ಮುರುಘಾ ಮಠದಲ್ಲಿ ಗ್ರಂಥಾಲಯ ಶಾಖೆ ಆರಂಭ

ಚಿತ್ರದುರ್ಗ: ಶ್ರೀ ಮುರುಘಾ ಮಠದ ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯ ಶಾಖೆಗೆ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ಸೋಮವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಭಕ್ತಿ ಭಂಡಾರ,ಉತ್ತಮ ಪರಿಸರ ವಾತಾವರಣದಲ್ಲಿ ಜ್ಞಾನ ಭಂಡಾರವೂ ಸ್ಥಾಪನೆಯಾಗಿದೆ. ಪುಸ್ತಕದಿಂದ ಮಸ್ತಕ ಬೆಳೆಯುತ್ತದೆ.

ಜ್ಞಾನರ್ಜನೆಗೆ ಗ್ರಂಥಗಳ ಅಧ್ಯಯನ ಅಗತ್ಯವಿದೆ. ಅಪರಾಧ, ಜೈಲುಗಳ ಸಂಖ್ಯೆ ಕಡಿಮೆ ಆಗ ಬೇಕು ಎಂದಾರೆ ಶಾಲಾ, ಕಾಲೇಜು ಹೆಚ್ಚಾಗಬೇಕು. ಮೂಢನಂಬಿಕೆ, ಅವಮಾನವೀಯ ನಡುವಳಿಕೆ ನಿಯಂತ್ರಣಕ್ಕೆ ಗ್ರಂಥಾಲಯಗಳ ಸಂಖ್ಯೆ ಹೆಚ್ಚಾಗ ಬೇಕೆಂದರು. ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆ ಆಗಿದೆ ಎಂದು ವಿಷಾದಿಸಿದರು.

ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ,ಇ ಪುಸ್ತಕಗಳಿದ್ದರೂ,ಪುಸ್ತಕಗಳ ಮಹ್ವತ ಕಡಿಮೆ ಆಗದು. ಪುಸ್ತಕಗಳನ್ನು ಓದುವ ಮೂಲಕ ವಿಷಯ ಗ್ರಹಿಕೆ ಸುಲಭ ಮತ್ತು ನೆನಪಿನಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ ಎಂದರು. ನಗರ ಮುಖ್ಯಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ, ನಗರ ಗ್ರಂಥಾಲಯ ಪ್ರಾಧಿಕಾರ ಸದಸ್ಯರಾದ ಪ್ರೊ.ನಿಂಗಪ್ಪ, ಪ್ರತಾಪ್ ಜೋಗಿ ಇದ್ದರು.