ಈ ಫೋಟೋದಲ್ಲಿರುವ ಹುಡುಗ ಯಾರೆಂದು ಗುರುತಿಸುವಿರಾ? ಕನ್ನಡ ಚಿತ್ರರಂಗದ ಸ್ಟಾರ್​ ಹೀರೋ ಈತ!

Upendra

ಬೆಂಗಳೂರು: ಈ ಮೇಲಿನ ಫೋಟೋದಲ್ಲಿ ಎನ್‌ಸಿಸಿ ಡ್ರೆಸ್‌ನಲ್ಲಿರುವ ಹುಡುಗ ಯಾರು ಗೊತ್ತಾ? ಇಂದು ಪ್ಯಾನ್ ಇಂಡಿಯನ್ ಲೆವೆಲ್ ಕ್ರೇಜ್ ಹೊಂದಿರುವ ಹೀರೋ ಈತ. ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಅಬ್ಬರಿಸಿದ್ದಾರೆ. ನಿರ್ದೇಶನದಲ್ಲೂ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ನಟನೆಗೆ ಮಾತ್ರವಲ್ಲ ಇವರ ನಿರ್ದೇಶನಕ್ಕೂ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ತಮ್ಮ ಸಿನಿಮಾದಲ್ಲಿ ವಾಸ್ತವ ಅಂಶಗಳನ್ನು ಬಿಚ್ಚಿಡುವ ಮೂಲಕ ಸಾಮಾಜಿಕ ಸಂದೇಶವನ್ನು ಸಾರುತ್ತಾರೆ. ಹೀಗಾಗಿ ಇವರನ್ನು ಭಾರತದ ಟಾಪ್​ ನಿರ್ದೇಶಕರಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ. ಇಷ್ಟೆಲ್ಲಾ ಹೇಳಿದ ಮೇಲೆ ಮೇಲಿನ ಫೋಟೋದಲ್ಲಿ ಇರುವುದು ಯಾರೆಂಬುದು ನಿಮಗೆ ಗೊತ್ತಾಗಿರುತ್ತದೆ. ಅವರು ಬೇರೆ ಯಾರು ಅಲ್ಲ ಸೂಪರ್​ ಸ್ಟಾರ್​ ಉಪೇಂದ್ರ.

ಉಪೇಂದ್ರ ಅವರು ಬಹುಮುಖ ಪ್ರತಿಭೆ. ನಟ ಮಾತ್ರವಲ್ಲ, ಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಹಿನ್ನೆಲೆ ಗಾಯಕ, ಸಾಹಿತಿ ಹಾಗೂ ರಾಜಕಾರಣಿಯೂ ಹೌದು. ಚಂದನವನದ ರಿಯಲ್​ ಸ್ಟಾರ್​ ಎಂದೇ ಖ್ಯಾತಿಯಾಗಿರುವ ಉಪೇಂದ್ರ ಇಂದು 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಇಂದು ಸಂಭ್ರಮದಲ್ಲಿ ಮುಳುಗಿದ್ದಾರೆ. ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಬರಹಗಾರನಾಗಿ ಬಂದು ಇಂದು ಸ್ಟಾರ್ ಹೀರೋ ಆಗಿ ಬೆಳೆದಿರುವ ರೀತಿ ನಿಜಕ್ಕೂ ಸ್ಫೂರ್ತಿ.

ಉಡುಪಿ ಜಿಲ್ಲೆಯಲ್ಲಿ ಜನಿಸಿದ ಉಪೇಂದ್ರ ಹಲವು ಸಂಕಷ್ಟಗಳನ್ನು ಎದುರಿಸಿ, ಚಿತ್ರರಂಗದಲ್ಲಿ ಯಶಸ್ಸು ಸಾಧಿಸಿ, ಗಟ್ಟಿಯಾಗಿ ನೆಲೆಯೂರಿದರು. ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಉಪ್ಪಿ, ಕಾಲೇಜು ದಿನಗಳಿಂದಲೂ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ನಂತರ ಸಿನಿಮಾಗಳ ಮೇಲೆ ಆಸಕ್ತಿ ಹುಟ್ಟಿಕೊಂಡು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಬರಹಗಾರರಾಗಿ ಸೇರಿ ಸಹಾಯಕ ನಿರ್ದೇಶಕರಾದರು. ಅಲ್ಲದೆ, ಅತಿಥಿ ಪಾತ್ರಗಳನ್ನು ಸಹ ಮಾಡಿದರು.

ಶ್ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾದರು. ಅಲ್ಲದೆ, ಈ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕೂಡ ನಟಿಸಿದರು. ದಿನಗಳು ಕಳೆದಂತೆ ಹೀರೋ ಆಗಿ ತಮ್ಮದೇ ನಿರ್ದೇಶನದಲ್ಲಿ ಸಿನಿಮಾ ಮಾಡಿದರು. ಎ, ಉಪೇಂದ್ರ ಮುಂತಾದ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಮಾತ್ರವಲ್ಲದೇ ಉಪೇಂದ್ರ ಅವರನ್ನು ಸ್ಟಾರ್ ಹೀರೋ ಮಾಡಿತು. ಅಲ್ಲಿಂದ ನಿರ್ದೇಶನದ ಬದಲು ನಟನಾಗಿ ತಮ್ಮ ಗಮನವನ್ನು ಹೆಚ್ಚಿಸಿಕೊಂಡರು.

ನಟನಾಗಿ ಕನ್ನಡದಲ್ಲಿ ಬಿಜಿಯಾದ ಉಪೇಂದ್ರ, ತೆಲುಗಿನಲ್ಲೂ ವಿಲನ್​ ಆಗಿ ನಟಿಸಲು ಆರಂಭಿಸಿದರು. ಸದ್ಯ ಸೂಪರ್​ಸ್ಟಾರ್​ ರಜಿನಿಕಾಂತ್​ ಅಭಿನಯದ ಕೂಲಿ ಚಿತ್ರದಲ್ಲಿ ಉಪೇಂದ್ರ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಮೂರು ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ UI ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರ ಇದೇ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಅನೇಕ ವರ್ಷಗಳ ಬಳಿಕ ಯುಐ ಸಿನಿಮಾ ಮೂಲಕ ಉಪ್ಪಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನವೇ ಬಿಗ್​ ಸರ್ಪ್ರೈಸ್​ ಕೊಟ್ಟ ಗೌತಮ್​ ಗಂಭೀರ್-ವಿರಾಟ್​ ಕೊಹ್ಲಿ!​

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…