಲು ೫೦ ಸಾವಿರ ರೂ. ಸಾಲ ಕೂಡ ಮಾಡಿದ್ದು, ಇನ್ನು ಎರಡ್ಮೂರು ದಿನದಲ್ಲಿ ಬೈಕ್ ಕೊಡಿಸಲು ನಿರ್ಧರಿಸಿದ್ದಳು ಎನ್ನಲಾಗಿದೆ. ಆದರೆ ಬುಧವಾರ ಬೆಳಗ್ಗೆ ೬.೩೦ ರ ತಾಯಿ ಕೆಲಸಕ್ಕೆ ಹೋಗುವಾಗ ಮತ್ತೆ ಬೈಕ್ ಕೊಡಿಸು ಇಲ್ಲವಾದರೆ ನಾನು ಕಾಲೇಜಿಗೆ ಹೋಗುವುದಿಲ್ಲ ಎಂದು ಜಗಳ ಮಾಡಿದ್ದಾನೆ. ಸರಿ ಆಯ್ತು ನಾನು ಕೆಲಸಕ್ಕೆ ಹೋಗಿ ಬಂದು ನಿಮ್ಮ ಭಾವನ ಬಳಿ ಮಾತನಾಡಿ ಖಂಡಿತಾ ಬೈಕ್ ಕೊಡಿಸುತ್ತೀನಿ ಎಂದು ಹೇಳಿ ಕೆಲಸಕ್ಕೆ ಹೋಗಿದ್ದಾರೆ. ಮಗ ಎಂದಿನಂತೆ ಕಾಲೇಜಿಗೆ ಹೋಗಿರಬೇಕು ಎಂದು ಅಂದುಕೊಂಡಿದ್ದ ತಾಯಿ ಸಂಜೆ ೪.೩೦ ಕ್ಕೆ ಮನೆಗೆ ಬಂದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಯುವಕ ಸೂಕ್ಷ್ಮ ಮನಸ್ಸಿನ ಮತ್ತು ಹಠಮಾರಿ ಗುಣದವನಾಗಿದ್ದ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗ
You Might Also Like
Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..
ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…
Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ
ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…
ಎಷ್ಟು ಪ್ರಮಾಣದಲ್ಲಿ ಉಪ್ಪು ಸೇವಿಸಿದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್? ಇಲ್ಲಿದೆ ಉಪಯುಕ್ತ ಮಾಹಿತಿ… Salt
ಊಟಕ್ಕೆ ಉಪ್ಪು ( Salt ) ತುಂಬಾನೇ ಅವಶ್ಯಕವಾಗಿದ್ದರೂ ಅದು ಆರೋಗ್ಯ ( Health )…