ಹೂವಿನಹಿಪ್ಪರಗಿ: ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಸಕರು ಬದ್ಧರಾಗಿದ್ದಾರೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲರ ಸಹೋದರ ಸಚಿನಗೌಡ ಪಾಟೀಲ ಹೇಳಿದರು.

ಸಮೀಪದ ದಿಂಡವಾರದಲ್ಲಿ ಬುಧವಾರ ಕರ್ನಾಟಕ ರೂರಲ್ ಇನ್‌ರ್ಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿ. ವತಿಯಿಂದ 2024/25ನೇ ಪ್ರಗತಿ ಕಾಲನಿ ಯೋಜನೆಯಡಿ 1.50 ಕೋಟಿ ರೂ.ಗಳಲ್ಲಿ ಕೈಗೊಂಡ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿರೋಧ ಪಕ್ಷದಲ್ಲಿ ಶಾಸಕರು ಇರುವುದರಿಂದ ಅಭಿವೃದ್ಧಿಯಲ್ಲಿ ಸ್ವಲ್ಪಮಟ್ಟಿಗೆ ಕುಂಠಿತವಾಗಿರಬಹುದು. ಆದರೆ, ಶಾಸಕರು ಮನೆಯಲ್ಲಿ ಕುಳಿತುಕೊಳ್ಳದೆ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ನಮ್ಮ ಮತಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಈಗಾಗಲೇ ಮತಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಸೋಮಶೇಖರ ಜೋಗಿ, ಶ್ರೀಮಂತ ಜೋಗಿ, ವಿಕಾಸ ಜೋಗಿ, ಮಾಳಪ್ಪ ಜೈನಾಪೂರ, ಸಿದ್ರಾಮ ಮುಳಸಾವಳಗಿ, ಹಣಮಂತ ಮಾದರ, ಪರಶುರಾಮ ಪಡಸಲಗಿ, ಮಲ್ಲಿಕಾರ್ಜುನ ಹಾಲಚಟ್ಟಿ, ಸಿದ್ದನಗೌಡ ಪಾಟೀಲ, ಚಿದಾನಂದ ಹೂಗಾರ, ಮುದಕಪ್ಪ ಹಾಲಚಟ್ಟಿ, ಬಸವರಾಜ ನೆಗಿನಾಳ, ಮಲ್ಲಪ್ಪ ನೆಗಿನಾಳ, ಶಿವಾನಂದ ಜೋಗಿ, ರಾಜು ದಿಂಡವಾರ ಇತರರಿದ್ದರು.