ಪಡಿತರ ಅಕ್ಕಿಯಲ್ಲಿ ಹುಳುಗಳ ಆರ್ಭಟ

ಮದ್ದೂರು: ತಾಲೂಕಿನ ನಿಡಘಟ್ಟ ಗ್ರಾಮದ ಪಡಿತರ ಚೀಟಿದಾರರಿಗೆ ವಿತರಿಸಿದ ಅಕ್ಕಿಯಲ್ಲಿ ಹುಳಗಳ ಆರ್ಭಟ ಜೋರಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ ಆಹಾರ ನಿಗಮದಿಂದ ವಿತರಿಸಿರುವ ಅಕ್ಕಿ ಮೂಟೆಗಳಲ್ಲಿ ಹುಳುಗಳು ಗೂಡು ಕಟ್ಟಿಕೊಂಡಿದ್ದು, ಆ ಅಕ್ಕಿಯನ್ನೇ ಬಡ ಜನತೆಗೆ ವಿತರಣೆ ಮಾಡಲಾಗುತ್ತಿದೆ. ಹುಳುಮಿಶ್ರಿತ ಅಕ್ಕಿ ನೀಡುತ್ತಿರುವ ಬಗ್ಗೆ ಗ್ರಾ.ಪಂ. ಸದಸ್ಯ ಉಮೇಶ್ ಮಾತನಾಡಿ ಪ್ರಾಣಿಗಳಿಗೆ ಹಾಕುವ ಹಿಂಡಿ ಬೂಸದಂತೆ ಅಧಿಕಾರಿಗಳು ಅಕ್ಕಿ ವಿತರಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಡಿತರ ಅಂಗಡಿ ಮಾಲೀಕ  ಪುಟ್ಟಸ್ವಾಮಿ ಮಾತನಾಡಿ ಸರ್ಕಾರದಿಂದ ಬಂದಿರುವ ಅಕ್ಕಿಯನ್ನು ವಿತರಿಸುತ್ತಿದ್ದೇನೆ. ಈ ಸಂಬಂಧ ಮೇಲಾಧಿಕಾರಿಗಳು ಗಮನಕ್ಕೆ ತಂದಿದ್ಸೇನೆ. ಬೇರೆ ಅಕ್ಕಿ ಬದಲಾಯಿಸುವ ಬಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *