More

    ಕಾಂಗ್ರೆಸ್ಸಿಗರಿಗೆ ರಾಷ್ಟ್ರಧರ್ಮ ಪಾಲನೆ ಮಾಡಲು ಸಾಧ್ಯವಾಗದೆ ಇದ್ದರೆ, ವಿಪಕ್ಷ ಧರ್ಮವನ್ನಾದರೂ ಸರಿಯಾಗಿ ಪಾಲಿಸಲಿ: ರಕ್ಷಣಾ ಸಚಿವ ರಾಜನಾಥ್​ ಸಿಂಗ್​

    ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯಾಗಿ ಜಾರಿಗೆ ಬಂದಿದೆ. ಆದರೆ ಇಂತಹ ಕಾಯ್ದೆಯನ್ನು ವಿರೋಧಿಸುತ್ತಿರುವುದು ದೊಡ್ಡ ದುರಂತ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದರು.

    ಇಂದು ಮಂಗಳೂರಿನಲ್ಲಿ ನಡೆದ ಸಿಎಎ ಪರ ಸಮಾವೇಶದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿರುವ ಹಿಂದು, ಸಿಖ್​, ಪಾರ್ಸಿಗಳಿಗೆ ಪೌರತ್ವ ನೀಡಲು ಗಾಂಧೀಜಿ, ನೆಹರೂ ಕೂಡ ಹೇಳಿದ್ದರು. ಕಾಂಗ್ರೆಸ್ ನಾಯಕ ಮನಮೋಹನ್​ ಸಿಂಗ್ ಕೂಡ ಇದೇ ಮಾತನ್ನು ಉಲ್ಲೇಖಿಸಿದ್ದರು. ಆದರೆ ಈಗ ವೃಥಾ ವಿರೋಧ ಏಕೆ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್​ನವರಿಗೆ ರಾಷ್ಟ್ರಧರ್ಮ ಪಾಲನೆ ಮಾಡಲು ಸಾಧ್ಯವಾಗದೆ ಇದ್ದರೆ ವಿಪಕ್ಷ ಧರ್ಮವನ್ನಾದರೂ ಅವರು ಪಾಲನೆ ಮಾಡಲಿ. ಈ ಬಗ್ಗೆ ನಾನು ಸೋನಿಯಾ ಗಾಂಧಿಯವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳು ಮುಸ್ಲಿಂ ರಾಷ್ಟ್ರಗಳು. ಅವು ಸೆಕ್ಯುಲರ್​ ಅಲ್ಲ. ಅವರಿಗೆ ಧರ್ಮವೇ ಸಂವಿಧಾನ. ಆದರೆ ಜಾತ್ಯತೀತ ರಾಷ್ಟ್ರದಲ್ಲಿ ಯಾವುದೇ ಅಲ್ಪಸಂಖ್ಯಾತನಿಗೂ ಕಿರುಕುಳ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.
    ಜನಗಣತಿಗಾಗಿ ಎನ್​ಪಿಆರ್ ಮಾಡುವುದು ಹೇಗೆ ತಪ್ಪಾಗುತ್ತದೆ? ಇದರಿಂದ ಭಾರತೀಯ ಒಬ್ಬೇಒಬ್ಬ ಮುಸ್ಲಿಮನಿಗೆ ತೊಂದರೆಯಾದರೆ ನಮ್ಮ ಸರ್ಕಾರ ಹೊಣೆ. ಈ ಬಗ್ಗೆ ಬಿಜೆಪಿ ಮುಸ್ಲಿಮರಿಗೆ ಆಶ್ವಾಸನೆ ಕೊಡುತ್ತದೆ ಎಂದು ರಾಜನಾಥ್ ಸಿಂಗ್​ ತಿಳಿಸಿದರು.

    ನಮ್ಮ ಪ್ರಧಾನಮಂತ್ರಿಯವರು ಇಷ್ಟೊಂದು ಯೋಜನೆ ಜಾರಿ ಮಾಡಿದ್ದಾರೆ. ಒಂದು ಯೋಜನೆಯಲ್ಲಿಯಾದರೂ ಹಿಂದು, ಮುಸ್ಲಿಂ ಭೇದ ಮಾಡಿದ್ದಾರೆಯೇ? ಆಯುಷ್ಮಾನ್​ ಭಾರತ್ ಯೋಜನೆಯಲ್ಲಿ 50 ಲಕ್ಷ ಮಂದಿ ಲಾಭ ಪಡೆದಿದ್ದಾರೆ. ಅದರಲ್ಲಿ ಹಿಂದು-ಮುಸ್ಲಿಂ ಭೇದ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

    ಪಾಕಿಸ್ತಾನದಿಂದ ಬರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು 1949ರಲ್ಲಿ ಕಾಂಗ್ರೆಸ್​ ವರ್ಕಿಂಗ್ ಕಮಿಟಿ ನಿರ್ಣಯ ಮಾಡಿತ್ತು. ತಮ್ಮದೇ ಪಕ್ಷದ ಹಿರಿಯರು ನೀಡಿದ್ದ ಸೂಚನೆಗೆ ಕಾಂಗ್ರೆಸ್​ ನಾಯಕರು ಈಗೇನು ಹೇಳುತ್ತಾರೆ ಎಂದು ಹೇಳಿದ ರಕ್ಷಣಾ ಸಚಿವರು, ಭಾರತದಲ್ಲಿ ಹಿಂದು-ಮುಸ್ಲಿಂ ಭೇದ ಇರಬಾರದು. ಮುಸ್ಲಿಂ ಸಮಾಜದಲ್ಲಿನ ಭಯವನ್ನು ನಿವಾರಿಸಬೇಕು. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts