ಚಂದ್ರವನ ಆಶ್ರಮದ ಸಾಮಾಜಿಕ ಕಳಕಳಿ ಶ್ಲಾಘನೀಯ

blank

ಶ್ರೀರಂಗಪಟ್ಟಣ: ಚಂದ್ರವನ ಆಶ್ರಮ ಭರತ ನೆಲದ ಧಾರ್ಮಿಕ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಗುರು ಶ್ರೀರಕ್ಷೆಯೊಂದಿಗೆ ಭಕ್ತರಿಗೆ ಉಳಿಸಿ ತಿಳಿಸಿಕೊಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.


ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ನವರಾತ್ರಿ ಧಾರ್ಮಿಕ ಸಮಾರೋಪ ಸಮಾರಂಭ, ಪ್ರಶಸ್ತಿ ಪ್ರದಾನ ಹಾಗೂ ಮಡಿಲಕ್ಕಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜತೆಗೆ ಸಮಾಜವನ್ನು ಉತ್ತಮ ದಿಕ್ಕಿನತ್ತ ಕೊಂಡೊಯ್ಯಲು ಸಾಮಾಜಿಕ ಕಳಕಳಿಯಿಂದಲೂ ಹಲವು ಜವಾಬ್ದಾರಿ ಕಾರ್ಯಗಳನ್ನು ಬದ್ಧತೆಯಿಂದ ನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.


ದೈವಿಕ ಶಕ್ತಿಯ ಗುಣವಿರುವ ಶ್ರೀರಂಗಪಟ್ಟಣ ದೈವಪುರುಷ ಋಷಿಮುನಿಗಳ ತಪೋಭೂಮಿ. ಈ ನೆಲದಲ್ಲಿ ನಾಡಹಬ್ಬ ದಸರಾ ಆಚರಣೆ ಮೊದಲು ಪ್ರಾರಂಭವಾಗಿರುವುದು ಸರ್ವಕಾಲಕ್ಕೂ ಇತಿಹಾಸ. ಇಂಥ ನವರಾತ್ರಿ ಆಚರಣೆಯನ್ನು ಚಂದ್ರವನ ಮಠದಲ್ಲಿ ಸಾಂಪ್ರದಾಯಕವಾಗಿ ಆಚರಿಸಿ ಲೋಕಕಲ್ಯಾಣರ್ಥ ಸರ್ವರ ಸುಖ, ಸಮೃದ್ಧಿ, ಏಳ್ಗೆಗೆ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮೌನಾನುಷ್ಠಾನ ಕೈಗೊಂಡು ಪ್ರಾರ್ಥಿಸುತ್ತಿದ್ದಾರೆ. ಇದರಿಂದ ಶಾಂತಿಯುತ ಸಮಾಜಕ್ಕೆ ಉದ್ದೇಶಪೂರ್ವಕವಾಗಿ ಕೆಡುಕು ಬಯಸುವ ದುಷ್ಟಶಕ್ತಿಗಳನ್ನು ಗುರುಶ್ರೀರಕ್ಷೆಗಳು ನಿಗ್ರಹಿಸಿ ಸುಭಿಕ್ಷತೆ ಕರುಣಿಸಿವೆ. ಇಂತಹ ಮಠಗಳು ವಿದ್ಯೆ, ಅನ್ನದಾನ ಜತೆಗೆ ಸಂಸ್ಕಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಿರುವುದು ಅರ್ಥಪೂರ್ಣ ಎಂದರು.


ದಿವ್ಯ ನೇತೃತ್ವವಹಿಸಿದ್ದ ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರಗಳಿಂದ ಯುವ ಸಮೂಹ ದೂರವಾಗುತ್ತಿರುವ ಕಾರಣ ಚಂಚಲ ಮನಸ್ಸಿನಿಂದ ದುಡುಕು ನಿರ್ಧಾರಗಳು ಹಾಗೂ ಘಟನೆಗಳು ನಡೆಯುತ್ತಿವೆ. ಕುಟುಂಬದಲ್ಲಿ ತಾಯಿ ನೀಡುವ ಪಾಠದ ಜತೆಗೆ ಗುರುವಿನ ನೀತಿಯೂ ವ್ಯಕ್ತಿ ಮೇಲೆ ಪ್ರಭಾವಗೊಂಡಲ್ಲಿ ಆತ ಏನಾದರೂ ಸಾಧನೆಗೆ ಮುಂದಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.


ಚಂದ್ರವನ ಆಶ್ರಮ ನೊಂದ ಮನಸುಗಳನ್ನು ಸಂತೈಸಿ ಚೈತನ್ಯ ತುಂಬುವ ತವರು ಮಠವಾಗಿರುವ ಜತೆಗೆ ಆಯುರ್ವೇದ ಆಸ್ಪತ್ರೆ ಮೂಲಕ ಅನಾರೋಗ್ಯಕ್ಕೆ ತುತ್ತಾದವರನ್ನು ಗುಣಮುಖಪಡಿಸುವ ಕಾರ್ಯ ನಡೆಯುತ್ತಿದೆ. ಆಯುರ್ವೇದ ಎಂದರೆ ಹಿಂದು ಸಂಸ್ಕೃತಿಯಲ್ಲಿ ಆಯುಷ್ ವೇದ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಚಂದ್ರವನ ಕೇವಲ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಸಮಾಜದ ಸುಧಾರಣೆಯಲ್ಲೂ ಸಾಧನೆ ಮಾಡಲಿ ಎಂದು ಆಶಿಸಿದರು.


ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದರು. ಮಠದ ಪೀಠಾಧಿಪತಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪದ್ಮಶ್ರೀ ಡಾ.ಕೆ.ಎಸ್.ರಾಜಣ್ಣ ಅವರಿಗೆ ಶ್ರೀಮಠದಿಂದ ಕೊಡಮಾಡುವ ಕಾವೇರಿ ಪ್ರಶಸ್ತಿಯನ್ನು ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳ ನೇತೃತ್ವದಲ್ಲಿ ಗಣ್ಯರು ಪ್ರದಾನ ಮಾಡಿದರು. ಇದರೊಂದಿಗೆ ಮೈಸೂರಿನ ಗುರು ವಿದ್ಯಾವಿಕಾಸ ಕೇಂದ್ರದ ಡಾ.ಸೋಮಶೇಖರ ಸ್ವಾಮಿ(ಧಾರ್ಮಿಕ ಕ್ಷೇತ್ರ), ಹೋಮಿಯೋಪತಿ ತಜ್ಞ ನಾಡೋಜ ಡಾ.ಬಿ.ಟಿ.ರುದ್ರೇಶ್(ವೈದ್ಯಕೀಯ ಕ್ಷೇತ್ರ), ಗೋಣಿ ಫಕೀರಪ್ಪ(ಆಡಳಿತ ಕ್ಷೇತ್ರ), ಐಸಿಎಟಿಟಿ ಫೌಂಡೇಷನ್ ಸಂಸ್ಥಾಪಕಿ ಡಾ.ಶಾಲಿನಿ(ವೈದ್ಯಕೀಯ ಕ್ಷೇತ್ರ), ಎಂ.ಭೋಜರಾಜನ್(ಉದ್ಯಮ), ಬೆಂಗಳೂರಿನ ಪಿ.ಸಿ.ಗೋಪಾಲ್ ರೆಡ್ಡಿ(ಸಾಮಾಜಿಕ) ಅವರಿಗೆ ಕಾಯಕ ಸೇವಾ ಧುರಿಣ ಪ್ರಶಸ್ತಿ ನೀಡಲಾಯಿತು. ಬಳಿಕ ಶ್ರೀಮಠದಿಂದ ತವರು ಮಠ ಪರಂಪರೆಯಾಗಿ ನೆರೆದಿದ್ದ ಸಾವಿರಾರು ಮಹಿಳೆಯರಿಗೆ ಮಡಿಲಕ್ಕಿ ತುಂಬಿ ಬಾಗಿನ ಅರ್ಪಿಸಲಾಯಿತು.


ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮೈಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಅಧ್ಯಕ್ಷ ನಾಗರಾಜಪ್ಪ, ಮುಖಂಡ ಪೈ.ಮುಕುಂದ, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇತರರು ಇದ್ದರು.

Share This Article

Skin Care | ಚಳಿಗಾಲದಲ್ಲಿ ನಿಮ್ಮ ತ್ವಚೆಯು ಹಾಳಾಗದಂತೆ ಎಚ್ಚರವಹಿಸಿ; ಈ ಫೇಸ್​ಪ್ಯಾಕ್ ಟ್ರೈ ಮಾಡಿ ಫಲಿತಾಂಶ ನೀವೇ ನೋಡಿ..

ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…

ಈ ಆಹಾರ ಪದಾರ್ಥದಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ; Health Tips ನಿಮಗಾಗಿ

ಕ್ಯಾನ್ಸರ್​​ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.…

ಚಳಿಗಾಲದಲ್ಲಿ ಕೈ&ಕಾಲ್ಬೆರಳುಗಳ ಊತಕ್ಕೆ ಕಾರಣ ಈ ಕಾಯಿಲೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ… | Health Tips

ಚಳಿಗಾಲದಲ್ಲಿ ನೆಗಡಿ ಮಾತ್ರವಲ್ಲದೆ ಹಲವಾರು ಕಾಯಿಲೆಗಳು ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅದರಲ್ಲಿ ಚಿಲ್ಬ್ಲೈನ್ಸ್ ರೋಗವು ಒಂದಾಗಿದೆ. ಬಹುಶಃ…