ಗಣೇಶ್‌ಗಾಗಿ ಮುಂದುವರಿದ ಶೋಧ

ಗುರುಪುರ: ಗುರುಪುರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿರುವ ಸರಿಪಳ್ಳ ಕನ್ನಗುಡ್ಡೆ ನೂಜಿ ನಿವಾಸಿ, ಹವ್ಯಾಸಿ ಫೋಟೋಗ್ರಾಫರ್ ಗಣೇಶ್ ನೂಜಿಗಾಗಿ ಬುಧವಾರ ಬೆಳಗ್ಗಿನಿಂದ ನದಿಯಲ್ಲಿ ಹುಡುಕಾಟ ಆರಂಭವಾಗಿದೆ. ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ, ಮುಳುಗುತಜ್ಞರು ದೋಣಿಯಲ್ಲಿ ಗಣೇಶ್ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸೇತುವೆ ಮೇಲೆ ನೂರಾರು ಕುತೂಹಲಿಗರು ಜಮಾಯಿಸಿದ್ದು, ಆಗಾಗ್ಗೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸಂಜೆ ವೇಳೆಗೆ ಮರವೂರು ಡ್ಯಾಂ ಬಳಿ ಹುಡುಕಾಟ ಮುಂದುವರಿದಿದ್ದು, ಗಣೇಶ್ ಪತ್ತೆಯಾಗಿಲ್ಲ. ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿ, … Continue reading ಗಣೇಶ್‌ಗಾಗಿ ಮುಂದುವರಿದ ಶೋಧ