22.5 C
Bengaluru
Sunday, January 19, 2020

ಪೊಲೀಸರ ತನಿಖೆಯಲ್ಲಿ ಕೋಟ್ಯಧಿಪತಿಯಾಗಿ ಬದಲಾದ ನಂದ್ ನಗರಿ ದರೋಡೆಕೋರ

Latest News

ಕುಸಿದು ಬಿದ್ದ ಕಾಲುವೆ ಸಂಪರ್ಕ ಸೇತುವೆ ಪರಿಶೀಲನೆ

ಮುದ್ದೇಬಿಹಾಳ: ತಾಲೂಕಿನ ಸರೂರ, ಕವಡಿಮಟ್ಟಿ, ನೆರಬೆಂಚಿ ಗ್ರಾಮದ ಭಾಗದಲ್ಲಿ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಕೂಡಲೇ ದುರಸ್ತಿಗೆ ಅಧಿಕಾರಿಗಳು ಕ್ರಮ...

400 ಲೀಟರ್ ಹಾಲು ಮಣ್ಣು ಪಾಲು

ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.ನಾಗಮಂಗಲ, ಬಸರಾಳು ಹೋಬಳಿಯ ವಿವಿಧ...

ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ...

ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಕೆ.ಎಂ.ದೊಡ್ಡಿ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವು ಸಿಲುಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಮದ್ದೂರಿನ ಉರಗ ಸಂರಕ್ಷಕ ಮಾ.ನ. ಪ್ರಸನ್ನಕುಮಾರ್ ಹಾವನ್ನು ರಕ್ಷಿಸಿ...

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ನವದೆಹಲಿ: ಪೊಲೀಸರಿಗೆ ತಗಲಾಕಿಕೊಂಡಾಗ ಬಡವನಂತೆ ನಟಿಸಿ ಎಸ್ಕೇಪ್​ ಆಗುತ್ತಿದ್ದ ಕಳ್ಳನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸಖತ್ ಇಂಟರೆಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ. 

ಖಯ್ಯುಂ ವಿಲಕ್ಷಣ ಕಳ್ಳ ಎಂಬುದು ದೆಹಲಿಯ ನಂದ್​​ನಗರಿಯ ಜನತೆಗೆ ತಿಳಿದಿತ್ತು. ಸೀದಾಸಾದಾ ಆಗಿರುತ್ತಿದ್ದ ಆತ ಆಟೋ ರಿಕ್ಷಾ ಬಾಡಿಗೆಗೂ ನೀಡುತ್ತಿದ್ದ. ವೃತ್ತಿಪರ ಕಳ್ಳನಾಗಿದ್ದ ಈತನಿಗೆ ಯಾರು ಇಲ್ಲದ ಮನೆಗಳೇ ಟಾರ್ಗೆಟ್​ ಆಗಿರುತ್ತಿದ್ದವು. ಅಚಾನಕ್​ ಆಗಿ ಪೊಲೀಸರಿಗೆ ಸಿಕ್ಕಾಕೊಂಡರೆ ತಾನು ಬಡವ ಎಂದು ಪೊಲೀಸರೆ ಮರುಳಾಗುವಂತೆ ನಾಟಕವಾಡಿ ಸಿಂಪತಿ ಪಡೆದು ಬಚಾವಾಗುತ್ತಿದ್ದ.

ಆದರೆ ಶನಿವಾರ ನಡೆದ ಮನೆ ದರೋಡೆ ಪ್ರಕರಣದಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಆತ ಕೊಟ್ಯಧಿಪತಿ ಎಂಬುದು ಬೆಳಕಿಗೆ ಬಂದಿದೆ. ವಿಚಾರಣೆಯಲ್ಲಿ ಆರೋಪಿಯ ಸಂಪತ್ತು ಕಂಡು ಪೊಲೀಸರೇ ಹುಬ್ಬೇರಿಸಿದ್ದಾರೆ.

ಆರೋಪಿ ಖಯ್ಯುಂ ಮನೆಗಳ್ಳತನ ಮೂಲಕವೇ ಒಂದು ಕೋಟಿ ಮೌಲ್ಯದ ಎರಡು ಫ್ಲ್ಯಾಟ್​​ ಖರೀದಿಸಿದ್ದಾನೆ. ಆತನ ಮನೆಯಿಂದ 2.25 ಕೆಜಿ ಚಿನ್ನ ಹಾಗೂ 27 ಲಕ್ಷ ರೂ ಹಣ ವಶಪಡಿಸಿಕೊಳ್ಳಲಾಗಿದೆ. ಆತನ ಒಟ್ಟಾರೆ ನಿವ್ವಳ ಸಂಪತ್ತು 2.25 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ದೆಹಲಿ ಡೆಪ್ಯುಟಿ ಕಮಿಷನರ್ ಆಫ್ ಪೊಲಿಸ್​ (ಪೂರ್ವ) ಜಸ್ಮೀತ್ ಸಿಂಗ್ ಹೇಳಿದ್ದಾರೆ.

ಮಾಸ್ಟರ್​ ಕೀಗಳೇ ಈತನ ಆಯುಧ:
ಖಯ್ಯುಂ ಮನೆಗಳ್ಳತನದಲ್ಲಿ ಪಳಗಿದ್ದು, ಮಾಸ್ಟರ್​ ಕೀಗಳು ಬಿಟ್ಟರೆ ಬೇರಾವುದನ್ನೂ ಬಳಸುತ್ತಿರಲಿಲ್ಲ. ಯಾರೂ ಇಲ್ಲದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಮನೆ ಮಾಲಿಕರು ಹಣ ಮತ್ತು ಒಡವೆಗಳನ್ನು ಅಡಗಿಸಿಟ್ಟಿರುತ್ತಾರೆ ಎಂಬುದನ್ನು ಸರಿಯಾಗಿ ಬಹಳ ಜಾಣ್ಮೆಯಿಂದ ಊಹಿಸುತ್ತಿದ್ದ. ಆರೋಪಿಯ ಸಹೋದರ ಅಯೂಬ್ ದರೋಡೆ ಸ್ಥಳಕ್ಕೆ ಡ್ರಾಪ್ ಮತ್ತು ಪಿಕಪ್ ಮಾಡುತ್ತಿದ್ದ. ಆರೋಪಿಯಿಂದ 56 ಮಾಸ್ಟರ್​​ ಕೀಗಳನ್ನು ಪೊಲೀಸರು ವಶಪಡೆದಿದ್ದಾರೆ. ಆತನೂ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬಡವನೆಂದು ನಾಟಕ:
ಆರೋಪಿ ಪೊಲಿಸರಿಗೆ ಸಿಕ್ಕಾಕಿಕೊಂಡಾಗೆಲ್ಲಾ ಬಡವನೆಂದು ನಾಟಕ ಮಾಡುತ್ತಿದ್ದ. ಅದನ್ನು ಪೊಲೀಸರೂ ನಂಬುತ್ತಿದ್ದರು. 2006 ರಿಂದ ಐದು ಬಾರಿ ಪೊಲೀಸರಿಗೆ ಸಿಕ್ಕಾಕಿಕೊಂಡಿದ್ದರೂ ಆತನ ನಾಟಕವನ್ನು ನಂಬಿ ಹೆಚ್ಚಿನ ವಿಚಾರಣೆ ನಡೆಸಿರಲಿಲ್ಲ. ಹಲವು ಷರ್ವಗಳಿಂದ ಆತನ ಕುಟುಂಬ ಅರ್ಧಂಬರ್ಧ ನಿರ್ಮಿಸಿರುವ 250 ಚದರ ಅಡಿ ಮನೆಯಲ್ಲೇ ವಾಸವಿದೆ.-(ಏಜೆನ್ಸೀಸ್​)

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...