ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ಮುಂದಿನ ಗುರಿ: ವಿಜಯವಾಣಿ ಜತೆ ಕನಸು ಬಿಚ್ಚಿಟ್ಟ ಗೌತಮ್, ಚೈತ್ರಾ

blank

ಗುರುರಾಜ್ ಬಿ.ಎಸ್. ಬೆಂಗಳೂರು
ಪ್ರಾಥಮಿಕ ಶಾಲಾ ಶಿಕ್ಷಣ ಹಂತದಲ್ಲಿ ಗ್ರಾಮೀಣ ಕ್ರೀಡೆಯಿಂದ ಆಕರ್ಷಿತಗೊಂಡ ಬೆಂಗಳೂರಿನ ಗೌತಮ್ ಎಂ.ಕೆ, ಮತ್ತು ಮೈಸೂರಿನ ಚೈತ್ರಾ ಬಿ. ಚೊಚ್ಚಲ ಆವೃತ್ತಿಯ ಖೋಖೋ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ಪುರುಷರ ಹಾಗೂ ಮಹಿಳಾ ತಂಡಗಳ ಭಾಗವಾಗಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. 2032 ಅಥವಾ 2036ರ ಒಲಿಂಪಿಕ್ಸ್‌ಗೆ ಖೋಖೋ ಸ್ಪರ್ಧೆ ಸೇರ್ಪಡೆಗೊಂಡರೆ, ದೇಶವನ್ನು ಪ್ರತಿನಿಧಿಸುವುದು ಜೀವನದ ಮುಂದಿನ ಗುರಿಯಾಗಿರಿಸಿಕೊಂಡಿರುವ ಇವರಿಬ್ಬರೂ ಸಾಧಕರು ‘ವಿಜಯವಾಣಿ’ಯೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

‘ಬೆಂಗಳೂರಿನ ಚಾಮರಾಜಪೇಟೆಯ ರಾಮಮಂದಿರ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವಾಗ ಹಿರಿಯ ವಿದ್ಯಾರ್ಥಿಗಳು ಖೋಖೋ ಆಡುತ್ತಿದ್ದುದನ್ನು ನೋಡಿ ಮೊದಲ ಬಾರಿ ಒಲವು ಮೂಡಿತು. ಓದಿನ ಜತೆಗೆ ಸತತ ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದಾಗಿ ಭಾರತ ತಂಡದ ಪರ ಆಡಲು ಸಾಧ್ಯವಾಗಿದೆ. ಕಾಲೇಜು ದಿನಗಳಲ್ಲಿ ಜನರು ನನ್ನನ್ನು ಆಟದಿಂದ ಗುರುತಿಸಿದರು. ಇದು ಖೋಖೋ ಕ್ರೀಡೆಯಲ್ಲಿ ಮುಂದುವರಿಯಲು ಪೋತ್ಸಾಹ ನೀಡಿತು. ನಂತರ ಸಬ್ ಜೂನಿಯರ್, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಮುನ್ನಡೆಸುವ ಅವಕಾಶವೂ ಲಭಿಸಿತು’ ಎಂದು ಗೌತಮ್ ತಿಳಿಸಿದರು.

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ನೀಡುವ ಪ್ರದರ್ಶನ ಆಧಾರದ ಮೇಲೆ ಭಾರತ ತಂಡದಲ್ಲಿ ಸ್ಥಾನ ನಿರ್ಧರಿತವಾಗಲಿದೆ. ಮಣ್ಣಿನಲ್ಲಿ ಆಡಿದ ಅನುಭವ ಹೊಂದಿದ್ದ ನಮಗೆ ನೆಲಹಾಸುಗಳಲ್ಲಿ (ಮ್ಯಾಟ್) ಆಡುವುದು ಸವಾಲಿನ ವಿಷಯವಾಗಿತ್ತು. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದ ತರಬೇತಿ ಶಿಬಿರ ಸೇರಿ ಕಳೆದ ಅಕ್ಟೋಬರ್‌ನಿಂದಲೇ ಕ್ರಿಕೆಟ್ ಸೇರಿ ಇತರ ಆಟಗಾರರರು ಪಾಲಿಸುವಂತೆ ಫಿಟ್ನೆಸ್, ಪ್ರದರ್ಶನದ ಮೇಲೆ ಗಮನಹರಿಸಲು ಕೆಲ ಟಿಪ್ಸ್‌ಗಳನ್ನು ನೀಡಿದರು. ಜತೆಗೆ ಆಯ್ಕೆಯಾದ 60 ಜನರಲ್ಲಿ ಅಂತಿಮವಾಗಿ 15 ಆಟಗಾರರಲ್ಲಿ ಸ್ಥಾನ ಪಡೆಯುವ ಒತ್ತಡವೂ ಇತ್ತು. ನಮ್ಮ ದೇಶದ ದೇಸಿ ಕ್ರೀಡೆಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿರುವುದು ಬಹಳ ಖುಷಿ ನೀಡಿದೆ’ ಎಂದು ವೃತ್ತಿಯಲ್ಲಿ ಪೋಸ್ಟ್‌ಮನ್ ಆಗಿರುವ ಗೌತಮ್ ಖುಷಿ ಹಂಚಿಕೊಂಡರು.

ಕ್ರಿಕೆಟಿಗ ವಿರಾಟ್ ಕೊಹ್ಲಿ, ುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರನ್ನು ಆದರ್ಶವಾಗಿಸಿರಿಕೊಂಡಿರುವ ಗೌತಮ್, ತಂದೆ ಕಪನಿಗೌಡ ಆಟೋ ಡ್ರೈವರ್ ಆಗಿದ್ದು, ತಾಯಿ ರೇಖಾವತಿ ಗೃಹಿಣಿ ಆಗಿದ್ದಾರೆ. 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ ಸಲ್ಲಿಸಿದ್ದು, ಇದರಲ್ಲಿ ಯಶಸ್ವಿಯಾದರೆ ಖೋಖೋ ಕ್ರೀಡೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಆಗ ಭಾರತವನ್ನು ಪ್ರತಿನಿಧಿಸುವುದು ಗೌತಮ್ ಅವರ ಮುಂದಿನ ಗುರಿ ಆಗಿದೆ.

ಸರ್ಕಾರದಿಂದ ನೆರವಿನ ನಿರೀಕ್ಷೆ!
ಮಹಾರಾಷ್ಟ್ರ, ಒಡಿಶಾ, ಬಿಹಾರ ಸೇರಿ ಇತರ ರಾಜ್ಯ ಸರ್ಕಾರಗಳೂ ವಿಶ್ವಕಪ್ ಗೆದ್ದ ತವರಿನ ಆಟಗಾರರಿಗೆ ಕೋಟಿ ಮೊತ್ತದ ನಗದು ಬಹುಮಾನದ ಜತೆಗೆ ಉತ್ತಮ ದರ್ಜೆಯ ಉದ್ಯೋಗ ಕಲ್ಪಿಸುವುದಾಗಿ ೋಷಣೆ ಮಾಡಿವೆ. ಆದರೆ ಕರ್ನಾಟಕ ಸರ್ಕಾರದಿಂದ ಇದುವರೆಗೆ ನಮಗೆ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದಿಂದ ನೆರವು ದೊರೆಯುವ ನಿರೀಕ್ಷೆ ಇದೆ. ಜತೆಗೆ ಖೋಖೋ ಕ್ರೀಡೆಗೆ ಹೆಚ್ಚಿನ ಪ್ರಾಶ್ಯಸ್ತ ದೊರೆಯುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಗೌತಮ್ ಹೇಳಿದರು. ವಿದ್ಯಾರ್ಥಿನಿ ಆಗಿರುವ ಚೈತ್ರಾ ಸಹ ಸರ್ಕಾರದಿಂದ ಸೌಲಭ್ಯದ ನಿರೀಕ್ಷೆಯಲ್ಲಿದ್ದಾರೆ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ವಿಜೇತರನ್ನು ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರ ಸರ್ಕಾರ ಯಾವುದೇ ಕ್ರೀಡೆಯಲ್ಲಿ ವಿಶ್ವಕಪ್ ಗೆದ್ದ ರಾಜ್ಯದ ಆಟಗಾರರಿಗೆ ತಲಾ 3 ಕೋಟಿ ನಗದು ಬಹುಮಾನ ಹಾಗೂ ಉದ್ಯೋಗದಲ್ಲಿ ಎ ದರ್ಜೆಯ ಹುದ್ದೆ ಮೀಸಲಿರಿಸಿದೆ.

ರಾಜ್ಯದಲ್ಲಿ ನಾವೇ ನಂ.1
ವಿಶ್ವಕಪ್ ಜಯಿಸಿರುವುದು ಜೀವನದಲ್ಲಿ ಸಾರ್ಥಕ ಕ್ಷಣ. ೈನಲ್‌ನಲ್ಲಿ ಡೀಮ್ ಪಾಯಿಂಟ್ಸ್‌ನೊಂದಿಗೆ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಬಂದಿದ್ದು ತುಂಬಾ ಖುಷಿ ತಂದಿದೆ. ರಾಜ್ಯದ ನಾಲ್ವರು ಸೇರಿ 60 ಆಟಗಾರ್ತಿಯರಲ್ಲಿ ನಾನು ಭಾರತ ತಂಡಕ್ಕೆ ಆಯ್ಕೆಯಾಗಿದ್ದು ಹೆಮ್ಮೆ ಮೂಡಿಸಿದೆ. ಜತೆಗೆ ನನ್ನ ಊರಿನ ಇಬ್ಬರು ಆಯ್ಕೆಯಾಗಲಿಲ್ಲ ಎಂಬ ಬೇಸರವೂ ಇದೆ ಎಂದು ರೈತನ ಪುತ್ರಿ ಚೈತ್ರಾ ತಿಳಿಸಿದರು.

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಲು ನಾವು ತೆರಳಿದರೆ, ಪ್ರಶಸ್ತಿ ನಮ್ಮದೇ ಎಂದು ಹಳ್ಳಿಯ ಜನರು ಹೇಳುತ್ತಿದ್ದರು. ಈ ಸಾಧನೆಗೆ ನನ್ನ ಊರಿನ ಜನರು ಖೋಖೋಗೆ ನೀಡುವ ಬೆಂಬಲವೂ ಕಾರಣ. ಜತೆಗೆ ಏಷ್ಯನ್ ಚಾಂಪಿಯನ್‌ಷಿಪ್ ಜತೆಗೆ ಹಲವು ಟೂರ್ನಿಗಳಲ್ಲಿ ಭಾಗವಹಿಸಿದ ಪ್ರತಿಭೆಗಳಿದ್ದು, ನಾನು ಖೋಖೋ ಆಡಲು ಅವರು ಸ್ಫೂರ್ತಿ. ನಮ್ಮ ಗ್ರಾಮದಲ್ಲಿಯೇ ಎರಡು ಕ್ಲಬ್‌ಗಳಿವೆ ಎಂದು 22 ವರ್ಷದ ಚೈತ್ರಾ ಹೇಳಿಕೊಂಡರು. 4ನೇ ತರಗತಿಯಲ್ಲಿರುವಾಗ ಮಂಜುನಾಥ್ ಎಂಬ ಶಿಕ್ಷಕರ ನೆರನಿಂದ ಖೋಖೋ ಬಗ್ಗೆ ಆಸಕ್ತಿ ಬೆಳೆಯಿತು. ಇದರ ಜತೆಗೆ ಅಥ್ಲೆಟಿಕ್ಸ್‌ನಲ್ಲೂ ರಾಜ್ಯಮಟ್ಟದ ಕೂಟಗಳಲ್ಲಿ ಭಾಗವಹಿಸಿದ್ದೇನೆ.

ನನ್ನ ಈ ಸಾಧನೆಗೆ ತಂದೆ-ತಾಯಿ, ವಿದ್ಯಾದರ್ಶಿನಿ ದೇಗುಲ ಮಠ ಹಾಗೂ ರಾಜ್ಯ ಖೋಖೋ ಸಂಸ್ಥೆ ಜತೆಗೆ ನಮ್ಮ ಹಳ್ಳಿಯ ಜನರು ಕಾರಣ ಎಂದು ಅವರು ಹೇಳಿದರು. ಮಂಡ್ಯದ ಪಾಂಡವಪುರದಲ್ಲಿ ಬಿಪಿಇಎಡ್ ವ್ಯಾಸಂಗ ಮಾಡುತ್ತಿರುವ ಚೈತ್ರಾ, ಮೈಸೂರು ಜಿಲ್ಲೆಯ ತಿ. ನರಸಿಪುರ ತಾಲೂಕಿನ ಕುರುಬೂರು ಗ್ರಾಮದವರು.

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…