25.9 C
Bengaluru
Wednesday, January 22, 2020

ಯಶಸ್ಸಿನ ಸೂತ್ರಗಳನ್ನು ಪಾಲಿಸುವುದರಲ್ಲಿದೆ ನೈಜ ಯಶಸ್ಸು…

Latest News

ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ...

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಯಶಸ್ವೀ ವ್ಯಕ್ತಿಗಳನ್ನು ಕಂಡರೆ ಎಲ್ಲರಿಗೂ ಕುತೂಹಲ, ಆಕರ್ಷಣೆ. ಬಹುತೇಕರು ಅವರ ಯಶಸ್ಸಿನ ಗುಟ್ಟುಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಅದರಿಂದ ಸ್ಪೂರ್ತಿ ಪಡೆದು ಕೆಲವರು ತಾವೂ ಸಾಧಕರಾಗುತ್ತಾರೆ. ಇನ್ನು ಬಹಳಷ್ಟು ಜನರು ಅವರಿಗಿದ್ದ ಅದೃಷ್ಟ ತಮಗಿಲ್ಲವೆಂಬ ನೆಪ ಹೇಳುತ್ತ ಬದುಕು ಸವೆಸುತ್ತಾರೆ. ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಸಾಧಕರು ಯಶಸ್ಸಿನ ಹಾದಿಯಲ್ಲಿ ಸಾಗುತ್ತಲೇ ಇರುತ್ತಾರೆ. ಅವರು ಯಾವ ಹಿನ್ನೆಲೆಯವರೇ ಆಗಲಿ ಕೆಲವು ಅಂಶಗಳು ಎಲ್ಲರಲ್ಲೂ ಸಮಾನವಾಗಿರುತ್ತವೆ. ಈ ಅಂಕಣದಲ್ಲಿ ಅಂತಹ ಸಾಧಕರ ಸಾಮಾನ್ಯ ಗುಣಗಳಲ್ಲಿ ಕೆಲವನ್ನು ನೋಡೋಣ.

ಸಾಧಕರು ತಮ್ಮ ಗುರಿಯನ್ನು ಬೇರೆಯವರ ಮಾತು ಕೇಳಿ ನಿರ್ಧರಿಸುವುದಿಲ್ಲ. ಮೊದಮೊದಲು ಗುರಿ ತಲುಪಲಾಗದೆ ಸೋತರೂ ತಮ್ಮ ಸ್ತರವನ್ನೇ ಎತ್ತರಿಸಿ ಕೊಳ್ಳುತ್ತಾರೆಯೇ ಹೊರತು ಗುರಿಯನ್ನು ಕೆಳಗಿಳಿಸುವುದಿಲ್ಲ. ಯುಪಿಎಸ್ಸಿ ಪರೀಕ್ಷೆಗಳನ್ನೇ ತೆಗೆದುಕೊಂಡರೆ ಬಹಳ ಮಂದಿ ಒಂದು ಸಲ, ಹೆಚ್ಚೆಂದರೆ ಎರಡು ಸಲ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕೈಬಿಟ್ಟು ಬಿಡುತ್ತಾರೆ. ಪ್ರಯತ್ನ ಮುಂದುವರಿಸುವುದಿಲ್ಲ. ಆದರೆ ಟಾಪರ್ಸ್ ಏನೇ ಆದರೂ ತಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುವುದಿಲ್ಲ. ಸೋಲು ತಮ್ಮ ಪ್ರಯತ್ನ ಕಡಿಮೆಯಾದುದಕ್ಕೆ ಬಂದಿದ್ದೇ ಹೊರತು ಅದು ತಮ್ಮದೇ ಸೋಲಲ್ಲ ಎಂದವರು ಅರಿತಿರುತ್ತಾರೆ. ಸೋತ ಹಾಗೆಲ್ಲ ಮತ್ತಷ್ಟು ದೃಢನಿರ್ಧಾರದೊಂದಿಗೆ ಮತ್ತೆ ಪರೀಕ್ಷೆ ಎದುರಿಸುತ್ತಾರೆ. ಮತ್ತೆ ಮತ್ತೆ ಎದುರಿಸುತ್ತಾರೆ. ಹಾಗಾಗಿ 5 ಸಲ ಫೇಲಾಗಿ 6ನೇ ಸಲ ಯುಪಿಎಸ್ಸಿ ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ಪಡೆದು ಪಾಸಾದವರೂ ಇದ್ದಾರೆ.

ತಮ್ಮ ಗುರಿಯ ಸ್ಪಷ್ಟತೆ ಸಾಧಕರಿಗಿರುತ್ತದೆ. ಯಾರೋ ‘ನಿನ್ನಿಂದಾಗುವುದಿಲ್ಲ’ ಎಂದು ಹೇಳಿದರೆಂದು ತಮ್ಮನ್ನು ತಾವು ಕೈಲಾಗದವರೆಂದು ಅವರು ತಿಳಿದುಕೊಳ್ಳುವುದಿಲ್ಲ. ಜೋನಾಥನ್ ಲಿವಿಂಗ್​ಸ್ಟನ್ ಸೀಗಲ್ ಎಂಬ ಪುಸ್ತಕದಲ್ಲಿ ಜೋನಾಥನ್ ಎಂಬ ಮರಿ ಸೀಗಲ್​ಗೆ ಹಾರುವುದೆಂದರೆ ತುಂಬ ಇಷ್ಟ. ಬೇರೆ ಸೀಗಲ್​ಗಳು ಹಾರುವುದು ಆಹಾರಕ್ಕಾಗಿ ಆದರೆ ಜೋನಾಥನ್ ಹಾರುವುದು ಹಾರುವ ಖುಶಿಗಾಗಿ. ಹಗಲೂರಾತ್ರಿ ಹಾರಲು ಪ್ರಾಕ್ಟೀಸ್ ಮಾಡುವ ಜೋನಾಥನ್​ನನ್ನು ನೋಡಿ ಅವನ ತಂದೆತಾಯಿಗೂ ಸಿಟ್ಟು. ಆಗ ಅವನ ತಾಯಿ ಕೇಳುತ್ತಾಳೆ, ‘ಯಾಕೆ ಜೋನಾಥನ್, ಬೇರೆ ಸೀಗಲ್​ಗಳ ಥರ ಇರುವುದು ಅಷ್ಟು ಕಷ್ಟವೇ ನಿನಗೆ?’ ಅಪ್ಪ ಹೇಳುತ್ತಾನೆ, ‘ಇನ್ನೇನು ಚಳಿಗಾಲ ಶುರುವಾಗುತ್ತೆ. ಮೀನುಗಳು ನೀರಿನ ಕೆಳಭಾಗದಲ್ಲಿ ಈಜುತ್ತವೆ. ನೀನು ಹಾರುವುದು ಆಹಾರಕ್ಕಾಗಿ ಅಂತ ಗೊತ್ತಿಲ್ವಾ ನಿಂಗೆ?’ ಆಗ ಜೋನಾಥನ್ ಹೇಳ್ತಾನೆ, ‘ಅದು ಸರಿಯಮ್ಮಾ ಗಾಳಿಯಲ್ಲಿ ನಾನೇನು ಮಾಡಬಹುದು ಏನು ಮಾಡೋಕೆ ಆಗಲ್ಲ ಅಂತ ತಿಳ್ಕೋಳೋಕೆ ಪ್ರಯತ್ನಿಸ್ತಿದ್ದೆ ಅಷ್ಟೇ’. ಅಪ್ಪ-ಅಮ್ಮನ ಮಾತು ಕೇಳಿ ಜೋನಾಥನ್ ಇತರ ಸೀಗಲ್​ಗಳಂತೆ ಇರಲು ಪ್ರಯತ್ನಿಸುತ್ತಾನೆ. ಕೆಲವೇ ದಿನ ಮಾತ್ರ! ಅವನಿಗೆ ಮಾಮೂಲಿ ಸೀಗಲ್​ಗಳ ಥರ ಇರಲು ಸಾಧ್ಯವೇ ಆಗುವುದಿಲ್ಲ. ಹಾರುವುದು ಬರೀ ಆಹಾರ ಹುಡುಕಲು ಎಂಬುದು ಆತನಿಗೆ ಒಪ್ಪಿಗೆ ಇಲ್ಲ. ಛೇ, ಇಷ್ಟು ದಿನದಲ್ಲಿ ಎಷ್ಟೆಲ್ಲ ಬಗೆಯಲ್ಲಿ ಹಾರುವುದನ್ನು ಕಲಿಯಬಹುದಿತ್ತು ಎಂದಾತ ಬೇಸರ ಪಡುತ್ತಾನೆ! ಹಾರಿ ಹಾರಿ ಗುರಿ ಸಾಧಿಸುತ್ತಾನೆ!

ಪ್ರತಿಯೊಬ್ಬ ಸಾಧಕರೂ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೆ. ಹಾಗಂತ ಇದು ಬರೀ ಪರೀಕ್ಷೆಗೆ ಸಂಬಂಧಿಸಿದ ವಿಚಾರವಲ್ಲ. ಶಿಸ್ತು ಇಲ್ಲದೆ ಇದ್ದರೆ ಯಾರೂ ಯಾವ ಸಾಧನೆಯನ್ನೂ ಮಾಡಲಾರರು. ಯಾವುದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಮಹನೀಯರ ದಿನಚರಿ ಗಮನಿಸಿ. ಆಯಾ ದಿನ ಏನನ್ನು ಮಾಡಬೇಕೆಂದಿರುತ್ತಾರೋ ಅದನ್ನು ಮಾಡಿಯೇ ಮಾಡುತ್ತಾರೆ. ಹಾಗಾಗಿ ಅವರು ಸೋಮಾರಿತನ ಮಾಡಲಾರರು. ದಿನನಿತ್ಯದ ಕೆಲಸಗಳನ್ನು ಮುಂದೂಡದೇ ಮಾಡುತ್ತಾರೆ. ಪರೀಕ್ಷೆ ಎದೆ ಮೇಲೆ ಬಂದು ಕೂತಾಗ ಓದಲು ಪ್ರಾರಂಭಿಸುವವರು ಪಿಯುಸಿ ಡಿಗ್ರಿ ಅಥವಾ ಮಾಸ್ಟರ್ ಡಿಗ್ರಿಗಳಲ್ಲಿ ಹಾಗೂ ಹೀಗೂ ಪಾಸಾಗಬಹುದು ಅಥವಾ ತೀರಾ ಬುದ್ಧಿವಂತರಾದರೆ ಅರವತ್ತು ಎಪ್ಪತ್ತು ಪರ್ಸೆಂಟ್ ಕೂಡ ಮಾಡಬಹುದು. ಆದರೆ ನೀವು ಎಷ್ಟೇ ಬುದ್ಧಿವಂತರಾಗಿದ್ದರೂ ಶಿಸ್ತಿನಿಂದ ಓದದೇ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡಲಾರಿರಿ. ಮಾಮೂಲಿ ಕಾಲೇಜು ಪರೀಕ್ಷೆಗಳಲ್ಲಿ ಒಂದು ಲಕ್ಷ ಮಂದಿ ಪರೀಕ್ಷೆ ಬರೆದು ಎಲ್ಲರೂ ಪಾಸಾಗುವ ಸಾಧ್ಯತೆಗಳಿರುತ್ತವೆ. ಆದರೆ ಲಕ್ಷಾಂತರ ಮಂದಿ ಸ್ಪರ್ಧಿಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗುವುದು ಒಂದೋ ಎರಡೋ ಶೇಕಡ ಮಾತ್ರ! ಅಂದರೆ ಕೆಲವೇ ಕೆಲವು ಸಾವಿರ ಅಥವಾ ಕೆಲವೇ ಕೆಲವು ನೂರು ಮಂದಿ! ಹಾಗಾಗಿ ಅತ್ಯುತ್ತಮವಾದುದನ್ನು ನೀಡದೇ ಹೋದರೆ ಆಯ್ಕೆ ಅಸಾಧ್ಯ!

ಮತ್ತು ಇಂಥವರ ಬಹಳ ಮುಖ್ಯ ಲಕ್ಷಣ ತಮ್ಮ ಬದುಕಿನಲ್ಲಿ ಯಾವುದು ಮುಖ್ಯ ಎಂದು ನಿರ್ಧರಿಸುವ ಹಕ್ಕನ್ನು ಅವರೇ ಇರಿಸಿಕೊಂಡಿರುತ್ತಾರೆ ಮತ್ತು ಅದನ್ನು ಹಾಗೆಯೇ ನಡೆಸಿಕೊಂಡು ಹೋಗುತ್ತಾರೆ. ಆ ಸ್ನೇಹಿತನಿಗೆ ಬೇಜಾರಾಗುತ್ತದೆ ಎಂದು ಸಿನಿಮಾಗೆ ಹೋಗುವುದು, ದೊಡ್ಡಮ್ಮನಿಗೆ ಬೇಜಾರಾಗುತ್ತದೆ ಎಂದು ವಾರಗಟ್ಟಲೆ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಇಂಥವನೆಲ್ಲ ಅವರು ಮಾಡುವುದೇ ಇಲ್ಲ. ಇದರರ್ಥ ಸಂಬಂಧಗಳಿಗೆ ಬೆಲೆ ಕೊಡಬಾರದು, ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದಲ್ಲ. ಯಾವಾಗ ಯಾವುದು ಮುಖ್ಯ ಎಂಬುದನ್ನು ನಿರ್ಧರಿಸುವ ಸಾಮರ್ಥ್ಯ ನಮಗಿರಬೇಕು. ನಮಗೆ ಅವಶ್ಯಕವಾದುದನ್ನು ಮಾಡಬೇಕು. ಮುಲಾಜಿಗೆ ಬಿದ್ದರೆ ಜೀವನಪೂರ್ತಿ ಕೊರಗುತ್ತಿರಬೇಕಾಗುತ್ತದೆ. ಯಶಸ್ಸಿನ ಹತ್ತು ಸೂತ್ರಗಳು ಎಲ್ಲರಿಗೂ ಗೊತ್ತು. ಆದರೆ ಅದನ್ನು ಪಾಲಿಸುವುದರಲ್ಲಿ ಯಶಸ್ಸಿರುವುದು! ಕಷ್ಟವಾಗುವುದು ಇಲ್ಲಿ! ಯಶಸ್ವೀ ವ್ಯಕ್ತಿಗಳು ದಿನಚರಿಯನ್ನು ತಪ್ಪದೆ ಪಾಲಿಸುತ್ತಾರೆ. ದಿನಕ್ಕೆ ಆರೋ ಏಳೋ ಗಂಟೆ ಓದಬೇಕೆಂದರೆ ಓದಿಯೇ ಓದುತ್ತಾರೆ! ಅವರು ಆರಾಮಾಗಿ ನಿದ್ರೆಯನ್ನೂ ಮಾಡುತ್ತಾರೆ, ಸಿನಿಮಾ ಕೂಡ ನೋಡುತ್ತಾರೆ, ಐಸ್ಕ್ರೀಂ ತಿನ್ನಲೂ ಹೋಗುತ್ತಾರೆ! ಅವರ ಮನೆಯಲ್ಲೂ ಮದುವೆ ಪೂಜೆಯಂತಹ ಕಾರ್ಯಕ್ರಮಗಳಿರುತ್ತವೆ, ಅವರ ಮನೆಗೂ ನೆಂಟರು ಬರುತ್ತಾರೆ, ಅವರ ಮನೆಯಲ್ಲೂ ಜಗಳವಾಗುತ್ತದೆ! ಅವರೂ ಮನುಷ್ಯರೇ ಆಗಿರುವುದರಿಂದ ಅವರ ಮೂಡ್ ಕೂಡ ಆಫ್ ಆಗುತ್ತದೆ! ಆದರೆ ಇವೆಲ್ಲವುಗಳನ್ನು ಹೊರತು ಪಡಿಸಿಯೂ ಅವರು ಆರುಗಂಟೆಗಳ ಓದನ್ನು ಹೇಗಾದರೂ ಮಾಡಿ ಮುಗಿಸುತ್ತಾರೆ. ಏನೇ ಅಡ್ಡಿಆತಂಕಗಳಿದ್ದರೂ ಕೆಲಸಕ್ಕೆ ಪ್ರಮುಖ ಆದ್ಯತೆ. ಏನೇ ಆದರೂ ಟೈಂಟೇಬಲ್ ಅನ್ನು ಸರಿಯಾಗಿ ನಡೆಸುತ್ತಾರೆ. ಏನೇ ಆಗಲಿ ನಾನು ಆರು ಗಂಟೆ ಓದಿಯೇ ಓದುತ್ತೇನೆ ಎಂಬ ದೃಢ ನಿರ್ಧಾರದ ವ್ಯಕ್ತಿಗಳವರು.

ಏಕೆಂದರೆ ಓದುವುದು ಒಂದು ನೈಸರ್ಗಿಕ ಕ್ರಿಯೆಯಲ್ಲ. ಅದೊಂದು ಅಭ್ಯಾಸ. ಕಷ್ಟಪಟ್ಟು ಬೆಳೆಸಿಕೊಳ್ಳಬೇಕಾದ್ದು. ಪುಟ್ಟ ಮಗು ಅಂಬೆಗಾಲು ಹಾಕುವುದು, ನಡೆಯುವುದು, ಓಡುವುದು ಸ್ವಾಭಾವಿಕವಾಗಿ ಮಾಡುತ್ತದೆ. ಆದರೆ ಅದೇ ರೀತಿ ಓದುವುದು ಬರುವುದಿಲ್ಲ. ನಾಲ್ಕನೇ ವರ್ಷದಿಂದ ಅ, ಆ ಎಂದು ಶುರು ಮಾಡಿ ಹತ್ತಾರು ವರ್ಷ ಶಾಲೆಗೆ ಹೋಗಬೇಕಾಗುತ್ತೆ. ಪರೀಕ್ಷೆಯಲ್ಲಿ ಒಳ್ಳೆಯ ಸ್ಕೋರು ಮಾಡುವವರಿಗೆ ಓದುವುದೆಂದರೆ ಬಹಳ ಇಷ್ಟ ಎಂದು ಕೆಲವರಿಗೆ ಅನ್ನಿಸುತ್ತಿರುತ್ತದೆ. ಅದು ಹಾಗಲ್ಲ, ಅವರಿಗೂ ಮೊಬೈಲ್ ನೋಡುವುದು ಇಷ್ಟವೇ, ಆದರೆ ಓದುವುದಕ್ಕೆ ಮಹತ್ವ ಕೊಟ್ಟಿರುತ್ತಾರೆ ಅಷ್ಟೇ.

ಯಶಸ್ವೀ ವ್ಯಕ್ತಿಗಳೇನು ಸರ್ವಸಂಗಪರಿತ್ಯಾಗಿಗಳಾಗಿ ಗುಹೆಯಲ್ಲಿ ತಪಸ್ಸು ಮಾಡುತ್ತಿರುವುದಿಲ್ಲ. ಅವರು ಕೂಡ ಸಮಾಜದಲ್ಲೇ ಇರುತ್ತಾರೆ. ಆದರೆ ಮುಖ್ಯ ಕೆಲಸಕ್ಕೆ ಮೊದಲ ಪ್ರಾಶಸ್ತ್ಯ ಕೊಡುತ್ತಾರೆ. ಮೊಬೈಲ್​ನಲ್ಲಿ ಇದೊಂದು ವಿಡಿಯೋ ನೋಡಿ ಓದೋಣ ಎಂದು ಸಾಧಾರಣ ಜನ ಅಂದುಕೊಂಡರೆ ಓದಿ ಮುಗಿಸಿ ವಿಡಿಯೋ ನೋಡೋಣ ಎಂದು ಇವರು ಅಂದುಕೊಳ್ಳುತ್ತಾರೆ ಮತ್ತು ಹಾಗೆಯೇ ಮಾಡುತ್ತಾರೆ. ಹಗಲುಗನಸಿನಲ್ಲಿ ಎಲ್ಲರೂ ಟಾಪರ್ ಆಗುತ್ತಾರೆ, ಕೋಟ್ಯಧಿಪತಿಯಾಗುತ್ತಾರೆ. ಹಾಗೆಯೇ ದಿನ ಕಳೆದು ಬಿಡುತ್ತಾರೆ. ಹಾಗಂತ ಟಾಪರ್​ಗಳು ಕನಸು ಕಾಣುವುದಿಲ್ಲವೇ? ಅವರೂ ಯಶಸ್ಸಿನ ಏಣಿ ಏರಿ ನಿಂತಂತಹ ಅಪೂರ್ವ ಕನಸು ಕಾಣುತ್ತಾರೆ. ಆದರೆ ಐದೇ ನಿಮಿಷ! ಅಂದಿನ ಓದಿಗೆ ಸ್ಪೂರ್ತಿಯಾಗುವಂತಹ ಕನಸದು. ಕಠಿಣ ಪರಿಶ್ರಮವಿಲ್ಲದೆ ಏನೂ ಆಗದು ಎಂಬ ಸರಳ ಸತ್ಯವನ್ನು ಅವರೆಂದೂ ಮರೆಯುವುದಿಲ್ಲ!

ವಿಡಿಯೋ ನೋಡಿ ಓದುವ ಐಡಿಯಾದವರು ಒಂದರನಂತರ ಒಂದರಂತೆ ಬರುವ ವಿಡಿಯೋಗಳ ಸರಪಣಿಯಲ್ಲಿ ಸಿಕ್ಕಿಕೊಂಡು ಬಿಡಿಸಿಕೊಳ್ಳಲಾರದೆ ರಾತ್ರಿ ಹನ್ನೆರಡು ಗಂಟೆಗೆ ಓಹ್ ಓದುವುದಿತ್ತು ಎಂಬುದು ನೆನಪಾಗಿ ‘ನಾಳೆ ಗ್ಯಾರಂಟಿ ಓದುತ್ತೇನೆ’ ಎಂದು ತಾವೆಂದೂ ಪೂರ್ಣಗೊಳಿಸದ ಭರವಸೆಯನ್ನು ತಮಗೇ ಕೊಟ್ಟುಕೊಂಡು ಮುಸುಕೆಳೆದು ಮಲಗುತ್ತಾರೆ! ಹೇಳಿ ಇದನ್ನು ಓದುವಾಗ ಎಷ್ಟು ಮಂದಿಗೆ ತನ್ನ ಬಗ್ಗೆಯೇ ಬರೆದಿದ್ದಾರೆ ಎನಿಸಿತು? ಬಹುತೇಕರಿಗೆ! ಏಕೆಂದರೆ ನಾನು ಯಾರ ಬಗ್ಗೆ ಬರೆಯುತ್ತಿದ್ದೇನೋ ಅಂಥವರು ಇರುವುದು ನೂರಕ್ಕೆ ಒಂದೆರಡು ಮಂದಿ ಅಷ್ಟೇ! ಉಳಿದವರೆಲ್ಲ ನಮ್ಮನಿಮ್ಮಂಥವರೇ! ಆದರೆ ಈ ಸೂತ್ರಗಳನ್ನು ಪಾಲಿಸಿದರೆ ನಾವೂ ನೀವೂ ಆ ವಿರಳರ ಸಾಲಿಗೆ ಸೇರಬಹುದು. ಖಂಡಿತವಾಗಿಯೂ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...