ಗುಳೇದಗುಡ್ಡ: ಮೌನ ಯೋಗಿಗಳಾಗಿದ್ದ ಲಿಂ.ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಸಮಾಜದ ಲೋಕೋದ್ಧಾರಕ್ಕೆ ತಮ್ಮ ಜೀವನವನ್ನೇ ಸವೆಸಿದ್ದಾರೆ. ಅವರ ಸ್ಮರಣೆ ನಮಗೆಲ್ಲ ಸ್ಫೂರ್ತಿದಾಯಕವಾಗಿದೆ ಎಂದು ಬಿಲ್‌ಕೆರೂರ ಬಿಲ್ವಾಶ್ರಮದ ಶ್ರೀ ಸಿದ್ದಲಿಂಗ ಸ್ವಾಮಿಗಳು ಹೇಳಿದರು.

ಪಟ್ಟಣದ ಮರಡಿಮಠದಲ್ಲಿ ಮೌನಯೋಗಿ ಕಾಡಸಿದ್ಧೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ, ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ನೂತನ ರಥೋತ್ಸವದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಗಳು ಭಕ್ತರನ್ನು ಬಹಳಷ್ಟು ಪ್ರೀತಿ ಗೌರವಾದರದಿಂದ ಕಾಣುವ ಹೃದಯವಂತರು. ಭಕ್ತರಿಗೆ ಸದಾ ಒಳಿತನ್ನು ಬಯಸಿದ ಮಹಾನ್ ಯೋಗಿಗಳು. ಲಿಂ.ಕಾಡಸಿದ್ಧೇಶ್ವರ ಶ್ರೀಗಳ ರೂಪವನ್ನು ಅಭಿನವ ಕಾಡಸಿದ್ಧೇಶ್ವರ ಶ್ರೀಗಳಲ್ಲಿ ಕಾಣಬೇಕು. ಅವರ ಮೇಲಿಟ್ಟ ಪ್ರೀತಿ, ಕಾಳಜಿ ಇವರ ಮೇಲೆಯೂ ಇಟ್ಟು ಅವರ ಕೃಪಾಶೀರ್ವಾದ ಪಡೆಯಬೇಕು ಎಂದರು.
ಕೋಟೆಕಲ್ಲ ಹೊಳೆ ಹುಚ್ಚೇಶ್ವರ ಶ್ರೀಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂ.ಕಾಡಸಿದ್ಧೇಶ್ವರರು ಭಕ್ತರಿಗೋಸ್ಕರ ತಮ್ಮ ಜೀವನವನ್ನೇ ಸಮರ್ಪಣೆ ಮಾಡಿಕೊಂಡಿದ್ದಾರೆ. ಶ್ರೀಗಳ ಪುಣ್ಯಸ್ಮರಣೆಗೆ ತಾವೆಲ್ಲ ತನು, ಮನ, ಧನದಿಂದ ಸೇವೆ ಸಲ್ಲಿಸಿ ಕೃತಾರ್ಥರಾಗಬೇಕು ಎಂದರು.
ಶಾಸಕ ಪಿ.ಎಚ್.ಪೂಜಾರ ಮಾತನಾಡಿದರು. ಕಮತಗಿಯ ಗಣೇಶ ಶಾಸಿಗಳು ವಿವೇಕ ದರ್ಶನ ಪ್ರವಚನ ಸಾದರಪಡಿಸಿದರು. ಬಸವರಾಜ ಸಿಂದಗಿಮಠ ತಂಡದಿಂದ ಸಂಗೀತ ಸುಧೆ ಜರುಗಿತು.
ಅಭಿನವ ಕಾಡಸಿದ್ಧೇಶ್ವರ ಶ್ರೀಗಳು, ಕೈಲಾಸನಾಥ ಸ್ವಾಮಿಗಳು, ಚರಮೂರ್ತಿ ದೇವರು, ಮಾಜಿ ಶಾಸಕ ರಾಜಶೇಖರ ಶೀಲವಂತ, ಪಿ.ಎನ್.ಪವಾರ, ಧಾರವಾಡ ಸಿಪಿಐ ಪ್ರಭು ಹಿರೇಮಠ, ವಿ.ಎಸ್.ಹಿರೇಮಠ, ಪ್ರಕಾಶ ಅಚನೂರ, ಪ್ರಶಾಂತ ಜವಳಿ, ಮುತ್ತಣ್ಣ ದೇವರಮನಿ, ಚಿನ್ನು ಬಾರಾಟಿಕ್ಕಿ, ಸಂಗಪ್ಪ ಜವಳಿ, ಪ್ರಕಾಶ ಅಂಕದ, ಎಂ.ಎಸ್.ಹಿರೇಮಠ, ಶಿವಾನಂದ ಜವಳಿ, ಸುರೇಶ ಮೆಗೆನ್ನಿ, ಮುತ್ತು ಮೊರಬದ ಮತ್ತಿತರರಿದ್ದರು.