More

  ವಿದ್ಯುತ್ ಅವಘಡಗಳ ಸಂಖ್ಯೆ ಶಾಕಿಂಗ್!: ರಾಜ್ಯದಲ್ಲಿ 3 ವರ್ಷಗಳಲ್ಲಿ 1519 ಮಂದಿ ಸಾವು

  | ರಮೇಶ ಜಹಗೀರದಾರ್ ದಾವಣಗೆರೆ

  ರಾಜ್ಯದಲ್ಲಿ ವಿದ್ಯುತ್ ಅಪಘಾತಗಳ ಸಂಖ್ಯೆ ನೋಡಿದರೆ ಶಾಕ್ ಆಗುತ್ತದೆ! ಮೂರು ವರ್ಷಗಳಲ್ಲಿ 1519 ಮಂದಿ ಮೃತಪಟ್ಟಿದ್ದು, 1574 ಪ್ರಾಣಿಗಳು ಜೀವ ಕಳೆದುಕೊಂಡಿವೆ. 2023-24ನೇ ಸಾಲಿನಲ್ಲಿ 473 ಪ್ರಕರಣಗಳಲ್ಲಿ 481 ಮಂದಿ ಮೃತಪಟ್ಟಿದ್ದಾರೆ. 643 ಪ್ರಾಣಿಗಳ ಜೀವ ಹಾನಿಯಾಗಿರುವುದು ಕಳವಳಕಾರಿಯಾಗಿದೆ.

  ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆ ಹೆಚ್ಚಳದಿಂದ ಸರಬರಾಜುದಾರರ ವಿದ್ಯುತ್ ಜಾಲವು ವಿಸ್ತಾರವಾಗುತ್ತಿದೆ. ಸುರಕ್ಷಿತ ನಿರ್ವಹಣೆ ಹಾಗೂ ಬಳಕೆ ಸವಾಲಾಗಿದೆ. ಹೆಚ್ಚಿನ ಸಂಖ್ಯೆಯ ವಿದ್ಯುತ್ ಅಪಘಾತಗಳು ಎಸ್ಕಾಂ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸ್ಥಾವರಗಳಲ್ಲೇ ಸಂಭವಿಸುತ್ತಿದ್ದು ಮುಂಜಾಗ್ರತಾ ಕ್ರಮ ಸರಿಯಾಗಿ ಪಾಲಿಸಬೇಕಿದೆ. ವಿದ್ಯುತ್ ತಂತಿಗಳು ತುಂಡಾಗಿ ನೆಲದ ಮೇಲೆ ಬೀಳುವುದು ಅಥವಾ ಜೋತಾಡುವುದರಿಂದ ಅನೇಕ ಅವಘಡಗಳು ಸಂಭವಿಸಿವೆ. ರಸ್ತೆ ಬದಿಯಲ್ಲಿ ಹಾದು ಹೋಗುವ, ಜಮೀನುಗಳಲ್ಲಿ ಅಳವಡಿಸಲಾದ ವಾಹಕಗಳು ತುಂಡಾಗಿ ಬಿದ್ದು ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 143 ಮಂದಿ ಮೃತಪಟ್ಟಿದ್ದು 24 ಜನರು ಗಾಯಗೊಂಡಿದ್ದಾರೆ. 513 ಪ್ರಾಣಿಗಳು ಸಾವಿಗೀಡಾಗಿವೆ.

  ವಿದ್ಯುತ್​ಪೂರಿತ ಮಾರ್ಗ, ಉಪಕರಣಗಳ ಸಂಪರ್ಕದಿಂದ 782 ಜನ ಜೀವ ಕಳೆದುಕೊಂಡಿದ್ದಾರೆ. 148 ಜಾನುವಾರುಗಳು ಅಸುನೀಗಿವೆ. ಅಲ್ಲದೆ, ಮರ, ಗಿಡಗಳ ರೆಂಬೆ, ಕೊಂಬೆ ವಿದ್ಯುತ್ ಮಾರ್ಗಗಳ ಮೇಲೆ ಬೀಳುವುದು, ವಿದ್ಯುತ್ ಕಂಬಗಳು ವಾಲುವುದು, ಮುರಿಯುವುದು, ಲೋಹದ ಭಾಗಗಳು ಚೇತನಗೊಳ್ಳುವುದು, ಗ್ರಾಹಕರ ಸ್ಥಾವರಗಳಲ್ಲಿರುವ ವಿದ್ಯುತ್ ವೈರಿಂಗ್ ಮತ್ತು ಉಪಕರಣಗಳ ನ್ಯೂನತೆ, ಅನಧಿಕೃತವಾಗಿ ತಂತಿ ಬೇಲಿ ಚೇತನಗೊಳಿಸುವುದು… ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ.

  ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ:ವಿದ್ಯುತ್ತಿನ ಸುರಕ್ಷಿತ ಬಳಕೆಯ ಕುರಿತು ಜನಜಾಗೃತಿ ಮೂಡಿಸಲು ಹಾಗೂ ವಿದ್ಯುತ್ ಅಪಘಾತಗಳ ಸಂಖ್ಯೆ ಮಿತಿಗೊಳಿಸಲು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯು ಸಂಕಲ್ಪ ತೊಟ್ಟಿದೆ. ಈ ನಿಟ್ಟಿನಲ್ಲಿ ಜೂನ್ 26ರಿಂದ ಜುಲೈ 2ರ ವರೆಗೆ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಬೆಂಗಳೂರಿನಲ್ಲಿ ಉದ್ಘಾಟಿಸಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ, ರೈತರಿಗೆ, ಶಾಲಾ ಕಾಲೇಜು, ಕೈಗಾರಿಕೆಗಳು, ಮಾಲ್, ಸಿನಿಮಾ ಮಂದಿರ ಮುಂತಾದ ಕಡೆಗಳಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ.

  ಎಲ್ಲ ಕ್ಷೇತ್ರಗಳಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದ್ದು, ವಿದ್ಯುತ್ ಜಾಲವು ವಿಸ್ತಾರವಾಗಿದೆ. ಅವಘಡಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯಿಂದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಸಾರ್ವಜನಿಕರು, ರೈತರು, ಗುತ್ತಿಗೆದಾರರು, ಕೈಗಾರಿಕೆಗಳು, ಇಲಾಖೆಯ ಸಿಬ್ಬಂದಿಗೆ ಅರಿವು ಮೂಡಿಸಿ ವಿದ್ಯುತ್ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಇಲಾಖೆಯ ಉದ್ದೇಶವಾಗಿದೆ.

  | ಬಿ.ವಿ. ಶಶಿಕಲಾ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕಿ, ಬೆಂಗಳೂರು

  ರೇಣುಕಾಸ್ವಾಮಿ ಕೊಲೆ ಪ್ರಕರಣ: 40 ಲಕ್ಷ ರೂಪಾಯಿ ಕೈ ಸಾಲ ಕೊಟ್ಟ ಮೋಹನ್‌ರಾಜ್‌ ನಾಪತ್ತೆ!

  See also  2 ವರ್ಷಗಳಲ್ಲಿ ಮೊದಲ ಬಾರಿಗೆ ಈ ಕೆಲಸ ಮಾಡಿದ ಗೌತಮ್ ಅದಾನಿ ಬಂದರು ಕಂಪನಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts