More

  ‘ಬ್ಯಾಡ್ ಮ್ಯಾನರ್ಸ್’ ಚಲನಚಿತ್ರ 24ರಂದು ತೆರೆಗೆ

  ಹುಬ್ಬಳ್ಳಿ: ‘ಬ್ಯಾಡ್ ಮ್ಯಾನರ್ಸ್’ ಚಲನಚಿತ್ರವು ನ. 24ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಾಯಕ ನಟ ಅಭಿಷೇಕ ಅಂಬರೀಶ ಹೇಳಿದರು.
  ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಚಲನಚಿತ್ರ ಚಿತ್ರೀಕರಣಗೊಂಡಿದೆ. ಉತ್ತರ ಕರ್ನಾಟಕದ ಕಲಾವಿದರು ನಟಿಸಿದ್ದಾರೆ ಎಂದರು. ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡುತ್ತೇವೆ ಎನ್ನುವುದು ಕಷ್ಟ. ಪ್ಯಾನ್ ಇಂಡಿಯಾಗಿಂತ ಒಳ್ಳೆಯ ಸಿನಿಮಾ ಮಾಡಬೇಕು. ಜನರು ಇದೆಲ್ಲವನ್ನೂ ನಿರ್ಧರಿಸುತ್ತಾರೆ ಎಂದರು.
  ನಿರ್ದೇಶಕ ಸೂರಿ ಅವರಿಗೆ ಅವರದೇ ಆದ ಪ್ರೇಕ್ಷಕ ವರ್ಗವಿದೆ. ಹೀಗಾಗಿ ಅವರ ಜತೆ ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ಸಿನಿಮಾ ಟ್ರೇಲರ್ ನೋಡಿದ ಮೇಲೆ ಕೆಲವರು ನನ್ನಲ್ಲಿ ಅಂಬರೀಶ ಅವರನ್ನು ಕಾಣುತ್ತಿದ್ದೇವೆ ಎಂದಿದ್ದಾರೆ ಎಂದು ವಿವರಿಸಿದರು.
  ಸಿನಿಮಾ ಎಂದರೆ ಜನರು ದುಡ್ಡು ಕೊಟ್ಟು ಬರುತ್ತಾರೆ. ರಾಜಕೀಯಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನು ಕರೆತರಬೇಕು. ನಮ್ಮ ತಾಯಿ ಸುಮಲತಾ ಅವರು ರಾಜಕೀಯದಲ್ಲಿ ಇರುವವರೆಗೂ ನಾನು ರಾಜಕೀಯಕ್ಕೆ ಬರುವುದಿಲ್ಲ. ನಮ್ಮ ತಂದೆ ಅಂಬರೀಶ ಅವರು 30 ವರ್ಷಕ್ಕೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ಆ ಮೇಲೆ ರಾಜಕೀಯಕ್ಕೆ ಬಂದರು. ನಾನು ಎರಡೂ ದೋಣಿಯ ಮೇಲೆ ಕಾಲು ಇಡಲು ಇಷ್ಟಪಡುವುದಿಲ್ಲ. ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಸಿನಿಮಾ ರಂಗವೇ ಬೇರೆ, ರಾಜಕಾರಣವೇ ಬೇರೆ ಎಂದರು.
  ಉತ್ತರ ಕರ್ನಾಟಕ ಜನರು ಕಲಾವಿದರಿಗೆ ಬಹಳಷ್ಟು ಗೌರವ ಕೊಡುತ್ತಾರೆ. ಈ ಭಾಗದ ಜನರ ಆಶೀರ್ವಾದ ತೆಗೆದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts