More

  ಬೀಡು ಬಿಟ್ಟಿದ್ದ ಆನೆಗಳನ್ನು ಕಾಡಿಗಟ್ಟಿದ ಅಧಿಕಾರಿಗಳು

  ಮಂಡ್ಯ : ಮದ್ದೂರು ಪಟ್ಟಣದ ಶಿಂಷಾನದಿ ಪಾತ್ರದಲ್ಲಿ ಎರಡು ದಿನಗಳಿಂದ ಬೀಡು ಬಿಟ್ಟಿದ್ದ 6 ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.


  ಸೋಮವಾರ ಮುಂಜಾನೆ ಶಿಂಷಾ ನದಿ ಪಾತ್ರದಲ್ಲಿ ಕಾಣಿಸಿಕೊಂಡು ಅನೆಗಳನ್ನು ಕಾಡಿಗೆ ಕಳುಹಿಸಲು ಸತತ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯು ಶಿಂಷಾ ನದಿ ಪಾತ್ರದಲ್ಲಿ ಉಳಿದುಕೊಂಡಿದ್ದವು. ಮಂಗಳವಾರ ಶಿಂಷಾ ನದಿ ಪಾತ್ರದಲ್ಲಿ ಉಳಿದುಕೊಂಡಿದ್ದ ಆನೆಗಳನ್ನು ಅರಣ್ಯಾಧಿಕಾರಿಗಳು ರಾತ್ರಿ ಗ್ರಾಮಸ್ಥರ ಸಹಕಾರದಿಂದ ಚನ್ನಪಟ್ಟಣದ ಕೊಂಬಿನಕಲ್ಲು ಅರಣ್ಯ ಪ್ರದೇಶಕ್ಕೆ ಕಳುಹಿಸುವಿಲ್ಲ ಯಶಸ್ವಿಯಾದರು. ಆನೆಗಳು ಕಾಡಿಗೆ ವಾಪಾಸ್ ಹೋಗಿರುವುದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


  ಆನೆಗಳು 2 ದಿನಗಳು ಬೀಡುಬಿಟ್ಟಿದ್ದ ಹಿನ್ನೆಲೆಯಲ್ಲಿ ಭತ್ತ, ಕಬ್ಬು, ತೆಂಗು, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ನಾಶವಾಗಿದೆ. ಈ ಸಂಬಂಧ ಅಧಿಕಾರಿಗಳು ಸರ್ವೇ ಮಾಡಿಸಿ ಸೂಕ್ತ ಪರಿಹಾರ ಕೊಡಿಸಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


  ಕಾರ್ಯಾಚರಣೆಯಲ್ಲಿ ತಾಲೂಕು ವಲಯ ಅರಣ್ಯಾಧಿಕಾರಿ ಗವಿಯಪ್ಪ, ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು, ಅಧಿಕಾರಿಗಳಾದ ಶರಣ್, ರಾಘವೇಂದ್ರ, ಶೈಲೇಶ್, ಮಂಡ್ಯದಿಂದಲ್ಲೂ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

  See also  ಜೆಜೆಎಂ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳಿಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts