PHOTOS | ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ, ನಾನಾ ಪಕ್ಷದ ಅಭ್ಯರ್ಥಿಗಳು, ಮುಖಂಡರಿಂದ ಅಬ್ಬರದ ಪ್ರಚಾರ

ನವದೆಹಲಿ: 2019ರ ಲೋಕಸಭಾ ಚುನಾವಣೆಯ ಏಳನೇ, ಕೊನೆಯ ಹಂತದ ಮತದಾನ ಮೇ 19ರಂದು ನಡೆಯಲಿದೆ. ಶುಕ್ರವಾರ ಬಹಿರಂಗ ಪ್ರಚಾರ ಮಾಡಲು ಕಡೆಯ ದಿನವಾಗಿದ್ದರಿಂದ ನಾನಾ ಪಕ್ಷಗಳ ಪ್ರಮುಖ ಮುಖಂಡರು ತಮ್ಮ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿದರು. ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಮಿರ್ಜಾಪುರದಲ್ಲಿ ತಮ್ಮ ಅಭ್ಯರ್ಥಿ ಲಲಿತೇಶ್​ ತ್ರಿಪಾಟಿ ಪರ ಅಬ್ಬರದ ಪ್ರಚಾರ ನಡೆಸಿದರು. ಪಂಜಾಬ್​ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಟಿಯಾಲ ಕ್ಷೇತ್ರದ ಅಭ್ಯರ್ಥಿ ಪ್ರನೀತ್ ಕೌರ್ ಪರ, ದೆಹಲಿಯ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ತಮ್ಮ ಆಮ್​ ಆದ್ಮಿ ಪಾರ್ಟಿಯ ಅಭ್ಯರ್ಥಿ ನೀನಾ ಮಿತ್ತಲ್ ಪರ ಪ್ರಚಾರ ನಡೆಸಿದರು. ಪಂಜಾಬ್​ನ ಬಥಿಂಡಾದಲ್ಲಿ ಸಚಿವ ನವಜೋತ್​ ಸಿಂಗ್ ಸಿದ್ದು, ಮನ್ಪ್ರೀತ್ ಸಿಂಗ್ ಬಾದಲ್ ತಮ್ಮ ಅಭ್ಯರ್ಥಿ ಅಮರೀಂದರ್ ಸಿಂಗ್ ರಾಜಾ ವಾರಿಂಗ್ ಪರ ಹಾಗೂ ಗುರುದಾಸ್​ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಪಕ್ಷದ ಬೆಂಬಲಿಗರೊಂದಿಗೆ ಚುನಾವಣಾ ಪ್ರಚಾರ ನಡೆಸಿದರು. ಕೋಲ್ಕತದಲ್ಲಿ ಸಿಆರ್​ಪಿಎಫ್ ​ಯೋಧರು ಪಥಸಂಚಲನ ನಡೆಸಿದರು.