Friday, 16th November 2018  

Vijayavani

Breaking News

ಅಜಾತ ಶತ್ರು ವಾಜಪೇಯಿಗೆ ಅಂತಿಮ ವಿದಾಯ

Friday, 17.08.2018, 8:15 PM       No Comments

ದೆಹಲಿ, 05.02 PM: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೆಹಲಿಯಲ್ಲಿ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ.

ದೆಹಲಿ, 05.00 PM: ವಾಜಪೇಯಿ ಅವರಿಗೆ ಕುಶಾಲು ತೋಪು ಸಿಡಿಸಿ ಅಂತಿಮ ಗೌರವ.

ದೆಹಲಿ, 04.59 PM: ವಾಜಪೇಯಿ ಅವರ ಚಿತೆಗೆ ಅಗ್ನಿಸ್ಪರ್ಶ.

ದೆಹಲಿ, 04.52 PM: ವಾಜಪೇಯಿ ಅವರ ಪುತ್ರಿ ನಮಿತಾ ಭಟ್ಟಾಚಾರ್ಯ ಮುಂದಾಳತ್ವದಲ್ಲಿ ನೆರವೇರುತ್ತಿರುವ ಅಂತಿಮ ವಿಧಿ ವಿಧಾನಗಳು.

ದೆಹಲಿ, 04.34 PM: ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಮೊಮ್ಮಗಳು ನಿಹಾರಿಕಾಗೆ ಹಸ್ತಾಂತರಿಸಲಾಯಿತು.

ದೆಹಲಿ, 04.28 PM: ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.

ದೆಹಲಿ, 04.27 PM: ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿ ಮತ್ತು ಶ್ರೀಲಂಕಾ ವಿದೇಶಾಂಗ ಸಚಿವ ಲಕ್ಷ್ಮಣ್ ಕಿರಿಯೆಲಾ ವಾಜಪೇಯಿ ಅವರಿಗೆ ಅಂತಿಮ ಗೌರವ ಅರ್ಪಿಸಿದರು.

ದೆಹಲಿ, 04.24PM : ಭೂತಾನ್‌ ಅಧ್ಯಕ್ಷ ಖೇಸರ್ ನಂಜಿಲ್ ವಾಂಗ್ಚಕ್ ಅವರಿಂದ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಮರ್ಪಣೆ.

ದೆಹಲಿ, 4.17 PM: ಅಗಲಿದ ನಾಯಕ ವಾಜಪೇಯಿ ಅವರಿಗೆ ಅಂತಿಮ ಗೌರವ ಸಮರ್ಪಣೆ.

ದೆಹಲಿ, 4.15 PM: ಅಂತಿಮ ನಮನ ಸಲ್ಲಿಸಿದ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು. ಅಂತ್ಯ ಸಂಸ್ಕಾರದಲ್ಲಿ ನೇಪಾಳ, ಬಾಂಗ್ಲಾ, ಭೂತಾನ್‌ ಮುಂತಾದ ಸಾರ್ಕ್ ದೇಶಗಳ ನಾಯಕರು ಭಾಗಿ.

ದೆಹಲಿ, 4.08 PM: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ರಿಂದ ಅಂತಿಮ ಗೌರವ ಸಲ್ಲಿಕೆ.

ದೆಹಲಿ, 4.05 PM: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಅಂತಿಮ ಗೌರವ ಸಲ್ಲಿಕೆ.

ದೆಹಲಿ, 4.02 PM: ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ನೌಕಾದಳದ ಮುಖ್ಯಸ್ಥ ಸುನೀಲ್‌ ಲಂಬಾ ಮತ್ತು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಬಿರೇಂದರ್‌ ಸಿಂಗ್‌ ಧಾನೋವರಿಂದ ಅಂತಿಮ ಗೌರವ ಸಲ್ಲಿಕೆ.

ದೆಹಲಿ, 4.00 PM: ವಾಜಪೇಯಿ ಅವರ ಸಾಕು ಮಗಳು ನಮಿತಾ ಭಟ್ಟಾಚಾರ್ಯ ಅವರ ಪತಿ, ಅಳಿಯ ರಂಜನ್​ ಭಟ್ಟಾಚಾರ್ಯ ಅವರಿಂದ ಅಂತ್ಯಕ್ರಿಯೆ ಆರಂಭ. ಉತ್ತರ ಪ್ರದೇಶದ ಬ್ರಾಹ್ಮಣ ಸಂಪ್ರದಾಯದಂತೆ ನಡೆಯುತ್ತಿರುವ ವಿಧಿ ವಿಧಾನಗಳು.

ದೆಹಲಿ, 3.53 PM: ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತಿಮ ಸಂಸ್ಕಾರದ ವಿಧಿ ವಿಧಾನ ಆರಂಭ.

ದೆಹಲಿ, 3.45 PM: ರಾಷ್ಟ್ರೀಯ ಸ್ಮೃತಿ ಸ್ಥಳ ತಲುಪಿದ ವಾಜಪೇಯಿ ಪಾರ್ಥೀವ ಶರೀರ. ಒಟ್ಟು 15 ಕಿ.ಮೀ. ಸಾಗಿದ ಮೆರವಣಿಗೆ. ಅಂತಿಮ ವಿಧಿ ವಿಧಾನಕ್ಕೆ ಕ್ಷಣಗಣನೆ. ಮಾಜಿ ಪ್ರಧಾನಿಗಳಾದ ಜವಾಹರ ಲಾಲ್‌ ನೆಹರು ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಸ್ಮಾರಕದ ನಡುವೆ ಸ್ಮೃತಿ ಸ್ಥಳವಿದೆ.

ದೆಹಲಿ, 3.39 PM: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಾಜಪೇಯಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ಸ್ಮೃತಿ ಸ್ಥಳಕ್ಕೆ ತಲುಪಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿ, ದೆಹಲಿ, 2.05 PM: ಮಾಜಿ ಪ್ರಧಾನಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ದೆಹಲಿಯ ದೀನ್​ ದಯಾಳ್​ ಉಪಾಧ್ಯಾಯ ಮಾರ್ಗದ ಬಿಜೆಪಿ ಕಚೇರಿಯಿಂದ ಅಂತಿಮ ಸಂಸ್ಕಾರ ನಡೆಯುವ ರಾಜ್​ಘಾಟ್​ನ ಸ್ಮೃತಿ ಸ್ಥಳಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತಿದೆ.

ಅಟಲ್​ ಜೀ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯ ನೇತೃತ್ವನ್ನು ಬಿಜೆಪಿ ಅಧ್ಯಕ್ಷ ಅಮಿತ್​ ಷಾ ಅವರು ವಹಿಸಿಕೊಂಡಿದ್ದಾರೆ. ಬಿಜೆಪಿ ಕಚೇರಿಯಿಂದ ಸ್ಮೃತಿ ಸ್ಥಳದ ವರೆಗಿನ ಮೆರವಣಿಗೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತ ಬಿಜೆಪಿ ನಾಯಕರು ಹೆಜ್ಜೆ ಹಾಕುತ್ತಿದ್ದಾರೆ. ಸಂಜೆ 4 ಗಂಟೆಗೆ ವಾಜಪೇಯಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ.

ಬಿಜೆಪಿ ಕೇಂದ್ರ ಕಚೇರಿ, ದೆಹಲಿ, 2.03 PM: ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್​ ಯಾದವ್​ ಅವರು ಅಂತಿಮ ಗೌರವ ಸಮರ್ಪಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್​ ಷಾ ಅವರೂ ಉಪಸ್ಥಿತರಿದ್ದರು.

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರೊಂದಿಗಿನ ಹಳೆ ನೆನಪುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಲುಕು ಹಾಕಿದ್ದಾರೆ.  ತಮ್ಮ ವೆಬ್​ಸೈಟ್​ನಲ್ಲಿ ” ಮೇರೆ ಅಟಲ್​ ಜಿ” ಎಂಬ ಶೀರ್ಷಿಕೆಯಡಿ ತಮ್ಮ ಒಡನಾಟದ ಕುರಿತು ಬರೆದುಕೊಂಡಿದ್ದಾರೆ. ಅದನ್ನು ಓದಲು ಈ ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ.

ಬಿಜೆಪಿ ಕೇಂದ್ರ ಕಚೇರಿ, ದೆಹಲಿ, 1.48 PM: ಭೂತನ್​ನ ದೊರೆ ಜಿಗ್ಮೆ ಕೇಸರ್​ ನಮ್​ಗ್ಯೇಲ್​ ವಾಂಗ್​ಚುಕ್​ ಅವರು ದೆಹಲಿಯ ದೀನ್​ ದಯಾಳ್​ ಉಪಾಧ್ಯಾಯ ಮಾರ್ಗ್​ನಲ್ಲಿರುವ  ಬಿಜೆಪಿ ಕೇಂದ್ರ ಕಚೇರಿಗೆ ಶುಕ್ರವಾರ ಆಗಮಿಸಿ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​, ಬಿಜೆಪಿ ಅಧ್ಯಕ್ಷ ಅಮಿತ್​ ಷಾ ಉಪಸ್ಥಿತರಿದ್ದರು.

ದೆಹಲಿ, 1.28 PM: ಅವರು ಪ್ರಧಾನಮಂತ್ರಿಯಾಗಿದ್ದಾಗ ನಾನು ಅವರೊಂದಿಗೆ 6 ವರ್ಷ ಕೆಲಸ ಮಾಡಿದ್ದೆ. ಅವರು ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಕಾಶ್ಮೀರ ಸಮಸ್ಯೆಯನ್ನು ನಾನು ಸಂವಿಧಾನದ ಬದಲಿಗೆ ಮಾನವೀಯತೆಯ ಚೌಕಟ್ಟಿನಲ್ಲಿ ಪರಿಹರಿಸುತ್ತೇನೆ ಎಂದು ಹೇಳಿದ್ದರು. ಅವರ ಈ ಮಾತು ಕಾಶ್ಮೀರದ ನಾಗರಿಕರ ಮನಸ್ಸು ಗೆದ್ದಿತ್ತು ಎಂದು ವಾಜಪೇಯಿ ಅವರ ಬಗ್ಗೆ ಅವರ ಒಂದು ಕಾಲದ ಆಪ್ತ, ಬರಹಗಾರ ಸುದೀಂದ್ರ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿ, 1.07 PM: ವಾಜಪೇಯಿ ಅವರ ಅಂತಿಮ ಅಂತಿಮ ದರ್ಶನಕ್ಕಾಗಿ ಶ್ರೀಲಂಕಾದ ಹಂಗಾಮಿ ವಿದೇಶಾಂಗ ಸಚಿವ ಲಕ್ಷ್ಮಣ್​ ಕಿರೆಲ್ಲ ದೆಹಲಿಗೆ ಆಗಮಿಸಿದರು.

ದೆಹಲಿ, 12.54 PM: ರಾಜಕೀಯ ತತ್ವ ಸಿದ್ಧಾಂತಗಳಿಗಾಗಿ ಮತ್ತು ವ್ಯತ್ಯಾಸಗಳಿಗಾಗಿ ಅಟಲ್​ ಬಿಹಾರಿ ವಾಜಪೇಯಿ ಅವರು ಮಾನವೀಯತೆಯನ್ನು ಬಿಟ್ಟವರಲ್ಲ. ಅವರು ಪಾಲಿಸಿದ ತತ್ವ ಇಂದು ಭಾರತಕ್ಕೆ ಬಹುವಾಗಿ ಬೇಕಿದೆ ಎಂದು ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಸೀತಾರಮ್​ ಯಚೂರಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿ, ದೆಹಲಿ, 12.48 PM: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​, ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ, ಎಎಪಿ ಸಂಸದ ಸಂಜಯ್​ ಸಿಂಗ್​ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ದೆಹಲಿ, 12.40 PM: ಬಾಂಗ್ಲಾ ಯುದ್ಧ ವಿಮೋಚನೆಗಾಗಿ ವಾಜಪೇಯಿ ಅವರು ನೀಡಿದ ಕೊಡುಗೆಗಾಗಿ ನಾವು ಅವರನ್ನು ಸ್ಮರಿಸುತ್ತೇವೆ. ಅವರು ಬಾಂಗ್ಲಾ ಜನರ ಪ್ರಬಲ ಬೆಂಬಲಿಗರಾಗಿದ್ದರು. ಬೆಂಗಾಳಿ ಸಂಗೀತಕ್ಕೆ ಮನಸೋತಿದ್ದರು. ನಾನು ಬಾಂಗ್ಲಾದೇಶದ ರಾಜತಾಂತ್ರಿಕ ಅಧಿಕಾರಿಯಾಗಿ ದೆಹಲಿಯಲ್ಲಿ ಕಾರ್ಯನಿರ್ವಹಿಸುವಾಗ ಅವರು ವಿದೇಶಾಂಗ ಮಂತ್ರಿಯಾಗಿದ್ದರು ಎಂದು ಬಾಂಗ್ಲಾ ದೇಶದ ವಿದೇಶಾಂಗ ಸಚಿವ ಅಬು ಹಸನ್​ ಮೊಹಮದ್​ ಅಲಿ ಸ್ಮರಿಸಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿ ದೆಹಲಿ, 12.40 PM: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌವ್ಹಾಣ್​ ಅವರಿಂದ ಅಂತಿಮ ಗೌರವ ಸಲ್ಲಿಕೆ.

ಬಿಜೆಪಿ ಕೇಂದ್ರ ಕಚೇರಿ ದೆಹಲಿ, 12.40 PM: ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ದೆಹಲಿಯ ಬಿಜೆಪಿಯ ಕೇಂದ್ರ ಕಚೇರಿಗೆ ತೆರಳಿ ವಾಜಪೇಯಿ ಅವರಿಗೆ ನಮನ ಸಲ್ಲಿಸಿದರು.

ದೆಹಲಿ, 12.33 PM: ನಾನು ಒಂದೇ ಒಂದು ಬಾರಿ 2006ರಲ್ಲಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ದೆ. ಅವರು ಅದ್ಭುತ ವಾಗ್ಮಿ. ಭಾರತದ ರಾಜಕಾರಣದಲ್ಲಿ ಅವರ ಅಗಲಿಕೆಯಿಂದ ಉಂಟಾಗಿರುವ ನಷ್ಟವನ್ನು ಯಾರೂ ತುಂಬಲಾಗದು. ತಮ್ಮ ಕವಿತೆಗಳು, ಭಾಷಣಗಳು ಮತ್ತು ಮಾತಿನಿಂದ ಎಲ್ಲರಿಗೂ ಪ್ರೇರಣೆಯಾಗಿದ್ದರು. ಅವರದ್ದು ಮಾದರಿ ವ್ಯಕ್ತಿತ್ವ ಎಂದು ಬಾಲಿವುಡ್​ ಚಿತ್ರ ನಿರ್ಮಾಪಕ ಮಧುರ್​ ಭಂಡಾರ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ, 12.21 PM: ಅಟಲ್​ಜೀ ಅಂತಿಮ ದರ್ಶನ ಪಡೆಯಲೆಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬುಲ್​ ಹಸನ್​ ಮಹಮದ್​ ಅಲಿ ಅವರು ದೆಹಲಿಗೆ ಆಗಮಿಸಿದ್ದಾರೆ.

ದೆಹಲಿ, 12.15 PM: ವಾಜಪೇಯಿ ಅವರ ಅಂತಿಮ ದರ್ಶನ ಪಡೆಯಲೆಂದು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್​ ಕುಮಾರ್​ ಗ್ಯಾವಾಲಿ ಅವರು ದೆಹಲಿಗೆ ಆಗಮಿಸಿದರು. ಕೆಲವೇ ಕ್ಷಣಗಳಲ್ಲಿ ಬಿಜೆಪಿ ಕಚೇರಿಗೆ ತೆರಳಲಿರುವ ಅವರು ಗೌರವ ಸಲ್ಲಿಸಲಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿ, ದೆಹಲಿ, 12.07 PM: ತಮ್ಮ ದೀರ್ಘ ಕಾಲದ ಒಡನಾಡಿ ವಾಜಪೇಯಿ ಅವರಿಗೆ ಮಾಜಿ ಉಪ ಪ್ರಧಾನ ಮಂತ್ರಿ ಲಾಲ್​ ಕೃಷ್ಣ ಆಡ್ವಾಣಿ ಅವರು ಅಂತಿಮ ನಮ ಸಲ್ಲಿಸಿದರು.

ದೆಹಲಿ: ಮಾಜಿ ಪ್ರಧಾನ ಮಂತ್ರಿ ಅಟಲ್​ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ದೆಹಲಿಯ ಕೃಷ್ಣ ಮೆನನ್​ ಮಾರ್ಗ​ದಲ್ಲಿರುವ ಅವರ ನಿವಾಸದಿಂದ ದೀನ್​ ದಯಾಳ್​ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಗೆ ಮೆರವಣಿಗೆಯ ಮೂಲಕ ಕರೆತರಲಾಯಿತು.

ಅದಾಗಲೇ ಬಿಜೆಪಿಯ ಕಾರ್ಯಾಲಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿಗೆ ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ನಮನ ಸಲ್ಲಿಸುವ ವೇಳೆ ಮೋದಿ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ಇದಾದ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರೂ ನಮನ ಸಲ್ಲಿಸಿದರು. ಸಚಿವ ಅನಂತ್​ ಕುಮಾರ್​ ಅವರು ದುಃಖ ತಾಳದೆ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

ಇದಾದ ನಂತರ, ಕೇಂದ್ರ ಸಚಿವ ಸುರೇಶ್​ ಪ್ರಭು, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್​ ಮಾಧವ್​, ಡಿಎಂಕೆ ಮುಖಂಡ ಎ. ರಾಜಾ, ಅಸ್ಸಾಮ್​ ಮುಖ್ಯಮಂತ್ರಿ ಸರಬಾನಂದ ಸೋನೇವಾಲ್​ ಮತ್ತು ಮಣಿಪುರದ ಮುಖ್ಯಮಂತ್ರಿ ಬಿರೇನ್​ ಸಿಂಗ್​, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​, ಚತ್ತೀಸ್​ಘಡದ ಮುಖ್ಯಮಂತ್ರಿ ರಮಣ್​ ಸಿಂಗ್​ ಅವರೂ ಕೂಡ ಗೌರವ ಸಲ್ಲಿಸಿದರು.

ಭೂತನ್​ನ ರಾಜ ಜಿಗ್ಮೆ ಕೇಸರ್​ ನಮ್​ಗ್ಯೇಲ್​ ವಾಂಗ್​ಚುಕ್​ ಅವರು ಈಗಷ್ಟೇ ದೆಹಲಿಗೆ ಆಗಮಿಸಿದ್ದು, ನಂತರ ಅವರು ಬಿಜೆಪಿ ಕಾರ್ಯಾಲಯಕ್ಕೆ ತೆರಳಿ ಅಂತಿಮ ದರ್ಶನ ಪಡೆಯಲಿದ್ದಾರೆ.

ವಾಜಪೇಯಿ ಅವರಿಗೆ ಗಣ್ಯರ ಅಂತಿಮ ನಮನ

ಇದನ್ನೂ ಓದಿ

  1.  ಬಿಜೆಪಿ ಕಚೇರಿಯತ್ತ ಅಟಲ್​ ಬಿಹಾರಿ ವಾಪೇಯಿ ಪಾರ್ಥಿವ ಶರೀರ
  2.  ನನ್ನ ತಂದೆ, ಗುರುವನ್ನು ಕಳೆದುಕೊಂಡಿದ್ದೇನೆಂದು ಕಣ್ಣೀರು ಹಾಕಿದ ಮೋದಿ
  3.  ವಾಜಪೇಯಿಗೆ ತಂದೆಯೇ ಕ್ಲಾಸ್​ಮೇಟ್​! ಒಂದೇ ತರಗತಿಯಲ್ಲಿ ಪಾಠ, ಒಂದೇ ಹಾಸ್ಟೆಲ್​ನಲ್ಲಿ ವಾಸ
  4.  ಇಂದು ಸಂಜೆ ಸ್ಮೃತಿ ಸ್ಥಳದಲ್ಲಿ ವಾಜಪೇಯಿ ಅಂತ್ಯಕ್ರಿಯೆ: ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನ

Leave a Reply

Your email address will not be published. Required fields are marked *

Back To Top