PHTOS: ಶ್ರದ್ಧಾ ಭಕ್ತಿಯಿಂದ ಏಸು ಕ್ರಿಸ್ತನ ಸ್ಮರಣೆ; ಜಗತ್ತಿನಾದ್ಯಂತ ಗುಡ್​ ಫ್ರೈಡೆ ಆಚರಣೆ

ಏಸು ಕ್ರಿಸ್ತನ ಮರಣದ ದಿನವನ್ನು ಸ್ಮರಿಸುವ ಗುಡ್​ಪ್ರೈಡೆಯನ್ನು ಕ್ರೈಸ್ತ ಸಮುದಾಯದವರು ಇಂದು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶುಭ ಶುಕ್ರವಾರ ಕ್ರೈಸ್ತರಿಗೆ ಒಂದು ಪವಿತ್ರವಾದ ದಿನವಾಗಿದ್ದು ಕ್ರಿಸ್ಮಸ್ ಏಸುಕ್ರಿಸ್ತನ ಜನನವನ್ನು ಸೂಚಿಸುವಂತೆ, ಶುಭ ಶುಕ್ರವಾರ ಏಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಶುಭ ಶುಕ್ರವಾರದಂದು ಹಲವೆಡೆ ಕ್ರಿಸ್ತನನ್ನು ಶಿಲುಬೆಗೇರಿಸಿದ ಯಾತನೆಯ ವಿವಿಧ ರೂಪಗಳ ಚಿತ್ರಪಟ ರೂಪಗಳನ್ನು ಬಳಸಿ ಕ್ರೈಸ್ತ ಸಮುದಾಯವದರು ಏಸುವನ್ನು ಧ್ಯಾನಿಸಿದರು.