ಕ್ರಿಯಾಯಾಂ ವಚನೇ ವಾsಪಿ ಯತ್ಪರಸ್ಮಾತ್ ಸ್ವತೋsಪಿ ವಾ ಹ್ರೀರ್ಯಾ ಶೀಲಮಿದಂ ಪ್ರೋಕ್ತಂ ಚತ್ವಾರಿಂಶಂ ತ್ರಿಶೂಲಿನಾ ||
ಕ್ರಿಯೆಯಲ್ಲಾಗಲಿ ಮಾತಿನಲ್ಲಾಗಲಿ ಬೇರೆಯವರಿಗೆ ಮತ್ತು ತನಗೆ ಸಂಕೋಚ ಉಂಟಾಗುವಂತಿದ್ದರೆ ಅದನ್ನು ಸರ್ವಥಾ ಮಾಡದೆ ಇರುವುದು ನಲವತ್ತನೆಯ ಶೀಲವೆಂದು ತ್ರಿಶೂಲಧಾರಿ ಶಿವನು ಹೇಳಿದ್ದಾನೆ. ನಾವು ಮಾಡಬಾರದ ಕೃತ್ಯಗಳನ್ನು ಮಾಡಲಾರಂಭಿಸಿದರೆ ಬೇರೆಯವರಂತೂ ತಿರಸ್ಕರಿಸುತ್ತಾರೆ. ಆದರೆ ಅದಕ್ಕಿಂತ ಮೊದಲು ‘ಮನವರಿಯದ ಕಳ್ಳತನವಿಲ್ಲವಲ್ಲ’ ಎಂಬ ಮಹಾತ್ಮರ ಉಕ್ತಿಯಂತೆ ನಮ್ಮ ಮನಸ್ಸೂ ಎಚ್ಚರಿಸುತ್ತದೆ. ಆದರೆ ಅದರ ಕಡೆಗೆ ಲಕ್ಷ್ಯ ವಹಿಸದೆ ಇರುವುದರಿಂದ ನಮ್ಮಿಂದ ಅನೇಕ ಅಪರಾಧಗಳು ಉಂಟಾಗುತ್ತವೆ. ಆತ್ಮಸಾಕ್ಷಿಗೆ ಅಂಜಿ ನಡೆಯುವವನಿಗೆ ಯಾರ ಹಂಗೂ ಇರುವುದಿಲ್ಲ.
| ಚಂದ್ರಜ್ಞಾನಾಗಮ (9.98) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು