ಲಂಡನ್​ ಮೂಲದ ಮಹಿಳೆ ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ! ರಾಜಕೀಯವನ್ನು ದ್ವೇಷಿಸುವವರು ನನ್ನೊಂದಿಗಿರಿ ಎಂದ ಮಹಿಳೆ

ಪಾಟ್ನಾ: ಲಂಡನ್​ ಮೂಲದ ಮಹಿಳೆಯೊಬ್ಬರು ಬಿಹಾರದ ರಾಜಕೀಯದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇದೇ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ತಾನು ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಆಕೆ ಹೇಳಿಕೊಂಡಿದ್ದಾರೆ. ಲಂಡನ್​ನಲ್ಲಿ ವಾಸವಿರುವ ಪುಷ್ಪಮ್​ ಪ್ರಿಯಾ ಚೌಧರಿ ಇಂತದ್ದೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಶ್ವ ಮಹಿಳಾ ದಿನಾಚರಣೆಯ ದಿನದಂದು (ಮಾ.8) ಅನೇಕ ರಾಷ್ಟ್ರೀಯ ಪತ್ರಿಕೆಗಳಲ್ಲಿ ತಾನು ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಜಾಹಿರಾತನ್ನು ಪ್ರಿಯಾ ಚೌಧರಿ ನೀಡಿದ್ದಾರೆ. ಈಕೆ ಜನತಾದಳ ಯುನೈಟೆಡ್​ನ ಮಾಜಿ ಎಮ್​ಎಲ್​ಸಿ ವಿನೋಧ್​ ಚೌಧರಿಯವರ ಮಗಳು ಎನ್ನುವುದು … Continue reading ಲಂಡನ್​ ಮೂಲದ ಮಹಿಳೆ ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ! ರಾಜಕೀಯವನ್ನು ದ್ವೇಷಿಸುವವರು ನನ್ನೊಂದಿಗಿರಿ ಎಂದ ಮಹಿಳೆ