28.5 C
Bengaluru
Monday, January 20, 2020

ಸೃಷ್ಟಿಯ ಮರ್ಮ…

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಕರ್ಮಋಣಶೇಷಂಗಳುಳಿಯದಿರೆ ಬಿತ್ತಾಗಿ |

ಜನ್ಮಜನ್ಮಾಂತರದ ಮರಗಳೇಳದಿರೆ ||

ಬ್ರಹ್ಮನುದ್ಯಾನವನ ಶಾಶ್ವತದೊಳಿಹುದೆಂತು? |

ಮರ್ಮವಿದು ಸೃಷ್ಟಿಯಲಿ – ಮಂಕುತಿಮ್ಮ ||

‘ಕರ್ಮಋಣ ಶೇಷಗಳು ಬಿತ್ತಾಗಿ ಉಳಿಯದೆ ಇದ್ದರೆ, ಜನ್ಮಜನ್ಮಾಂತರದ ಮರಗಳು ಏಳದೆ ಇದ್ದರೆ ಬ್ರಹ್ಮನ ಉದ್ಯಾನ ಶಾಶ್ವತವಾಗಿ ಇರುವುದಾದರೂ ಹೇಗೆ? ಇದು ಸೃಷ್ಟಿಯ ಮರ್ಮ’ ಎನ್ನುತ್ತದೆ ಈ ಕಗ್ಗ.

ತೋಟವು ಸಮೃದ್ಧಿಯಿಂದಿರಬೇಕೆಂದು ಕೃಷಿಕ ಸತತ ಯತ್ನಿಸುತ್ತಿರುತ್ತಾನೆ. ಹೊಸ ಗಿಡಗಳನ್ನು ನೆಡುತ್ತಾನೆ, ಹಳೆಯದನ್ನು ಕಡಿಯುತ್ತಾನೆ, ಮಾಗಿದ ಹಣ್ಣಿನ ಬೀಜವನ್ನು ಸಂಗ್ರಹಿಸಿ ಮತ್ತೆ ಬಿತ್ತನೆ ಮಾಡುತ್ತಾನೆ. ಕಾಡುಗಿಡಗಳನ್ನು ಕಡಿದು, ಎಳೆ ಗಿಡಗಳನ್ನು ಕಾಪಾಡಿ ಉತ್ತಮ ಫಸಲು ಪಡೆಯಲು ಶ್ರಮಿಸುತ್ತಾನೆ. ಹೀಗೆ ಕೃಷಿಭೂಮಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಾ ಆನಂದವಾಗಿರುತ್ತಾನೆ. ಮನದಣಿಯೆ ದುಡಿದು ಸಂತೃಪ್ತಿಯಿಂದ ಬಾಳುತ್ತಾನೆ. ಈ ಪ್ರಪಂಚವೂ ಪರಬ್ರಹ್ಮನ ಲೀಲಾವಿನೋದಕ್ಕಾಗಿ ವಿರಚಿಸಿದ ಉದ್ಯಾನ. ಅವೆಷ್ಟೋ ವೈವಿಧ್ಯ, ವೈಚಿತ್ರ್ಯಳನ್ನು ಸಂಯೋಜಿಸಿ ವಿಶ್ವವೆಂಬ ಹೂದೋಟವನ್ನು ನಿತ್ಯನೂತನವಾಗಿರಿಸಿದ್ದಾನೆ. ಪ್ರಾಕೃತಿಕ ಚೆಲುವು, ಬೆರಗುಗಳು ಅಮಿತವಾಗಿರುವುದರ ಜೊತೆಜೊತೆಗೆ ಅಸಂಖ್ಯ ಜೀವಜಾಲವೂ ಈ ಉದ್ಯಾನದ ಭಾಗವಾಗಿದೆ. ಭಗವಂತನ ಅಭಯಾರಣ್ಯದಂತೆಯೇ ಈ ಭೂಮಿ ಕಂಗೊಳಿಸುತ್ತಿದೆ. ಜಗತ್ತು ಎಂಬ ಈ ಹೂದೋಟ ನಾವೀನ್ಯವನ್ನು ಕಳೆದುಕೊಳ್ಳಬಾರದೆಂದು, ಪರಮಾತ್ಮನು ಹುಟ್ಟು-ಸಾವುಗಳೆಂಬ ಗತಿಯನ್ನು ಯೋಜಿಸಿದ್ದಾನೆ. ಕಾಲಚಕ್ರದ ಸುಪರ್ದಿಗೆ ಎಲ್ಲವನ್ನೂ ಒಪ್ಪಿಸಿ ಹೊಸದು ಹಳೆಯದಾಗುವಂತೆ, ಹಳೆಯದರ ಸ್ಥಾನಕ್ಕೆ ಹೊಸದು ಬಂದು ನೆಲೆಸುವಂತೆ ನೋಡಿಕೊಳ್ಳುತ್ತಾನೆ. ಗದ್ದೆ ಕೊಯ್ಲಾದ ಮೇಲೆ ಮತ್ತೆ ಅದನ್ನು ಉಳುಮೆ ಮಾಡಿ ಬೀಜ ಬಿತ್ತುತ್ತಾರೆ. ಬೇಸಾಯದ ಮತ್ತೊಂದು ಅಧ್ಯಾಯ ಆರಂಭವಾಗುತ್ತದೆ.

ಸಾವಿನ ಮೂಲಕ ನಶ್ವರವಾದ ದೇಹವನ್ನು ತ್ಯಜಿಸಿ ಹೊರಟ ಅವಿನಾಶಿ ಆತ್ಮನು ತನ್ನೊಂದಿಗೆ ಕರ್ಮಶೇಷವನ್ನೂ, ಋಣದ ಎಳೆಯನ್ನೂ ಹೊತ್ತುಕೊಂಡು ಇನ್ನೊಂದು ದೇಹವನ್ನು ಪ್ರವೇಶಿಸುತ್ತಾನೆ. ಹೊತ್ತು ತಂದ ಹಳೆಯದರ ಜೊತೆಗೆ ಹೊಸ ಕರ್ಮಶೇಷವೂ ಸೇರಿ ಮತ್ತೊಂದು ಜೀವನಯಾನಕ್ಕೆ ನಾಂದಿಯಾಗುತ್ತದೆ. ಕರ್ಮಶೇಷವನ್ನು ಬಿತ್ತಿನಂತೆ ತೆಗೆದಿಟ್ಟ ವಿಧಿಯು ಸರಿಯಾದ ಕಾಲ ನೋಡಿ ಬಿತ್ತನೆ ಮಾಡುತ್ತದೆ. ಅದು ಚಿಗುರೊಡೆದು ಮರವಾಗುತ್ತಿದಂತೆಯೇ ಮತ್ತೊಂದು ಆವರ್ತನದ ಆರಂಭ.

ಒಂದುವೇಳೆ ಯಾವ ಕರ್ಮವನ್ನೂ ಮಾಡದೆ ಉಳಿದರೆ ಆಗ ಕರ್ಮಶೇಷವುಳಿಯದು, ಮರವಾಗಿ ಮುಂದಿನ ಜನ್ಮದವರೆಗೂ ಬೆಳೆಯದು ಎಂದು ಯೋಚಿಸೋಣವೇ? ಅದು ಸಾಧ್ಯವಿಲ್ಲ. ಕರ್ಮಫಲ ತ್ಯಾಗ ಮಾಡಬಹುದು, ಕರ್ಮವನ್ನು ಬದಲಾಯಿಸಬಹುದು. ಆದರೆ ಕರ್ಮವನ್ನೇ ತ್ಯಾಗ ಮಾಡಲಾಗದು. ಪ್ರಕೃತಿಯು ಪ್ರತಿಕ್ಷಣ ತನ್ನಲ್ಲಿರುವ ಜೀವಗಳನ್ನು ಪ್ರಚೋದಿಸಿ ಕ್ರಿಯಾಶೀಲವಾಗುವಂತೆ ಎಚ್ಚರಿಸುತ್ತದೆ. ಹಾಗಾಗಿ ಯಾವ ಜೀವವೂ ನಿಷ್ಕ್ರಿಯವಾಗಿ ಉಳಿಯದು.

ಕರ್ಮವು ನೀರಿನಂತೆ. ನೀರು ತಾನು ಹರಿಯುವ ನೆಲದ ಬಣ್ಣ, ವಾಸನೆ, ರುಚಿಯನ್ನು ತಾನೂ ಒಳಗೊಳ್ಳುವಂತೆ ಕರ್ಮವೂ ತನ್ನ ಪರಿಸರದ, ಕರ್ವಿುಯ ಪ್ರಭಾವಕ್ಕೆ ಒಳಗಾಗುತ್ತದೆ. ಕರ್ಮವು ಪಾಪ-ಪುಣ್ಯ ಏನೇ ಆದರೂ ಆತ್ಮನ ಹೊರೆಯಾಗಿ ಮುಂದಿನ ಜನ್ಮಕ್ಕೆ ದಾಟುತ್ತದೆ, ಅಲ್ಲಿ ತಕ್ಕ ಫಲವನ್ನು ಕರುಣಿಸುತ್ತದೆ. ಈ ರೀತಿಯಲ್ಲೇ ಪರಮಾತ್ಮನು ಜಗತ್ತನ್ನು ಸಂಯೋಜಿಸಿದ್ದಾನೆ. ತನ್ನದೇ ಅಂಶರೂಪಗಳನ್ನು ಹೀಗೆ ಮತ್ತೆಮತ್ತೆ ಜನ್ಮವೆತ್ತುವಂತೆ ಮಾಡಿ ಸುಂದರ ಸೃಷ್ಟಿ ವೈವಿಧ್ಯಮಯವಾಗಿರುವಂತೆ ರೂಪಿಸಿದ್ದಾನೆ. ಕರ್ವಚರಣೆ ಮನುಜನಾಯ್ಕೆ, ಅದಕ್ಕೆ ಫಲವನ್ನು ನೀಡುವುದು ದೇವನಿಚ್ಛೆ. ಕರ್ಮ ಮಾಡಿದರೂ ಅದನ್ನು ಅಂಟಿಸಿಕೊಳ್ಳದಂತೆ ಬಾಳುವುದೇ ನೈಜ ಸಾಧನೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...