ಇಸ್ಲಾಂ ಧರ್ಮಗುರು ಸುಫ್ಯಾನ್ ಸಾರಿ(ರ) ಹೇಳುವುದನ್ನು ಗಮನಿಸಬೇಕು. ನಮಗಿಂತ ಮೊದಲು ಪ್ರವಾದಿವರ್ಯರ(ಸ) ಹಾಗೂ ಖಲೀಫರ ಕಾಲದಲ್ಲಿ ಸಂಪತ್ತನ್ನು ಒಂದು ಅಪ್ರಿಯ ವಸ್ತುವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಆಧುನಿಕ ಕಾಲದಲ್ಲಿ ಅದು ಮುಸ್ಲಿಮರ ಮಟ್ಟಿಗೆ ಗುರಾಣಿಯಾಗಿದೆ.
ನಮ್ಮ ಹತ್ತಿರ ಇಂದು ದಿರ್ಹಮ್ ದೀನಾರ್ ಇಲ್ಲದಿರುತ್ತಿದ್ದರೆ ಈ ರಾಜರು ನಮ್ಮನ್ನು ತಮ್ಮ ಕಾಲಕಸವಾಗಿ ಮಾಡಿಬಿಡುತ್ತಿದ್ದರು. ಇಂದು ಯಾರ ಹತ್ತಿರ ಈ ದಿರ್ಹಮ್ ದೀನಾರ್ಗಳಿವೆಯೋ ಅವನು ಅವುಗಳನ್ನು ಉತ್ತಮ ಸ್ಥಿತಿಯಲ್ಲಿಡಲಿ(ವ್ಯಾಪಾರ ಮುಂತಾದವುಗಳನ್ನು ಮಾಡಲಿ, ಸಂಪತ್ತನ್ನು ಹೆಚ್ಚಿಸಲು). ಏಕೆಂದರೆ ಇದು ಒಬ್ಬನು ಪರಾವಲಂಬಿ ಯಾಗುವ ಸ್ಥಿತಿ ಬಂದರೆ ಮೊಟ್ಟ ಮೊದಲು ತನ್ನ ಧರ್ಮವನ್ನು ಮಾರಿ ಬಿಡುವಂತಹ ಕಾಲವಾಗಿದೆ.
ಅರಸರು ಹಾಗೂ ಶ್ರೀಮಂತರು ನಮ್ಮನ್ನು ತಮ್ಮ ಕಾಲಕಸವಾಗಿ ಮಾಡಿಬಿಡುತ್ತಿದ್ದರು ಎಂದರೆ, ನಮ್ಮ ಹತ್ತಿರ ಸಂಪತ್ತಿಲ್ಲದಿರು ತ್ತಿದ್ದರೆ ನಾವು ಅವರ ಬಳಿಗೆ ಹೋಗಲು ನಿರ್ಬಂಧಿತರಾಗುತ್ತಿದ್ದೆವು. ಅವರು ನಮ್ಮನ್ನು ತಮ್ಮ ನೀಚ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ನಮ್ಮ ಬಳಿ ಸಂಪತ್ತಿದೆ. ಆದುದರಿಂದ ನಾವು ಅವರಿಂದ ನಿರಪೇಕ್ಷ ರಾಗಿದ್ದೇವೆ, ಸುರಕ್ಷಿತರಾಗಿದ್ದೇವೆ. ಪ್ರವಾದಿ(ಸ) ಮತ್ತು ಸುಹಾಬಿಗಳ(ಭಕ್ತರು) ಕಾಲದಲ್ಲಿ ಜನರ ವಿಶ್ವಾಸ ಸದೃಢವಾಗಿತ್ತು.
ಆದುದರಿಂದ ಅತ್ಯಂತ ಬಡತನದಲ್ಲಿಯೂ ಅವರು ಎಲ್ಲ ಬಗೆಯ ವಿಪತ್ತಿನಿಂದ ಪಾರಾದರು. ಇಂದಿನ ಜನರ ವಿಶ್ವಾಸ ಸಾಮಾನ್ಯವಾಗಿ ದುರ್ಬಲವಾಗಿದೆ. ಆದುದರಿಂದ ಬಡತನದ ಅವಸ್ಥೆಯಲ್ಲಿ ಜನರು ತಮ್ಮ ಈ ಮಾನವನ್ನು ಮಾರಿಬಿಡಲು ಸಿದ್ಧರಾಗುವರು. ಈ ದೃಷ್ಟಿಕೋನದಿಂದ ಹ.ಸುಫ್ಯಾನ್ ಸೌರಿ(ರ) ಉಪದೇಶ ಮಾಡುತ್ತಿದ್ದಾರೆಯೇ ಹೊರತು ಐಷಾರಾಮಿ ಬದುಕು ನಡೆಸಬೇಕೆಂಬುದು ಅವರ ಉದ್ದೇಶವಾಗಿರಲಿಲ್ಲ.
ಸುಫ್ಯಾನ್ ಸೌರಿ(ರ)ಯವರ ಕೊನೆಯ ಮಾತಿನ ತಾತ್ಪರ್ಯವೇನೆಂದರೆ ಯಾರಾದರೂ ಒಳ್ಳೆಯ ಆಹಾರ ಸೇವಿಸಿದರೆ, ಒಳ್ಳೆಯ ಬಟ್ಟೆ ಧರಿಸಿದರೆ ಅದನ್ನು ದುಂದುವೆಚ್ಚವೆಂದು ಹೇಳಲಾಗದು. ಆತನ ಸಂಪಾದನೆ, ಧರ್ಮಸಮ್ಮತ ಮೂಲದಿಂದ ಆಗಿರಬೇಕು. ಅದರ ಇನ್ನೊಂದು ಅರ್ಥ ಧರ್ಮಸಮ್ಮತ ಸಂಪಾದನೆ ಯಿಂದ ದುಂದು ವೆಚ್ಚ ಮಾಡಬಾರದು ಎಂದೂ ಆಗಬಹುದು.