ಮಕ್ಕಳನ್ನು ಶಾಲೆಗೆ ಸೇರಿಸಿ ಬಾಲಕಾರ್ವಿುಕ ಮುಕ್ತ ರಾಜ್ಯವನ್ನಾಗಿಸಲು ಸಹಕರಿಸಿ

ಮೂಡಿಗೆರೆ: ರಾಜ್ಯದಲ್ಲಿ ಬಹುತೇಕ ಮಕ್ಕಳು ನಾನಾ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳು ಕಂಡು ಬಂದರೆ ಕೂಡಲೇ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿ ಶಾಲೆಗೆ ದಾಖಲಿಸಿ ರಾಜ್ಯವನ್ನು ಬಾಲಕಾರ್ವಿುಕ ಪದ್ಧತಿ ಮುಕ್ತಗೊಳಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಹೇಳಿದರು.

ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಜೇಸಿಐ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲಕಾರ್ವಿುಕ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜದಲ್ಲಿ ಬಹುತೇಕ ಮಕ್ಕಳು ಬಾಲಕಾರ್ವಿುಕರಾಗಿದ್ದಾರೆ. ವಲಸೆ ಬಂದ ಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿಲ್ಲ. ಅಂತಹ ಮಕ್ಕಳು ಕಂಡು ಬಂದರೆ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದು ಹೇಳಿದರು.

ಬಾಲಕಾರ್ವಿುಕ ಪದ್ಧತಿ ತಡೆಗಟ್ಟಲು ಹಾಗೂ ನಿಮೂಲನೆಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. 18 ವರ್ಷದೊಳಗಿನ ಮಕ್ಕಳು ಶಾಲೆಯಿಂದ ಹೊರಗಡೆ ಇರುವ ಯಾವುದೇ ಮಗು ಕಂಡು ಬಂದರೆ ಅವರ ಪೋಷಕರಿಗೆ ತಿಳಿವಳಿಕೆ ಹೇಳಿ ಮಗುವನ್ನು ಶಾಲೆಗೆ ಸೇರಿಸಲು ಹಾಗೂ ಬಾಲಕಾರ್ವಿುಕ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸುತ್ತೇನೆಂದು ಪ್ರಮಾಣವಚನ ಬೋಧಿಸಿದರು. ನಂತರ ಮಕ್ಕಳು ಹಾಗೂ ಸಾರ್ವಜನಿಕರು ಪಟ್ಟಣದಲ್ಲಿ ಜಾಥಾ ನಡೆಸಿದರು.

Leave a Reply

Your email address will not be published. Required fields are marked *